ಅಯ್ಯೋ ಪಾಪ: ಟ್ವೀಟ್ ಮಾಡಿ ಕೆಟ್ಟ ರಾಯುಡು!

By Web Desk  |  First Published Jun 20, 2019, 2:18 PM IST

ವಿಶ್ವಕಪ್ ಟೂರ್ನಿಯಿಂದ ಧವನ್ ಹೊರಬಿದ್ದಿದ್ದಾರೆ. ಅವರ ಸ್ಥಾನವನ್ನು ರಿಷಭ್ ಪಂತ್ ತುಂಬಲಿದ್ದಾರೆ. ಅಂಬಟಿ ರಾಯುಡು ಮಾಡಿದ ಒಂದು ಟ್ವೀಟ್ ಇದೀಗ ಅವರನ್ನು ಅವಕಾಶವಂಚಿತರನ್ನಾಗಿಸಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಏನಿದು ಸ್ಟೋರಿ ನೀವೇ ನೋಡಿ...


ನವದೆಹಲಿ[ಜೂ.20] ವಿಶ್ವಕಪ್ ಟೂರ್ನಿಯಿಂದ ಶಿಖರ್ ಧವನ್ ಹೊರಬಿದ್ದ ಹಿನ್ನಲೆಯಲ್ಲಿ ಅವರ ಸ್ಥಾನಕ್ಕೆ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ರಿಷಭ್ ಪಂತ್ ತಂಡ ಕೂಡಿಕೊಂಡಿದ್ದಾರೆ. ಪಂತ್ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ.

ಆದರೆ ಕಳೆದೆರಡು ವರ್ಷಗಳಿಂದ ನಾಲ್ಕನೇ ಕ್ರಮಾಂಕದಲ್ಲಿ ಆಡುತ್ತಿದ್ದ ಅಂಬಟಿ ರಾಯುಡು ಮಾಡಿದ ಒಂದೇ ಒಂದು ಎಡವಟ್ಟಿನಿಂದ ಅವಕಾಶ ವಂಚಿತರಾಗಿದ್ದಾರೆ. ರಾಯುಡು ಆಯ್ಕೆ ಸಮಿತಿ ವಿರುದ್ಧ ಮಾತನಾಡದೆ ಇದ್ದಿದ್ದರೆ ಧವನ್ ಬದಲಿಗೆ ಅವರಿಗೇ ಸ್ಥಾನ ಸಿಗುವ ಸಾಧ್ಯತೆ ಇತ್ತು.

Latest Videos

undefined

ಅಷ್ಟಕ್ಕೂ ರಾಯುಡು ಮಾಡಿದ್ದೇನು..?

ವಿಶ್ವಕಪ್’ನಿಂದ ಗೇಟ್’ಪಾಸ್: ಆಯ್ಕೆ ಸಮಿತಿಗೆ ಟಾಂಗ್ ಕೊಟ್ಟ ರಾಯಡು..!

ವಿಶ್ವಕಪ್ ತಂಡಕ್ಕೆ ತಮ್ಮನ್ನು ಆಯ್ಕೆ ಮಾಡದೆ ವಿಜಯ್ ಶಂಕರ್‌ಗೆ ಅವಕಾಶ ನೀಡಿದ್ದಕ್ಕೆ ಅಂಬಟಿ ರಾಯುಡು ಆಯ್ಕೆ ಸಮಿತಿ ವಿರುದ್ಧ ಮುನಿಸಿಕೊಂಡಿದ್ದರು. ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್. ಕೆ.ಪ್ರಸಾದ್, ವಿಜಯ್ ಶಂಕರ್ ಒಬ್ಬ 3ಡಿ (ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್) ಆಟಗಾರ ಎಂದಿದ್ದರು. ಇದನ್ನೇ ಗುರಿಯಾಗಿಸಿಕೊಂಡಿದ್ದ ರಾಯುಡು, ವಿಶ್ವಕಪ್ ವೀಕ್ಷಿಸಲು 3ಡಿ ಕನ್ನಡಕ ಬುಕ್ ಮಾಡಿದ್ದೇನೆ ಎಂದು ಟ್ವೀಟ್ ಮಾಡಿದ್ದರು.

ಆಯ್ಕೆಗಾರರ ಕಾಲೆಳೆದ ರಾಯುಡುಗೆ ಶಿಕ್ಷೆಯಿಲ್ಲ’

ರಾಯುಡು ಟ್ವೀಟ್ ಹೊರತಾಗಿಯೂ ಅವರನ್ನು ಮೀಸಲು ಆಟಗಾರರನ್ನಾಗಿ ಆಯ್ಕೆ ಮಾಡಿತ್ತು. ಆದರೆ ರಾಯುಡು ಮೀಸಲು ಆಟಗಾರನಾಗಿಯೇ ಉಳಿದಿದ್ದಾರೆ

click me!