ಟ್ವಿಟರ್‌ನಲ್ಲಿ ಕೊಹ್ಲಿಗೆ ಮೂರು ಕೋಟಿ ಹಿಂಬಾಲಕರು..!

Published : Jun 20, 2019, 12:54 PM IST
ಟ್ವಿಟರ್‌ನಲ್ಲಿ ಕೊಹ್ಲಿಗೆ ಮೂರು ಕೋಟಿ ಹಿಂಬಾಲಕರು..!

ಸಾರಾಂಶ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣಗಳಲ್ಲೂ ಹೊಸ ಮೈಲುಗಲ್ಲು ಸಾಧಿಸಿದ್ದು, ಟ್ವಿಟರ್‌ನಲ್ಲಿ ಬರೋಬ್ಬರಿ ಮೂರು ಕೋಟಿ ಹಿಂಬಾಲಕರನ್ನು ಹೊಂದಿ ದಾಖಲೆ ಬರೆದಿದ್ದಾರೆ. ಇದಕ್ಕೆ ಅಭಿಮಾನಿಗಳಿಗೆ ಕೊಹ್ಲಿ ವಿನೂತನವಾಗಿಯೇ ಧನ್ಯವಾದ ಅರ್ಪಿಸಿದ್ದಾರೆ

ನವದೆಹಲಿ[ಜೂ.20]: ಸಾಮಾಜಿಕ ಜಾಲತಾಣ ಟ್ವೀಟರ್‌ನಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯ ಹಿಂಬಾಲಕರ ಸಂಖ್ಯೆ 3 ಕೋಟಿ ದಾಟಿದೆ. ಅತಿಹೆಚ್ಚು ಹಿಂಬಾಲಕರನ್ನು ಹೊಂದಿರುವ ಕ್ರಿಕೆಟಿಗ ಎನ್ನುವ ಹಿರಿಮೆಗೆ ಕೊಹ್ಲಿ ಪಾತ್ರರಾಗಿದ್ದಾರೆ. 

ಪಂದ್ಯ ವೀಕ್ಷಿಸಲು ಬನ್ನಿ, ಟಿಕೆಟ್ ಮಾತ್ರ ಕೇಳಬೇಡಿ-ಇಂಟ್ರೆಸ್ಟಿಂಗ್ ಕತೆ ಹೇಳಿದ ಕೊಹ್ಲಿ!

‘ಕ್ರಿಕೆಟ್ ದೇವರು’ ಎಂದೇ ಕರೆಸಿಕೊಳ್ಳುವ ಸಚಿನ್ ತೆಂಡುಲ್ಕರ್ 2.4 ಕೋಟಿ ಹಿಂಬಾಲಕರನ್ನು ಹೊಂದಿದ್ದು, ಕ್ರಿಕೆಟಿಗರ ಪೈಕಿ 2ನೇ ಸ್ಥಾನದಲ್ಲಿದ್ದಾರೆ. 

ಪಾಕ್ ವಿರುದ್ಧ ಭರ್ಜರಿ ಗೆಲವು-ಟ್ರೆಂಡ್ ಆಯ್ತು ಕೊಹ್ಲಿ ಸೈನ್ಯದ ಮಲ್ಹಾರಿ ಡ್ಯಾನ್ಸ್!

ಫೇಸ್‌ಬುಕ್, ಟ್ವೀಟರ್ ಹಾಗೂ ಇನ್ಸ್ಟಾಗ್ರಾಂ ಸೇರಿ ಕೊಹ್ಲಿ ಒಟ್ಟು 10 ಕೋಟಿಗಿಂತಲೂ ಹೆಚ್ಚು ಹಿಂಬಾಲಕರನ್ನು ಹೊಂದಿದ್ದಾರೆ. ಕೊಹ್ಲಿಗೆ ಟ್ವಿಟರ್’ನಲ್ಲಿ 30 ಮಿಲಿಯನ್ ಹಿಂಬಾಲಕರಿದ್ದು, ಫೇಸ್’ಬುಕ್’ನಲ್ಲಿ 37.1 ಹಾಗೂ ಇನ್’ಸ್ಟಾಗ್ರಾಂನಲ್ಲಿ 33.6 ಮಿಲಿಯನ್ ಮಂದಿ ಟೀಂ ಇಂಡಿಯಾ ನಾಯಕನನ್ನು ಹಿಂಬಾಲಿಸುತ್ತಿದ್ದಾರೆ. 

PREV
click me!

Recommended Stories

ವಿಶ್ವಕಪ್ ಫೈನಲ್ ವಿವಾದಾತ್ಮಕ ತೀರ್ಪು; ಮೌನ ಮುರಿದ ಅಂಪೈರ್ ಧರ್ಮಸೇನಾ!
ವಿಶ್ವಕಪ್ ಫೈನಲ್ ಗೆಲುವು ನ್ಯಾಯವಲ್ಲ; ಇಂಗ್ಲೆಂಡ್ ನಾಯಕ ವಿಷಾದ!