ಇಂಡೋ-ಪಾಕ್ ಫೈಟ್: ಎಂಕ್ಲೆಗ್ ಸೆಂಚುರಿ ಬೋಡು- ರಾಹುಲ್‌ಗೆ ತುಳು ಭಾಷೆಯಲ್ಲಿ ಮನವಿ!

By Web Desk  |  First Published Jun 17, 2019, 8:28 PM IST

ಭಾರತ ಹಾಗೂ ಪಾಕಿಸ್ತಾನ ನಡುವಿನ  ಪಂದ್ಯದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಕೆಎಲ್ ರಾಹುಲ್‌ಗೆ ತುಳು ಭಾಷೆಯಲ್ಲಿ ಅಭಿಮಾನಿಗಳು ಮನವಿ ಮಾಡಿದ್ದಾರೆ. ಇದೀಗ ಈ ವೀಡಿಯೋ ವೈರಲ್ ಆಗಿದೆ. 


ಮ್ಯಾಂಚೆಸ್ಟರ್(ಜೂ.17): ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದ ಹಲವು ಸ್ಮರಣೀಯ ಘಟನೆಗಳಿಗೆ ಸಾಕ್ಷಿಯಾಗಿದೆ. ಒಂದೆಡೆ ರೋಹಿತ್ ಶರ್ಮಾ ಶತಕ, ಕನ್ನಡಿಗ ಕೆಎಲ್ ರಾಹುಲ್ ಅರ್ಧಶತಕ ಸೇರಿದಂತೆ ಹಲವು ಅವಿಸ್ಮರಣೀಯ ಇನ್ನಿಂಗ್ಸ್ ದಾಖಲಾಗಿದೆ. ಈ ಪಂದ್ಯ ವೇಳೆ ಮಂಗಳೂರಿಗರು ತುಳು ಭಾಷೆಯಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಕೆಎಲ್ ರಾಹುಲ್ ಬಳಿ ಮನವಿ ಮಾಡಿದ ವೀಡಿಯೋ ವೈರಲ್ ಆಗಿದೆ.

ಇದನ್ನೂ ಓದಿ: ಪಾಕ್ ವಿರುದ್ಧ ಭರ್ಜರಿ ಗೆಲವು-ಟ್ರೆಂಡ್ ಆಯ್ತು ಕೊಹ್ಲಿ ಸೈನ್ಯದ ಮಲ್ಹಾರಿ ಡ್ಯಾನ್ಸ್!

Tap to resize

Latest Videos

ಪಾಕಿಸ್ತಾನ ವಿರುದ್ಧದ ಪಂದ್ಯದ ವೇಳೆ ಬೌಂಡರಿ ಲೈನ್ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ಕೆಎಲ್ ರಾಹುಲ್ ಬಳಿ, ಮಂಗಳೂರಿನ ಅಭಿಮಾನಿಗಳು ತುಳಿನಲ್ಲೇ ಮಾತನಾಡಿದ್ದಾರೆ. ರಾಹುಲ್ ಎಂಕ್ಲೆಗ್ ಸೆಂಚುರಿ ಬೋಡು, ರಾಹುಲ್ ಎಂಚ ಉಲ್ಲಾರ್. ಎಂಕ್ಲ್ ಕುಡ್ಲಡ್ದ್ ಬೈದ.(ರಾಹುಲ್ ನಮಗೆ ಶತಕ ಬೇಕು,  ಹೇಗಿದ್ದೀರಾ ರಾಹುಲ್, ನಾವು ಮಂಗಳೂರಿನಿಂದ ಬಂದಿದ್ದೇವೆ) ಎಂದು ಅಭಿಮಾನಿಗಳು ಮನವಿ ಮಾಡಿದ್ದಾರೆ.

"

ಇದನ್ನೂ ಓದಿ: ಪಾಕ್ ಮಣಿಸಿದ ಭಾರತ, ವೀರ ಯೋಧರ ಸಂಭ್ರಮ ಹೀಗಿತ್ತು

ಮಂಗಳೂರು ಅಭಿಮಾನಿಗಳ ಮಾತಿಗೆ ಕೈಸನ್ನೆ ಮೂಲಕ ರಾಹುಲ್ ಉತ್ತರಿಸಿದ್ದಾರೆ. ತಾಳ್ಮೆಯಿಂದ ಇರಲು ಸೂಚಿಸಿದ್ದಾರೆ. ಕೆಎಲ್ ರಾಹುಲ್ ಮೂಲತಃ ಮಂಗಳೂರು ಮೂಲದವರಾಗಿದ್ದಾರೆ. ಹೀಗಾಗಿ ಅಭಿಮಾನಿಗಳು ತುಳುವಿನಲ್ಲಿ ಮಾತನಾಡಿದ್ದಾರೆ.  ಕೆಎಲ್ ರಾಹ ಇಂಡೋ-ಪಾಕ್ ಪಂದ್ಯ ವೇಳೆ ನಡೆದ ತುಳು ಸಂಭಾಷಣೆ ವೀಡಿಯೋ ಇದೀಗ ವೈರಲ್ ಆಗಿದೆ. 

click me!