2020ರ ಒಲಿಂಪಿಕ್ಸ್ ಕೂಟದಿಂದ ಪಾಕಿಸ್ತಾನ ಹಾಕಿ ತಂಡ ಅವಕಾಶ ವಂಚಿತವಾಗಿದೆ. ಅರ್ಹತಾ ಸುತ್ತಿನಲ್ಲಿ ನೆದರ್ಲೆಂಡ್ ವಿರುದ್ದ ಮುಗ್ಗರಿಸಿದೆ.
ಆ್ಯಮ್‌ಸ್ಟರ್‌ಡ್ಯಾಮ್ (ನೆದರ್‌ಲೆಂಡ್)ಅ.29: ಮೂರು ಬಾರಿಯ ಚಾಂಪಿಯನ್ ಪಾಕಿಸ್ತಾನ ಪುರುಷರ ಹಾಕಿ ತಂಡ 2020ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಗಿದೆ. ಭಾನುವಾರ ತಡರಾತ್ರಿ ಇಲ್ಲಿ ನಡೆದ ಅರ್ಹತಾ ಸುತ್ತಿನ 2ನೇ ಪಂದ್ಯದಲ್ಲಿ ಆತಿಥೇಯ ನೆದರ್‌ಲೆಂಡ್ ವಿರುದ್ಧ 1-6 ಗೋಲ್‌ಗಳಿಂದ ಹೀನಾಯ ಸೋಲುಂಡಿತು.
ಇದನ್ನೂ ಓದಿ: ಭಾರತ ಹಾಕಿ ತಂಡಕ್ಕೆ ಸುನಿಲ್ ಉಪನಾಯಕ
ಶನಿವಾರ ನಡೆದಿದ್ದ ಮೊದಲ ಪಂದ್ಯದಲ್ಲಿ 4-4ರಲ್ಲಿ ಅಚ್ಚರಿಯ ಡ್ರಾ ಫಲಿತಾಂಶ ಸಾಧಿಸಿತ್ತು. ಆದರೆ ಭಾನುವಾರ ನೆದರ್‌ಲೆಂಡ್ ತನ್ನ ಆಕ್ರಮಣಕಾರಿ ಆಟದಿಂದ ಪಾಕಿಸ್ತಾನವನ್ನು ದೊಡ್ಡ ಅಂತರದಿಂದ ಸದೆಬಡಿಯಿತು. ಒಟ್ಟಾರೆ ಎರಡೂ ಪಂದ್ಯಗಳ ಮುಕ್ತಾಯಕ್ಕೆ ನೆದರ್‌ಲೆಂಡ್ 10-5 ಅಂತರ ಕಾಯ್ದುಕೊಂಡಿತು. 1960, 1968, 1984ರ ಒಲಿಂಪಿಕ್ಸ್‌ಗಳಲ್ಲಿ ಪಾಕಿಸ್ತಾನ ಚಿನ್ನದ ಪದಕಗಳನ್ನು ಗೆದ್ದಿತ್ತು.
ಇದನ್ನೂ ಓದಿ: 2020 ಒಲಿಂಪಿಕ್ಸ್ ಹಾಕಿ: ರಾಜ್ಯದ ರಘು ಅಂಪೈರ್
1992ರ ಬಾರ್ಲಿಸಿಲೋನಾದಲ್ಲಿ ನಡೆದ ಒಲಿಂಪಿಕ್ ಕೂಡದಲ್ಲಿ ಕಂಚಿನ ಪದಕ ಗೆದ್ದಿತ್ತು. ಇದಾದ ಬಳಿಕ ಮಹತ್ವದ ಟೂರ್ನಿ ಗೆಲ್ಲುವಲ್ಲಿ ವಿಫಲವಾಗಿತು. ನೆದರ್ಲೆಂಡ್ ತಂಡ ಅತ್ಯುತ್ತಮ ಆಟ ಪ್ರದರ್ಶಿಸಿತು. ನಮ್ಮ ಕೆಟ್ಟದಿನವಾಗಿತ್ತು. ಒಲಿಂಪಿಕ್ಸ್ ಕೂಟದಲ್ಲಿ ಪಾಲಗೊಳ್ಳಲು ಸಾಧ್ಯವಾಗುತ್ತಿಲ್ಲ ಅನ್ನೋದು ಅತೀವ ನೋವು ತಂದಿದೆ ಎಂದು ಪಾಕಿಸ್ತಾನ ಹಾಕಿ ತಂಡದ ಕೋಚ್ ಖವಾಜ್ ಜುನೈದ್ ಹೇಳಿದ್ದಾರೆ.