ಸೋಲಿನ ಬಳಿಕ ವಿಲಿಯಮ್ಸನ್‌ಗೆ ನೆರವಾಯ್ತು ತೆಂಡುಲ್ಕರ್ ಮಾತು!

By Web DeskFirst Published Jul 17, 2019, 5:13 PM IST
Highlights

ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ಸೋಲು ತಂಡಕ್ಕೆ ತೀವ್ರ ನೋವು ತಂದಿದೆ. ಇತ್ತ ಅಭಿಮಾನಿಗಳು ಕೂಡ ನ್ಯೂಜಿಲೆಂಡ್ ಗೆಲುವಿಗಾಗಿ ಹಂಬಲಿಸಿದ್ದರು. ಸೋಲಿನ ನೋವಿನಲ್ಲಿದ್ದ ನಾಯಕ ಕೇನ್ ವಿಲಿಯಮ್ಸನ್‌ಗೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಮಾತು ಹೊಸ ಉತ್ಸಾಹ ನೀಡಿದೆ.

ಲಂಡನ್(ಜು.17): ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಬೌಂಡರಿ ಆಧಾರಲ್ಲಿ ಸೋಲು ಕಂಡ ನ್ಯೂಜಿಲೆಂಡ್ ತೀವ್ರ ನಿರಾಸೆ ಅನುಭವಿಸಿತ್ತು. ಪ್ರಶಸ್ತಿಗಾಗಿ ಕಠಿಣ ಹೋರಾಟ ನೀಡಿದ್ದ ಕಿವೀಸ್‌ಗೆ ಅದೃಷ್ಠ ಕೈಹಿಡಿದಿರಲಿಲ್ಲ. ಸೋಲಿನಿಂದ ನ್ಯೂಜಿಲೆಂಡ್ ತಂಡ ಕುಗ್ಗಿ ಹೋಗಿತ್ತು. ಎಲ್ಲಿ ತಪ್ಪಾಯ್ತು ಅನ್ನೋ ಆಲೋಚನೆಯಲ್ಲಿ ನಾಯಕ ಕೇನ್ ವಿಲಿಯಮ್ಸನ್ ಮುಳಿಗಿದ್ದರು. ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಹೇಳಿದ ಮಾತು ವಿಲಿಯಮ್ಸನ್‌ಗೆ ಹೊಸ ಚೈತನ್ಯ ನೀಡಿತು.

ಇದನ್ನೂ ಓದಿ: ಧೋನಿ ಪೋಷಕರು ಬಿಚ್ಚಿಟ್ರು MSD ನಿವೃತ್ತಿ ಸೀಕ್ರೆಟ್!

ಫೈನಲ್ ಪಂದ್ಯದಲ್ಲಿ ಕೊದಲೆಳೆಯುವ ಅಂತರದಲ್ಲಿ ಸೋತ ನ್ಯೂಜಿಲೆಂಡ್ ತಂಡದ ಪ್ರತಿಯೊಬ್ಬ ಆಟಗಾರನೂ ನೋವಿನಲ್ಲಿ ಮುಳಿಗಿದ್ದರು. ಪ್ರಶಸ್ತಿ ಸ್ವೀಕರಿಸಲು ಬಂದು ವಿಲಿಯಮ್ಸನ್, ಸಚಿನ್ ತೆಂಡುಲ್ಕರ್‌ರಿಂದ ಅವಾರ್ಡ್ ಪಡೆದರು. ಈ ವೇಳೆ ಸಚಿನ್, ನಿಮ್ಮ ಪ್ರದರ್ಶನಕ್ಕೆ ಎಲ್ಲರೂ ತಲೆ ಬಾಗಿದ್ದಾರೆ. ಫಲಿತಾಂಶ ಏನೇ ಆದರೂ ಅದ್ಬುತ ಹೋರಾಟ ನೀಡಿದ್ದೀರಿ ಎಂದು ಸಚಿನ್ ಹೇಳಿದ್ದಾರೆ. 

ಇದನ್ನೂ ಓದಿ: ಕ್ರೀಡೆಗೆ ಬರಬೇಡಿ; ವಿಶ್ವಕಪ್ ಬಳಿಕ ಮಕ್ಕಳಲ್ಲಿ ನ್ಯೂಜಿಲೆಂಡ್ ಕ್ರಿಕೆಟಿಗನ ಮನವಿ!

ಇಂಗ್ಲೆಂಡ್ ವಿರುದ್ದದ ವಿಶ್ವಕಪ್ ಫೈನಲ್ ಪಂದ್ಯ ಟೈನಲ್ಲಿ ಅಂತ್ಯಗೊಂಡಿತ್ತು. ಸೂಪರ್ ಓವರ್‌ನಲ್ಲೂ ಪಂದ್ಯ ಟೈ ಗೊಂಡಿತ್ತು. ಹೀಗಾಗಿ ಗರಿಷ್ಠ ಬೌಂಡರಿ ಸಿಡಿಸಿದ ಆಧಾರದಲ್ಲಿ ಇಂಗ್ಲೆಂಡ್‌ಗೆ ಗೆಲುವು ನೀಡಲಾಯಿತು. ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ಎರಡೂ ತಂಡ ಪ್ರಶಸ್ತಿ ಗೆಲುವಿಗೆ ಅರ್ಹವಾಗಿತ್ತು.
 

click me!