ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಮೊದಲ ಪಂದ್ಯ ತಡವಾಗಿದ್ದೇಕೆ?

By Web DeskFirst Published Jun 5, 2019, 12:23 PM IST
Highlights

ವಿಶ್ವಕಪ್ ಟೂರ್ನಿ ಆರಂಭವಾಗಿ ಒಂದು ವಾರವೇ ಆಗುತ್ತಾ ಬಂದರೂ, ಭಾರತ ಇನ್ನೂ ಒಂದು ಪಂದ್ಯವನ್ನು ಆಡಿಲ್ಲ. ಭಾರತದ ಪಂದ್ಯಗಳು ಇಷ್ಟೊಂದು ತಡವಾಗಿ ಆರಂಭವಾಗಲು ಕಾರಣವೇನು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ...

ಬೆಂಗಳೂರು[ಜೂ.05]: ವಿಶ್ವಕಪ್‌ನಲ್ಲಿ ಆಡುತ್ತಿರವ 10 ತಂಡಗಳ ಪೈಕಿ ಭಾರತ ಬಿಟ್ಟು ಉಳಿದ 9 ತಂಡಗಳು ಈಗಾಗಲೇ ಕನಿಷ್ಠ ಒಂದು ಪಂದ್ಯವನ್ನಾಡಿವೆ. ಆದರೆ ಭಾರತ ಇಷ್ಟು ತಡವಾಗಿ ವಿಶ್ವಕಪ್ ಆಡಲು ಕಾರಣವೇನು ಎನ್ನುವ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ.

ವಿಶ್ವಕಪ್‌ ಆರಂಭಗೊಂಡು ಒಂದು ವಾರದ ಬಳಿಕ ಭಾರತ ತನ್ನ ಮೊದಲ ಪಂದ್ಯವನ್ನಾಡಲು ನ್ಯಾ.ಲೋಧಾ ಸಮಿತಿ ಶಿಫಾರಸು ಕಾರಣ. ಲೋಧಾ ಸಮಿತಿ ಶಿಫಾರಸು ಪ್ರಕಾರ, ಭಾರತ ತಂಡ ಆಡುವ ಎರಡು ಟೂರ್ನಿಗಳ ಮಧ್ಯೆ ಕನಿಷ್ಠ 15 ದಿನಗಳ ಅಂತರವಿರಬೇಕು. 

ವಿಶ್ವಕಪ್‌ 2019: ಟೀಂ ಇಂಡಿಯಾದ ಆಟ ಇಂದು ಶುರು

ವಿಶ್ವಕಪ್‌ ಟೂರ್ನಿಯ ವೇಳಾಪಟ್ಟಿ ಪ್ರಕಟಗೊಳ್ಳುವ ವೇಳೆ ಐಪಿಎಲ್‌ ಫೈನಲ್‌ ಪಂದ್ಯ ಮೇ 19ರಂದು ನಡೆಯಲಿದೆ ಎನ್ನಲಾಗಿತ್ತು. ಹೀಗಾಗಿ 15 ದಿನಗಳ ಬಳಿಕ ಮೊದಲ ಪಂದ್ಯ ನಿಗದಿಪಡಿಸಲಾಯಿತು. ಆದರೆ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವೇಳಾಪಟ್ಟಿ ಬದಲಿಸಿದ ಬಿಸಿಸಿಐ, ಮೇ 12ಕ್ಕೆ ಐಪಿಎಲ್‌ ಫೈನಲ್‌ ನಡೆಸಿತು. ಇದರಿಂದ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಕ್ರಿಕೆಟ್ ತಂಡ ಸ್ವಲ್ಪ ತಡವಾಗಿ ಕ್ರಿಕೆಟ್ ಆರಂಭಿಸಿದೆ.

ಲೋಧಾ ಸಮಿತಿಯ ಹೆಚ್ಚಿನ ಮಾಹಿತಿಗಳಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ...

ವಿಶ್ವಕಪ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ..


 

click me!