ವಾಘಾದಲ್ಲಿ ಘರ್ಜಿಸುವುದಕ್ಕಿಂತ ಮೈದಾನದಲ್ಲಿ ಆಡಿ- ಪಾಕ್‌ಗೆ ಅಖ್ತರ್ ತರಾಟೆ!

By Web Desk  |  First Published Jun 17, 2019, 4:45 PM IST

ಭಾರತ ವಿರುದ್ಧದ ಸೋಲಿನಿಂದ ಪಾಕಿಸ್ತಾನ ಕ್ರಿಕೆಟಿಗರು ಹೊಟೆಲ್‌ನಿಂದ ಹೊರಗೆ ಬರುತ್ತಿಲ್ಲ. ಟೀಕೆಗಳಿಂದ ಸುಸ್ತಾಗಿರುವ ಪಾಕ್ ತಂಡದ ಮೇಲೆ ಇದೀಗ ಮಾಜಿ ವೇಗಿ ಶೋಯಿಬ್ ಅಕ್ತರ್ ಸವಾರಿ ಮಾಡಿದ್ದಾರೆ. ಪಾಕ್ ತಂಡದ ತಪ್ಪುಗಳನ್ನು ಅಕ್ತರ್ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. 
 


ಇಸ್ಲಾಮಾಬಾದ್(ಜೂ.17): ಭಾರತ ವಿರುದ್ಧದ ವಿಶ್ವಕಪ್ ಲೀಗ್ ಪಂದ್ಯದ ಸೋಲು ಪಾಕಿಸ್ತಾನ ತಂಡದ ಆತ್ಮವಿಶ್ವಾಸವನ್ನೇ ಕಸಿದುಕೊಂಡಿದೆ. ಸೋಲಿಗಿಂತ ಪಾಕ್ ವಿರುದ್ದ ಕೇಳಿಬರುತ್ತಿರುವ ಟೀಕೆಗಳು ತಂಡಕ್ಕೆ ತೀವ್ರ ಹಿನ್ನಡೆಯನ್ನುಂಟು ಮಾಡಿದೆ. ಅಭಿಮಾನಿಗಳ ಟೀಕೆಗಳ ಬೆನ್ನಲ್ಲೇ ಇದೀಗ ಮಾಜಿ ವೇಗಿ ಶೋಯಿಬ್ ಅಕ್ತರ್ ಪಾಕ್ ತಂಡವನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ಬರ್ಗರ್ ತಿಂದು ಫಿಟ್ನೆಸ್ ಇಲ್ಲ, ಫಾರ್ಮ್ ಇಲ್ಲ-ಪಾಕ್ ಸೋಲಿಗೆ ಅಭಿಮಾನಿ ಆಕ್ರೋಶ!

Tap to resize

Latest Videos

ಪಾಕಿಸ್ತಾನ ನಾಯಕ ಸರ್ಫರಾಜ್ ಅಹಮ್ಮದ್ ಮೆದುಳಿಲ್ಲದ ನಾಯಕ ಎಂದು ಆಕ್ತರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟಾಸ್ ಗೆದ್ದು ಭಾರತವನ್ನು ಬ್ಯಾಟಿಂಗ್ ಆಹ್ವಾನಿಸಿದ್ದೇ ತಪ್ಪು. ನಾಯಕ ತಲೆಯಲ್ಲೇ ಮೆದುಳೇ ಇಲ್ಲ ಎಂದಿದ್ದಾರೆ. ಇನ್ನು ವೇಗಿ ಹಸನ್ ಆಲಿಗೆ ಅಕ್ತರ್ ಸರಿಯಾಗಿ ಚಾಟಿ ಬೀಸಿದ್ದಾರೆ. ವಾಘ ಗಡಿಗೆ ತೆರಳಿ ಭಾರತೀಯ ಸೈನಿಕರ ವಿರುದ್ಧ ಘರ್ಜಿಸುವುದಕ್ಕಿಂತ ಮೈದಾನದಲ್ಲಿ ಆಡಬೇಕು. ಗಡಿಯಲ್ಲಿ ಇದ್ದ ಉತ್ಸಾಹ ಮೈದಾನದಲ್ಲಿ ಕಾಣಲಿಲ್ಲ ಎಂದು ಆಕ್ತರ್ ಟೀಕೆಸಿದ್ದಾರೆ.

ಇದನ್ನೂ ಓದಿ: ಪ್ರಧಾನಿಯ ಮಾತನ್ನೇ ಕಡೆಗಣಿಸಿದ ಪಾಕ್ ಕ್ರಿಕೆಟಿಗರು!

ಪಾಕಿಸ್ತಾನ ತಂಡದ ಪ್ರತಿಯೊಬ್ಬರ ಪ್ರದರ್ಶನ ಹಾಗೂ ತಪ್ಪುಗಳನ್ನು ಅಕ್ತರ್ ಬಿಚ್ಚಿಟ್ಟಿದ್ದಾರೆ. ವೀಡಿಯೋ ಮೂಲಕ ಅಕ್ತರ್ ಪಾಕ್ ತಂಡ ಕಳಪೆ ಪ್ರದರ್ಶನವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

click me!