ಪ್ರತಿ ಪಂದ್ಯಕ್ಕೆ ಮೀಸಲು ದಿನ ಅಸಾಧ್ಯವೆಂದ ಐಸಿಸಿ

By Web DeskFirst Published Jun 13, 2019, 11:45 AM IST
Highlights

12ನೇ ಆವೃತ್ತಿಯ ಏಕದಿನ ಕ್ರಿಕೆಟ್ ವಿಶ್ವಕಪ್ ಮಳೆಯ ವಿಶ್ವಕಪ್ ಆಗಿ ಬದಲಾಗಿದೆ. ಈಗಾಗಲೇ ಮೂರು ಪಂದ್ಯಗಳು ಮಳೆಯಿಂದಾಗಿ ರದ್ದಾಗಿವೆ. ಹೀಗಾಗಿ ಐಸಿಸಿ ವಿಶ್ವಕಪ್‌ನಂತಹ ಮಹತ್ವದ ಟೂರ್ನಿ ವೇಳೆ ಮೀಸಲು ದಿನದ ಅಗತ್ಯತೆಯ ಚರ್ಚೆ ಕೇಳಿ ಬರುತ್ತಿದೆ. ಈ ಬಗ್ಗೆ ಇದೇ ಮೊದಲ ಬಾರಿಗೆ ಐಸಿಸಿ ತುಟಿಬಿಚ್ಚಿದೆ. ಐಸಿಸಿ ಕೊಟ್ಟ ಕಾರಣವೇನು..? ನೀವೇ ನೋಡಿ... 

ನಾಟಿಂಗ್‌ಹ್ಯಾಮ್‌[ಜೂ.13]: 2019ರ ಏಕದಿನ ವಿಶ್ವಕಪ್‌ನಲ್ಲಿ ಈಗಾಗಲೇ 3 ಪಂದ್ಯಗಳು ಮಳೆಗೆ ಬಲಿಯಾಗಿದ್ದು, ಮತ್ತಷ್ಟು ಪಂದ್ಯಗಳಿಗೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದೆ. ಬಾಂಗ್ಲಾದೇಶ ಫೀಲ್ಡಿಂಗ್‌ ಕೋಚ್‌ ಸ್ಟೀವ್‌ ರೋಡ್ಸ್‌ ಸೇರಿದಂತೆ ಹಲವರು ವಿಶ್ವಕಪ್‌ ಪಂದ್ಯಗಳಿಗೆ ಮೀಸಲು ದಿನ ನಿಗದಿ ಮಾಡಬೇಕು ಎಂದು ಆಗ್ರಹಿಸಿದ್ದರು. 

ಮಳೆಗೆ ಆಹುತಿಯಾದ ಬಾಂಗ್ಲಾ-ಲಂಕಾ ಮ್ಯಾಚ್

ಈ ಸಂಬಂಧ ಸ್ಪಷ್ಟನೆ ನೀಡಿರುವ ಐಸಿಸಿ ಮುಖ್ಯ ಕಾರ್ಯನಿವಾರ್ಹಕ ಅಧಿಕಾರಿ ಡೇವ್‌ ರಿಚರ್ಡ್‌ಸನ್‌ ಪ್ರತಿ ಪಂದ್ಯಕ್ಕೆ ಮೀಸಲು ದಿನ ಆಯೋಜಿಸುವುದು ಅಸಾಧ್ಯ ಎಂದಿದ್ದಾರೆ.  ‘ಪ್ರತಿ ಪಂದ್ಯಕ್ಕೆ ಮೀಸಲು ದಿನವಿಟ್ಟರೆ ಟೂರ್ನಿಯ ವೇಳಾಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇಷ್ಟೊಂದು ಮಳೆ ನಿರೀಕ್ಷೆ ಮಾಡಿರಲಿಲ್ಲ. ಮಳೆ ನಿಯಂತ್ರಿಸುವುದು ನಮ್ಮ ಕೈಯಲಿಲ್ಲ’ ಎಂದು ರಿಚರ್ಡ್‌ಸನ್‌ ಹೇಳಿದ್ದಾರೆ.

ಸೌತ್ಆಫ್ರಿಕಾ-ವೆಸ್ಟ್ ಇಂಡೀಸ್ ವಿಶ್ವಕಪ್ ಪಂದ್ಯ ರದ್ದು!

ಈ ಮೊದಲು ಪಾಕಿಸ್ತಾನ-ಶ್ರೀಲಂಕಾ, ಬಾಂಗ್ಲಾದೇಶ-ಶ್ರೀಲಂಕಾ, ದಕ್ಷಿಣ ಆಫ್ರಿಕಾ-ವೆಸ್ಟ್ ಇಂಡೀಸ್ ನಡುವಿನ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. 
 

click me!