ಅಂತರಾಷ್ಟ್ರೀಯ ಕ್ರಿಕೆಟ್ ಅಂಪೈರಿಂಗ್‌ನಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಇಂಗ್ಲೆಂಡ್ ಮೂಲದ 61 ವರ್ಷದ ಇಯಾನ್ ಗೌಲ್ಡ್ ತಮ್ಮ ಅಂಪೈರಿಂಗ್ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಲೀಡ್ಸ್[ಜು.07]: ಭಾರತ-ಶ್ರೀಲಂಕಾ ಪಂದ್ಯದ ಮುಕ್ತಾಯದ ಬಳಿಕ ಇಂಗ್ಲೆಂಡ್ ಅಂಪೈರ್ ಇಯಾನ್ ಗೌಲ್ಡ್ ನಿವೃತ್ತಿ ಘೋಷಿಸಲಿದ್ದಾರೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಖಚಿತಪಡಿಸಿದೆ.
ವಿಶ್ವಕಪ್ 2019: ಹೊಸ ದಾಖಲೆ ಬರೆದ ಅಫ್ರಿದಿ..!
ಇಂಗ್ಲೆಂಡ್ ಮೂಲದ ಗೌಲ್ಡ್ ತಮ್ಮ ವೃತ್ತಿ ಜೀವನದಲ್ಲಿ 74 ಟೆಸ್ಟ್ ಹಾಗೂ 740 ಏಕದಿನ ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಈ ವಿಶ್ವಕಪ್ ಸೇರಿದಂತೆ ಒಟ್ಟಾರೆ 4ನೇ ಏಕದಿನ ವಿಶ್ವಕಪ್‌ನಲ್ಲಿ ಗೌಲ್ಡ್ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದಾರೆ.
2011ರ ಏಕದಿನ ವಿಶ್ವಕಪ್ ಟೂರ್ನಿಯ ಇಂಡೋ-ಪಾಕ್ ಸೆಮಿಫೈನಲ್ ಪಂದ್ಯದಲ್ಲೂ ಅಂಪೈರ್ ಆಗಿ ಕಾರ್ಯ ನಿರ್ವಹಿಸಿದ ಹಿರಿಮೆ ಗೌಲ್ಡ್’ಗಿದೆ. ಇನ್ನು ಮೂಲತಃ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಆಗಿದ್ದ ಗೌಲ್ಡ್ ಇಂಗ್ಲೆಂಡ್ ಪರ 18 ಏಕದಿನ ಪಂದ್ಯಗಳನ್ನು ಆಡಿದ್ದರು. ಅಲ್ಲದೇ 1983ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸಿದ್ದರು. ಇದಷ್ಟೇ ಅಲ್ಲದೇ ಪ್ರಥಮ ದರ್ಜೆ ಹಾಗೂ ಲಿಸ್ಟ್ ಎ ಕ್ರಿಕೆಟ್’ನಲ್ಲಿ 600ಕ್ಕೂ ಹೆಚ್ಚು ಪಂದ್ಯಗಳನ್ನಾಡಿದ ಹಿರಿಮೆ ಗೌಲ್ಡ್’ಗಿದೆ.