ಧೋನಿಗೆ ICC ನುಡಿನಮನ : ’MSD ಬರೀ ಹೆಸರಲ್ಲ’..!

By Web DeskFirst Published Jul 6, 2019, 4:56 PM IST
Highlights

ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಐಸಿಸಿ ನುಡಿ ನಮನ ಅರ್ಪಿಸಿದೆ. ಜುಲೈ 07ರಂದು ಹುಟ್ಟುಹಬ್ಬ ಆಚರಿಸಿಕೊಳ್ಳಲಿರುವ ಧೋನಿ ಬಗ್ಗೆ ವಿರಾಟ್ ಏನಂದ್ರು ನೀವೇ ಕೇಳಿ... 

ನವದೆಹಲಿ[ಜು.06]: ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಮಹೇಂದ್ರ ಸಿಂಗ್ ಧೋನಿ ನಾಳೆ [ಜು.07] ತಮ್ಮ 38ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ[ಐಸಿಸಿ] ಭಾರತದ ಕ್ರಿಕೆಟ್’ಗೆ ಹೊಸ ಭಾಷ್ಯ ಬರೆದ ವ್ಯಕ್ತಿ ಎಂದು ಬಣ್ಣಿಸುವ ಮೂಲಕ ತನ್ನ ನುಡಿನಮನ ಅರ್ಪಿಸಿದೆ.

ಧೋನಿ ಪದೇ ಪದೇ ಏಕೆ ಬ್ಯಾಟ್ ಲೋಗೋ ಬದಲಿಸುತ್ತಿದ್ದಾರೆ..?

ಧೋನಿ ಐಸಿಸಿಯ ಮೂರು ಪ್ರಮುಖ ಟ್ರೋಫಿಗಳಾದ ಐಸಿಸಿ ಏಕದಿನ ವಿಶ್ವಕಪ್[2011], ಐಸಿಸಿ ಟಿ20 ವಿಶ್ವಕಪ್[2007], ಹಾಗೂ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದ ವಿಶ್ವದ ಏಕೈಕ ನಾಯಕ ಎನ್ನುವ ಅಪರೂಪದ ದಾಖಲೆ ಬರೆದಿದ್ದಾರೆ. ಅಲ್ಲದೇ ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ (ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್) ಎರಡು ಮಾದರಿಯ ರ‍್ಯಾಂಕಿಂಗ್ ನಲ್ಲಿ ಮೊದಲ ಬಾರಿಗೆ ನಂ.1 ಸ್ಥಾನಕ್ಕೇರಿದ ಸಾಧನೆ ಮಾಡಿತ್ತು. ಇದರ ಜತೆಗೆ ಐಪಿಎಲ್’ನಲ್ಲೂ ಮೂರು ಬಾರಿ ಚೆನ್ನೈ ಸೂಪರ್’ಕಿಂಗ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಪಂದ್ಯದ ನಡುವೆ ರಕ್ತ ಉಗುಳಿದ ಧೋನಿ; ಭಾವುಕರಾದ ಫ್ಯಾನ್ಸ್!

ಹೀಗಿದೆ ನೋಡಿ ಧೋನಿಗೆ ಐಸಿಸಿ ನುಡಿ ನಮನ

🔹 A name that changed the face of Indian cricket
🔹 A name inspiring millions across the globe
🔹 A name with an undeniable legacy

MS Dhoni – not just a name! | pic.twitter.com/cDbBk5ZHkN

— ICC (@ICC)

* ಆ ಒಂದು ಹೆಸರು ಭಾರತ ಕ್ರಿಕೆಟ್’ಗೆ ಹೊಸ ಭಾಷ್ಯ ಬರೆಯಿತು.

* ಆ ಒಂದು ಹೆಸರು ಜಗತ್ತಿನ ಕೋಟ್ಯಾಂತರ ಮಂದಿಗೆ ಸ್ಫೂರ್ತಿ

* ಆ ಒಂದು ಹೆಸರು ಬೆಲೆ ಕಟ್ಟಲಾಗದ ಸಂಪತ್ತು.
MS ಧೋನಿ- ಇದು ಬರೀ ಹೆಸರಲ್ಲ ಎಂದು ಐಸಿಸಿ ಟ್ವೀಟ್ ಮಾಡಿದೆ.

ವಿಶ್ವಕಪ್ ಟೂರ್ನಿ ಬಳಿಕ ಎಂ.ಎಸ್. ಧೋನಿ ನಿವೃತ್ತಿ ಘೋಷಣೆ?

ಐಸಿಸಿ ದಾಖಲಿಸಿದ ವಿಡಿಯೋದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ವೇಗಿ ಜಸ್ಪ್ರೀತ್ ಬುಮ್ರಾ ಕ್ಯಾಪ್ಟನ್ ಕೂಲ್ ಖ್ಯಾತಿಯ ಧೋನಿಯ ಒಡನಾಟವನ್ನು ಹಂಚಿಕೊಂಡಿದ್ದಾರೆ. ಇದರ ಜತೆಗೆ ಇಂಗ್ಲೆಂಡ್ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಜೋಸ್ ಬಟ್ಲರ್, ಆಲ್ರೌಂಡರ್ ಬೆನ್ ಸ್ಟೋಕ್ಸ್ ಕೂಡಾ ಧೋನಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ
 

click me!