ವಿಶ್ವಕಪ್ 2019 ಲಕ್ಕಿ ಜೆರ್ಸಿಯಲ್ಲಿ ಗೆಲ್ಲುತ್ತಾ ಲಂಕಾ..?

By Web DeskFirst Published Jun 28, 2019, 9:39 AM IST
Highlights

ವಿಶ್ವಕಪ್ ಟೂರ್ನಿಯಲ್ಲಿಂದು ಶ್ರೀಲಂಕಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗುತ್ತಿವೆ. ಸೆಮೀಸ್ ಪ್ರವೇಶಿಸುವ ದೃಷ್ಟಿಯಿಂದ ಈ ಪಂದ್ಯ ಲಂಕಾ ಪಾಲಿಗೆ ಮಹತ್ವದ್ದೆನಿಸಿದರೆ, ಆಫ್ರಿಕಾ ಪಾಲಿಗೆ ಕೇವಲ ಔಪಚಾರಿಕ ಪಂದ್ಯವೆನಿಸಿದೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ.. 

ವಿಶ್ವಕಪ್ ಟೂರ್ನಿಯ ಪ್ರತಿಕ್ಷಣದ ಮಾಹಿತಿಗಳಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ...

ಚೆಸ್ಟರ್ ಲೆ ಸ್ಟ್ರೀಟ್[ಜೂ.28]: ಇಂಗ್ಲೆಂಡ್ ವಿರುದ್ಧ ಹಳದಿ ಜೆರ್ಸಿ ತೊಟ್ಟು ಆಡಿದ್ದ ಶ್ರೀಲಂಕಾ ಭರ್ಜರಿ ಗೆಲುವು ಸಾಧಿಸಿ ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಂಡಿತ್ತು. ರೌಂಡ್ ರಾಬಿನ್ ಹಂತದಲ್ಲಿ ಬಾಕಿ ಇರುವ ಮೂರೂ ಪಂದ್ಯಗಳಿಗೆ ಹಳದಿ ಜೆರ್ಸಿಯನ್ನೇ ತೊಟ್ಟು ಆಡಲು ಐಸಿಸಿಯಿಂದ ಅನುಮತಿ ಪಡೆದಿರುವ ಲಂಕಾ, ಶುಕ್ರವಾರ ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದು ಸೆಮೀಸ್ ರೇಸ್‌ನಲ್ಲಿ ಉಳಿದುಕೊಳ್ಳುವ ವಿಶ್ವಾಸದಲ್ಲಿದೆ.

ವಿಂಡೀಸ್ ವಿರುದ್ಧ ಭಾರತಕ್ಕೆ 125 ರನ್ ಭರ್ಜರಿ ಗೆಲುವು-ಸೆಮೀಸ್ ಹಾದಿ ಸುಲಭ!

ಈಗಾಗಲೇ ಸೆಮೀಸ್ ರೇಸ್‌ನಿಂದ ಹೊರಬಿದ್ದಿರುವ ದ.ಆಫ್ರಿಕಾಕ್ಕಿದು ಔಪಚಾರಿಕ ಪಂದ್ಯ. 6 ಪಂದ್ಯಗಳಿಂದ 6 ಅಂಕ ಗಳಿಸಿರುವ ಲಂಕಾ, ಬಾಕಿ ಇರುವ ಮೂರೂ ಪಂದ್ಯಗಳಲ್ಲಿ ಗೆಲ್ಲಲೇಬೇಕಿದೆ. ಎರಡೂ ತಂಡಗಳು ಬ್ಯಾಟಿಂಗ್‌ನಲ್ಲಿ ವೈಫಲ್ಯ ಮುಂದುವರಿಸಿವೆ. ಆದರೆ ಶ್ರೀಲಂಕಾದ ಬೌಲಿಂಗ್ ವಿಭಾಗ ಬಲಿಷ್ಠವಾಗಿದೆ. ಅನುಭವಿ ವೇಗಿ ಲಸಿತ್ ಮಾಲಿಂಗ ಜಾದೂ ಪ್ರದರ್ಶಿಸುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಧನಂಜಯ ಡಿ ಸಿಲ್ವಾ ಸಹ ಉತ್ತಮ ಬೌಲಿಂಗ್ ಪ್ರದರ್ಶನ ತೋರಿದ್ದರು. ಕುಸಾಲ್ ಪೆರೇರಾ, ಆವಿಷ್ಕಾ ಫರ್ನಾಂಡೋ, ದಿಮುತ್ ಕರುಣರತ್ನೆ, ಏಂಜೆಲೋ ಮ್ಯಾಥ್ಯೂಸ್ ಬ್ಯಾಟಿಂಗ್‌ನಲ್ಲಿ ಮಿಂಚಿದರೆ ಲಂಕಾಕ್ಕೆ ಗೆಲುವು ಒಲಿಯಲಿದೆ. 

ಸೋಲಿನಿಂದ ಕಂಗೆಟ್ಟ ಸೌತ್ ಆಫ್ರಿಕಾಗೆ ಮತ್ತೊಂದು ಹೊಡೆತ!

ದ.ಆಫ್ರಿಕಾ ಬ್ಯಾಟಿಂಗ್ ಮಾತ್ರವಲ್ಲದೆ ಬೌಲಿಂಗ್, ಫೀಲ್ಡಿಂಗ್‌ನಲ್ಲೂ ನೀರಸ ಪ್ರದರ್ಶನ ತೋರುತ್ತಿದೆ. ಕೊನೆ 2 ಪಂದ್ಯಗಳಲ್ಲಾದರೂ ಸುಧಾರಿತ ಪ್ರದರ್ಶನ ನೀಡಿ ಗೆಲುವಿನೊಂದಿಗೆ ಟೂರ್ನಿಗೆ ವಿದಾಯ ಡು ಪ್ಲೆಸಿ ಪಡೆ ಕಾತರಿಸುತ್ತಿದೆ. 

ಪಿಚ್ ರಿಪೋರ್ಟ್

ಇಲ್ಲಿನ ರಿವರ್‌ಸೈಡ್ ಗ್ರೌಂಡ್ ಈ ವಿಶ್ವಕಪ್‌ನಲ್ಲಿ ಇದೇ ಮೊದಲ ಬಾರಿಗೆ ಆತಿಥ್ಯ ವಹಿಸುತ್ತಿದೆ. ಇದೊಂದು ಸಣ್ಣ ಕ್ರೀಡಾಂಗಣವಾಗಿದ್ದು, ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿರಲಿದೆ ಎನ್ನಲಾಗಿದೆ. ಕಳೆದ ವರ್ಷ ಇಲ್ಲಿ ನಡೆದ ಇಂಗ್ಲೆಂಡ್-ಆಸ್ಟ್ರೇಲಿಯಾ ಪಂದ್ಯದ ಎರಡೂ ಇನ್ನಿಂಗ್ಸ್‌ನಲ್ಲಿ 300ಕ್ಕೂ ಹೆಚ್ಚು ಮೊತ್ತ ದಾಖಲಾಗಿತ್ತು. ಮೊದಲು ಫೀಲ್ಡ್ ಮಾಡುವ ತಂಡಕ್ಕೆ ಲಾಭ ಹೆಚ್ಚು ಎಂದು ವಿಶ್ಲೇಷಿಸಲಾಗಿದೆ.

ಸ್ಥಳ: ಚೆಸ್ಟರ್ ಲೆ ಸ್ಟ್ರೀಟ್
ಪಂದ್ಯ ಆರಂಭ: 03 ಗಂಟೆಗೆ
ನೇರ ಪ್ರಸಾರ: ಸ್ಟಾರ್ ಸ್ಫೋರ್ಟ್ಸ್ 
 

click me!