ಆತಿಥೇಯ ಇಂಗ್ಲೆಂಡ್‌ಗೆ ಆಫ್ಘನ್ನರ ಚಾಲೆಂಜ್

By Web DeskFirst Published Jun 18, 2019, 1:43 PM IST
Highlights

ವಿಶ್ವಕಪ್ ಟೂರ್ನಿಯಲ್ಲಿಂದು ಆತಿಥೇಯ ಇಂಗ್ಲೆಂಡ್ ಹಾಗೂ ಆಫ್ಘಾನಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿವೆ. ಟೂರ್ನಿಯಲ್ಲಿ ಇದುವರೆಗೂ ಗೆಲುವಿನ ಮುಖ ನೋಡದ ಆಫ್ಘನ್ ಇಂದು ಆತಿಥೇಯರಿಗೆ ಶಾಕ್ ನೀಡುವ ಲೆಕ್ಕಾಚಾರದಲ್ಲಿದೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ.. 

ಮ್ಯಾಂಚೆಸ್ಟರ್[ಜೂ.18]: ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಮಂಗಳವಾರ ಆಫ್ಘಾನಿಸ್ತಾನ ವಿರುದ್ಧ ಸೆಣಸಲಿರುವ ಇಂಗ್ಲೆಂಡ್ ಸುಲಭ ಜಯದ ನಿರೀಕ್ಷೆಯಲ್ಲಿದ್ದು, ಈ ಪಂದ್ಯವನ್ನು ಗೆದ್ದು ಸೆಮಿಫೈನಲ್‌ಗೆ ಮತ್ತಷ್ಟು ಹತ್ತಿರ ತಲುಪುವ ಲೆಕ್ಕಾಚಾರದಲ್ಲಿದೆ. ಆದರೆ, ಈ ಪಂದ್ಯಕ್ಕೂ ವರುಣ ಅವಕೃಪೆ ತೋರಿದರೂ ಅಚ್ಚರಿಯಿಲ್ಲ. ಮಂಗಳವಾರ ಸಹ ಮೋಡ ಕವಿದ ವಾತಾವರಣವಿದ್ದು, ಮಳೆಯಾಗುವ ನಿರೀಕ್ಷೆಯಿದೆ.

ವೆಸ್ಟ್ ಇಂಡೀಸ್ ತಂಡಕ್ಕೂ ಸೋಲಿನ ಶಾಕ್ ನೀಡಿದ ಬಾಂಗ್ಲಾದೇಶ!

ಗೆಲ್ಲುವ ನೆಚ್ಚಿನ ತಂಡವಾಗಿದ್ದರೂ, ಗಾಯಾಳುಗಳ ಸಮಸ್ಯೆ ಆತಿಥೇಯರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ವಿಂಡೀಸ್ ವಿರುದ್ಧದ ಪಂದ್ಯದ ವೇಳೆ ಬೆನ್ನು ನೋವಿನ ಸಮಸ್ಯೆಯಿಂದ ನಾಯಕ ಮಾರ್ಗನ್ ಅರ್ಧದಲ್ಲೇ ನಿರ್ಗಮಿಸಿದ್ದರು, ಸ್ನಾಯು ಸೆಳೆತದ ಕಾರಣ ಜೇಸನ್ ರಾಯ್ ಕೂಡ ಇದೇ ಪಂದ್ಯದಲ್ಲಿ ಅಂಗಳ ತೊರೆದಿದ್ದರು. ಒಂದೊಮ್ಮೆ ಮಾರ್ಗನ್ ಚೇತರಿಸಿಕೊಳ್ಳದಿದ್ದರೆ, ಉಪ ನಾಯಕ ಜೋಸ್ ಬಟ್ಲರ್ ತಂಡವನ್ನು ಮುನ್ನಡೆಸಲಿದ್ದಾರೆ. 

ಏರ್‌ಸ್ಟ್ರೈಕ್ ಬಳಿಕ ಪಾಕ್‌ ಮೇಲೆ ಗ್ರೌಂಡ್‌ಸ್ಟ್ರೈಕ್ - ಚಿತ್ರಗಳಲ್ಲಿ ಭಾರತದ ವಿಜಯೋತ್ಸವ!

ಇತ್ತ ಪಂದ್ಯಾವಳಿಯಲ್ಲಿ ತಾನಾಡಿರುವ ನಾಲ್ಕೂ ಪಂದ್ಯಗಳಲ್ಲೂ ಸೋಲುಂಡಿರುವ ಗುಲ್ಬದೀನ್ ನಹಿಬ್ ಪಡೆ, ಬಲಿಷ್ಠ ಇಂಗ್ಲೆಂಡ್ಗೆ ತಿರುಗೇಟು ನೀಡುವ ಲೆಕ್ಕಾಚಾರದಲ್ಲಿದೆ. ಬ್ಯಾಟಿಂಗ್‌ಗಿಂತ ಬೌಲಿಂಗ್ ಮೇಲೆ ಆಫ್ಘನ್ನರಿಗೆ ಹೆಚ್ಚಿನ ಭರವಸೆ ಇದೆ. ಯಾವ ಕ್ಷಣದಲ್ಲಿ ಬೇಕಾದರೂ ಪುಟಿದೇಳಬಹುದು. ರಶೀದ್ ಖಾನ್ ಸ್ಪಿನ್ ಮೋಡಿ ಮಾಡಿದರೆ ಇಂಗ್ಲೆಂಡ್‌ಗೆ ಸಂಕಷ್ಟ ಎದುರಾಗಬಹುದು. ಪ್ರತಿಭಾನ್ವಿತ ಬ್ಯಾಟ್ಸ್‌ಮನ್‌ಗಳು, ಆಲ್ರೌಂಡರ್‌ಗಳು ಲಯಕ್ಕೆ ಮರಳಬೇಕಿದೆ

ಪಿಚ್ ರಿಪೋರ್ಟ್

ಓಲ್ಡ್ ಟ್ರಾಫರ್ಡ್ ಅಂಗಳ ಬ್ಯಾಟಿಂಗ್ ಸ್ನೇಹಿಯಾಗಿದ್ದು, ಪಾಕ್ ವಿರುದ್ಧ ನಡೆದ ಪಂದ್ಯದಲ್ಲಿ ಭಾರತದ ಬ್ಯಾಟ್ಸ್‌ಮನ್'ಗಳು ಅಬ್ಬರಿಸಿದ್ದೇ ಇದಕ್ಕೆ ಸಾಕ್ಷಿ. ಆದರೆ, ಸ್ಥಳೀಯ ವಾತಾವರಣ ವೇಗ ಹಾಗೂ ಸ್ವಿಂಗ್‌ಗೆ ಹೆಚ್ಚಿನ ನೆರವು ಇದೆ. ಈ ಹಿನ್ನೆ
ಲೆಯಲ್ಲಿ ಇಂದಿನ ಪಂದ್ಯದಲ್ಲಿ ಬೌಲರ್'ಗಳ ಮೇಲಾಟ ನಡೆದರೂ ಅಚ್ಚರಿ ಇಲ್ಲ

ಸಂಭವನೀಯ ಆಟಗಾರರು

ಇಂಗ್ಲೆಂಡ್: ಬೇರ್‌ಸ್ಟೋವ್, ವುಡ್, ರೂಟ್, ವೋಕ್ಸ್, ಸ್ಟೋಕ್ಸ್, ಅಲಿ, ಬಟ್ಲರ್, ಮಾರ್ಗನ್ (ನಾಯಕ), ಪ್ಲಂಕೆಟ್, ಜೋಫ್ರಾ, ರಶೀದ್.

ಆಫ್ಘಾನಿಸ್ತಾನ: ಹಜರತ್ತುಲ್ಲಾ, ನಬಿ, ನೂರ್, ರಹಮತ್, ಹಶ್ಮತ್ತುಲ್ಲಾ, ಗುಲ್ಬದಿನ್(ನಾಯಕ), ನಜೀಬುಲ್ಲಾ, ಇಕ್ರಮ್, ರಶೀದ್, ಅಫ್ತಾಭ್, ಹಸನ್.
 

click me!