ಬುಮ್ರಾ ಭಯಕ್ಕೆ ನಿದ್ರೆಯೇ ಮಾಡಿರಲಿಲ್ವಂತೆ ಕಿವೀಸ್‌ನ ಈ ಬ್ಯಾಟ್ಸ್‌ಮನ್..!

Published : Jul 13, 2019, 02:03 PM IST
ಬುಮ್ರಾ ಭಯಕ್ಕೆ ನಿದ್ರೆಯೇ ಮಾಡಿರಲಿಲ್ವಂತೆ ಕಿವೀಸ್‌ನ  ಈ ಬ್ಯಾಟ್ಸ್‌ಮನ್..!

ಸಾರಾಂಶ

ವಿಶ್ವಕಪ್ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಮಾರಕ ವೇಗಿ ಜಸ್ಪ್ರೀತ್ ಬುಮ್ರಾ ಅವರನ್ನು ಎದುರಿಸುವುದು ಹೇಗೆ ಎಂದು ಕಿವೀಸ್ ಅನುಭವಿ ಬ್ಯಾಟ್ಸ್‌ಮನ್ ರಾತ್ರಿಯಿಡಿ ನಿದ್ರೆ ಬಿಟ್ಟಿದ್ದರಂತೆ. ಈ ಸ್ವಾರಸ್ಯಕರವಾದ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಅಷ್ಟಕ್ಕೂ ಯಾರು ಆ ಬ್ಯಾಟ್ಸ್‌ಮನ್ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...

ಬರ್ಮಿಂಗ್‌ಹ್ಯಾಮ್‌[ಜು.13]: ಏಕದಿನ ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಭಾರತದ ಪ್ರಚಂಡ ವೇಗಿ ಜಸ್ಪ್ರೀತ್‌ ಬುಮ್ರಾರನ್ನು ಎದುರಿಸುವುದು ಹೇಗೆ ಎನ್ನುವ ಭಯದಲ್ಲಿ ಸರಿಯಾಗಿ ನಿದ್ದೆ ಮಾಡಲಿಲ್ಲ ಎಂದು ನ್ಯೂಜಿಲೆಂಡ್‌ನ ತಾರಾ ಬ್ಯಾಟ್ಸ್‌ಮನ್‌ ರಾಸ್‌ ಟೇಲರ್‌ ಬಹಿರಂಗಪಡಿಸಿದ್ದಾರೆ. 

ವಿಶ್ವಕಪ್ ಫೈನಲ್ ಪ್ರವೇಶಿಸಿದ ಬೆನ್ನಲ್ಲೇ ಸ್ಟಾರ್ ಕ್ರಿಕೆಟಿಗನಿಗೆ ಬಿತ್ತು ಬರೆ..!

‘ನಾನು ಬೆಳಗ್ಗಿನ ಜಾವ 3ಕ್ಕೇ ಎದ್ದು ಕೂತಿದ್ದೆ. ಕ್ರೀಸ್‌ಗೆ ತೆರಳಿ ಹೇಗೆ ಬ್ಯಾಟ್‌ ಮಾಡಬೇಕು ಎನ್ನುವುದು ಗೊತ್ತಿರಲಿಲ್ಲ. ಎದುರಾಳಿ ತಂಡದಲ್ಲಿ ಬುಮ್ರಾ ಇದ್ದಾರೆ. ವಿಶ್ವದ ಶ್ರೇಷ್ಠ ಬೌಲರ್‌ ಆತ. ಭುವನೇಶ್ವರ್‌ ಕುಮಾರ್‌ ಸಹ ಅತ್ಯುತ್ತಮ ಆಟಗಾರ. ಏನು ಮಾಡುವುದು ಎನ್ನುವ ಗೊಂದಲದಲ್ಲಿ ನಿದ್ದೆಯೇ ಬರಲಿಲ್ಲ’ ಎಂದು ಟೇಲರ್‌ ಹೇಳಿಕೊಂಡಿದ್ದಾರೆ. 

ಧೋನಿ ಟೀಕಿಸುವ ಮುನ್ನ ಕೇನ್ ವಿಲಿಯಮ್ಸನ್ ಮಾತನ್ನೊಮ್ಮೆ ಕೇಳಿ...

ಭಾರತ-ನ್ಯೂಜಿಲೆಂಡ್ ನಡುವಿನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ನ್ಯೂಜಿಲೆಂಡ್, ನಿಗದಿತ 50 ಓವರ್ ಗಳಲ್ಲಿ 239 ರನ್ ಬಾರಿಸಿತ್ತು. ಟೇಲರ್‌ 74 ರನ್‌ ಗಳಿಸಿ, ಕಿವೀಸ್‌ ಪರ ಗರಿಷ್ಠ ರನ್‌ ಗಳಿಸಿದ ಆಟಗಾರ ಎನಿಸಿದ್ದರು. ಗುರಿ ಬೆನ್ನತ್ತಿದ ಭಾರತ 221 ರನ್ ಬಾರಿಸಿ ಸರ್ವಪತನ ಕಂಡಿತು. ಇದರೊಂದಿಗೆ ಕಿವೀಸ್ ತಂಡ ಸತತ ಎರಡನೇ ಬಾರಿಗೆ ಫೈನಲ್ ಪ್ರವೇಶಿಸಿತು. 
 

PREV
click me!

Recommended Stories

ವಿಶ್ವಕಪ್ ಫೈನಲ್ ವಿವಾದಾತ್ಮಕ ತೀರ್ಪು; ಮೌನ ಮುರಿದ ಅಂಪೈರ್ ಧರ್ಮಸೇನಾ!
ವಿಶ್ವಕಪ್ ಫೈನಲ್ ಗೆಲುವು ನ್ಯಾಯವಲ್ಲ; ಇಂಗ್ಲೆಂಡ್ ನಾಯಕ ವಿಷಾದ!