ಧೋನಿ ಪೋಷಕರು ಬಿಚ್ಚಿಟ್ರು MSD ನಿವೃತ್ತಿ ಸೀಕ್ರೆಟ್!

By Web Desk  |  First Published Jul 17, 2019, 1:52 PM IST

ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಪಂದ್ಯದಿಂದ ಹೊರಬಿದ್ದ ಬೆನ್ನಲ್ಲೇ ಎಂ.ಎಸ್.ಧೋನಿ ನಿವೃತ್ತಿ ಕುರಿತು ಪರ ವಿರೋಧ ಚರ್ಚಗಳಾಗುತ್ತಿದೆ. ಹಲವರು ಧೋನಿ ನಿವೃತ್ತಿ ಹೇಳಲಿ ಎಂದಿದ್ದಾರೆ. ಇದೀಗ ಧೋನಿ ಪೋಷಕರು ನಿವೃತ್ತಿ ಕುರಿತು ಮಾತನಾಡಿದ್ದಾರೆ. 
 


ರಾಂಚಿ(ಜು.17): ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ನಿರಾಸೆ ಅನುಭವಿಸಿದ ಬೆನ್ನಲ್ಲೇ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ಮೇಲೆ ನಿವೃತ್ತಿ ಮಾತುಗಳು ಕೇಳಿ ಬರುತ್ತಿದೆ. ವೆಸ್ಟ್ ಇಂಡೀಸ್ ಪ್ರವಾಸಕ್ಕೂ ಧೋನಿ ಬದಲು ರಿಷಬ್ ಪಂತ್ ಅಥವಾ ದಿನೇಶ್ ಕಾರ್ತಿಕ್‌ಗೆ ಸ್ಥಾನ ನೀಡಲು ಆಯ್ಕೆ ಸಮಿತಿ ಚಿಂತಿಸಿದೆ. ಇದೀಗ ಧೋನಿ ನಿವೃತ್ತಿ ಕುರಿತು ಸ್ವತಃ ಧೋನಿ ಪೋಷಕರು ಕೆಲ ಮಾಹಿತಿ ಬಹಿರಂಗ ಪಡಿಸಿದ್ದಾರೆ.

ಇದನ್ನೂ ಓದಿ: ವಿದಾಯದ ಬಳಿಕ ಭಾರತೀಯ ಸೇನೆಗೆ ಧೋನಿ

Tap to resize

Latest Videos

undefined

ಖಾಸಗಿ ಮಾಧ್ಯಮದ ಜೊತೆ ಮಾತನಾಡಿರುವ ಧೋನಿ ಬಾಲ್ಯದ ಕೋಚ್ ಕೇಶವ್ ಬ್ಯಾನರ್ಜಿ, ಧೋನಿ ಮೇಲೆ ನಿವೃತ್ತಿ ಒತ್ತಡವಿರೋದನ್ನು ಒಪ್ಪಿಕೊಂಡಿದ್ದಾರೆ. ಇಷ್ಟೇ ಅಲ್ಲ ಧೋನಿಯನ್ನು ಮತ್ತೆ ಬ್ಲೂ ಜರ್ಸಿಯಲ್ಲಿ ನೋಡಲು ಬಯಸುತ್ತಿಲ್ಲ.  ಧೋನಿ ನಿವೃತ್ತಿಗೆ ಸಮಯವಾಗಿದೆ ಎಂದು ಧೋನಿ ಪೋಷಕರು ತಮ್ಮಲ್ಲಿ ಹೇಳಿದ್ದರು ಎಂದು ಕೇಶವ್ ಬ್ಯಾನರ್ಜಿ ಹೇಳಿದ್ದಾರೆ.

ಇದನ್ನೂ ಓದಿ: ವಿಂಡೀಸ್‌ ಪ್ರವಾಸಕ್ಕೆ ಧೋನಿಗಿಲ್ಲ ಸ್ಥಾನ?

ಧೋನಿ ಪೋಷಕರ ಪ್ರಕಾರ 2020ರ ಟಿ20 ವಿಶ್ವಕಪ್ ಬಳಿಕ ಧೋನಿ ನಿವೃತ್ತಿ ಹೇಳಲಿ ಎಂದಿದ್ದಾರೆ. ಆದರೆ ಈ ಕುರಿತು ನಾವು ಯಾವುದೇ ರೀತಿಯ ಒತ್ತಡ ಹೇರುವುದಿಲ್ಲ ಎಂದು ಧೋನಿ ಪೋಷಕರು ಬ್ಯಾನರ್ಜಿ ಬಳಿ ಹೇಳಿಕೊಂಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ವಿಶ್ವಕಪ್ ಸೆಮಿಫೈನಲ್ ಪಂದದ್ಯ ಸೋಲಿನ ಬಳಿಕ ಧೋನಿ ನಿವೃತ್ತಿ ಒತ್ತಡ  ಹೆಚ್ಚಾಗಿದೆ.
 

click me!