ಪಾಕ್ ಮಣಿಸಿದ ಭಾರತ, ವೀರ ಯೋಧರ ಸಂಭ್ರಮ ಹೀಗಿತ್ತು

By Web Desk  |  First Published Jun 17, 2019, 4:15 PM IST

ಪಾಕಿಸ್ತಾನದ ವಿರುದ್ಧ ಭಾರತ ಗೆದ್ದು ಬೀಗಿದೆ. ಇಡೀ ದೇಶವೇ ಭಾರತದ ವಿಜಯವನ್ನು ಸಂಭ್ರಮಿಸಿದೆ. ವೀರ ಯೋಧರು ಸಹ ಪಾಕಿಸ್ತಾನ ಬಗ್ಗುಬಡಿದ ಖುಷಿಯನ್ನು ತಮ್ಮದೇ ಶೈಲಿಯಲ್ಲಿ ಹಂಚಿಕೊಂಡಿದ್ದಾರೆ.


ಅಮೃತಸರ(ಜೂ. 17)  ಪಾಕಿಸ್ತಾನದ ವಿರುದ್ಧದ ವಿಜಯವನ್ನು ಬಾರ್ಡರ್ ಸೆಕ್ಯೂರಿಟಿ ಫೋರ್ಸ್(ಬಿಎಸ್‌ಎಫ್) ಅಮೃತಸರ ಘಟಕದ ಸೈನಿಕರು ಕುಣಿದು -ಕುಪ್ಪಳಿಸಿ ಸಂಭ್ರಮಿಸಿದ್ದಾರೆ.

ಪಾಕಿಸ್ತಾನದ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದ ಭಾರತ 336 ರನ್ ಕಲೆ ಹಾಕಿದಾಗಲೆ ಕುಣಿದು ಸಂಭ್ರಮಿಸಿದ್ದರು.

Tap to resize

Latest Videos

ಪಾಕ್ ಬಗ್ಗುಬಡಿದ ಟೀಂ ಇಂಡಿಯಾ; ಜೈ ಹೋ ಎಂದ ಕ್ರಿಕೆಟಿಗರು..!

ಮಳೆ ಕಾಡಿದ ಪಂದ್ಯದಲ್ಲಿ ಭಾರತ ಡಕ್ವರ್ಥ್ ಲೂಯಿಸ್ ನಿಯಮದ ಅನ್ವಯ 89 ರನ್ ಗಳ ಭರ್ಜರಿ ಜಯ ದಾಖಲಿಸಿತು. ಆರಂಭಿಕ ರೋಹಿತ್ ಶರ್ಮಾ ಶತಕ ಬಾರಿಸಿ ಭಾರತದ ಗೆಲುವನ್ನು ಮೊದಲೆ ಪಕ್ಕಾ ಮಾಡಿದ್ದರು. ಕುಲ್ ದೀಪ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಬೌಲಿಂಗ್ ದಾಳಿಗೆ ಸಿಕ್ಕ ಪಾಕಿಸ್ತಾನ ಸೋಲುವ ಸ್ಥಿತಿ ತಲುಪಿದ್ದಾಗ ಮಳೆ ಕಾಟ ಕೊಟ್ಟಿತ್ತು. ನಂತರ ಮತ್ತೆ ಪಂದ್ಯ ಆರಂಭವಾದರೂ ಪಾಕ್ ಯಾವುದೇ ಪ್ರತಿರೋಧ ತೋರಲು ಸಾಧ್ಯವಾಗಲಿಲ್ಲ.

 

click me!