ರಬಾಡಗೆ ಖಡಕ್ ತಿರುಗೇಟು ನೀಡಿದ ವಿರಾಟ್ ಕೊಹ್ಲಿ..!

Published : Jun 05, 2019, 11:20 AM IST
ರಬಾಡಗೆ ಖಡಕ್ ತಿರುಗೇಟು ನೀಡಿದ ವಿರಾಟ್ ಕೊಹ್ಲಿ..!

ಸಾರಾಂಶ

ವಿರಾಟ್ ಕೊಹ್ಲಿ ಅಪ್ರಬುದ್ಧ ಎಂಬ ರಬಾಡ ಹೇಳಿಕೆಗೆ ಟೀಂ ಇಂಡಿಯಾ ನಾಯಕ ಇದೇ ಮೊದಲ ಬಾರಿಗೆ ತಿರುಗೇಟು ನೀಡಿದ್ದಾರೆ. ಕೊಹ್ಲಿ ಏನಂದ್ರು ನೀವೇ ನೋಡಿ... 

ಸೌಥಾಂಪ್ಟನ್‌[ಜೂ.05]: ದಕ್ಷಿಣ ಆಫ್ರಿಕಾದ ವೇಗದ ಬೌಲರ್‌ ಕಗಿಸೋ ರಬಾಡ ಇತ್ತೀಚೆಗೆ ‘ಕೊಹ್ಲಿ ಅಪ್ರಬುದ್ಧ, ಎದುರಾಳಿ ಆಟಗಾರ ತಿರುಗೇಟು ನೀಡಿದರೆ ಸಹಿಸಿಕೊಳ್ಳುವ ಶಕ್ತಿ ಇಲ್ಲ’ ಎಂದಿದ್ದರು. ಆ ಹೇಳಿಕೆ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಕೊಹ್ಲಿ ದಕ್ಷಿಣ  ಆಫ್ರಿಕಾ ವೇಗಿಗೆ ಖಡಕ್ ತಿರುಗೇಟು ನೀಡಿದ್ದಾರೆ.

ವಿರಾಟ್ ಕೊಹ್ಲಿಯನ್ನು ಕೆಣಕಿದ ರಬಾಡ..!

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ರಬಾಡ ಹೇಳಿಕೆಗೆ ಪ್ರತಿಕ್ರಿಯಿಸಿದ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ, ‘ರಬಾಡ ಯಾಕೆ ಆ ರೀತಿ ಹೇಳಿದರು ಎಂದು ನನಗೆ ಗೊತ್ತಿಲ್ಲ. ಹಲವು ಪಂದ್ಯಗಳಲ್ಲಿ ನಾನು ಅವರ ವಿರುದ್ಧ ಆಡಿದ್ದೇನೆ. ಅವರಿಗೆ ಏನಾದರು ಸಮಸ್ಯೆಯಿದ್ದರೆ ಎದುರೆದುರು ಕೂತು ಚರ್ಚಿಸಲಿ. ಅವರ ಹೇಳಿಕೆಗೆ ಪತ್ರಿಕಾಗೋಷ್ಠಿಯಲ್ಲಿ ನಾನು ಉತ್ತರಿಸುವುದಿಲ್ಲ’ ಎಂದರು.

ವಿಶ್ವಕಪ್ ಟೂರ್ನಿಯಲ್ಲಿಂದು ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ತನ್ನ ಅಭಿಯಾನವನ್ನು ದಕ್ಷಿಣ ಆಫ್ರಿಕಾ ವಿರುದ್ಧವೇ ಆರಂಭಿಸಲಿದೆ. ಹೀಗಾಗಿ ಕೊಹ್ಲಿ ಬ್ಯಾಟಿಂಗ್ ಹಾಗೂ ರಬಾಡ ಬೌಲಿಂಗ್ ನಡುವಿನ ಹೋರಾಟ ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿದೆ. 

ವಿಶ್ವಕಪ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ...


 

PREV
click me!

Recommended Stories

ವಿಶ್ವಕಪ್ ಫೈನಲ್ ವಿವಾದಾತ್ಮಕ ತೀರ್ಪು; ಮೌನ ಮುರಿದ ಅಂಪೈರ್ ಧರ್ಮಸೇನಾ!
ವಿಶ್ವಕಪ್ ಫೈನಲ್ ಗೆಲುವು ನ್ಯಾಯವಲ್ಲ; ಇಂಗ್ಲೆಂಡ್ ನಾಯಕ ವಿಷಾದ!