
ನವದೆಹಲಿ[ಅ.19]: ಭಾರತ ಪುರುಷರ ಹಾಕಿ ತಂಡಕ್ಕೆ ಕರ್ನಾಟಕದ ಎಸ್.ವಿ ಸುನಿಲ್ ಉಪನಾಯಕರಾಗಿ ನೇಮಕಗೊಂಡಿದ್ದಾರೆ. 2020ರ ಟೋಕಿಯೋ ಒಲಿಂಪಿಕ್ಸ್ ಕ್ವಾಲಿಫೈಯರ್ ಪಂದ್ಯಗಳಿಗೆ 18 ಸದಸ್ಯರ ಭಾರತ ತಂಡವನ್ನು ಶುಕ್ರವಾರ ಹಾಕಿ ಇಂಡಿಯಾ ಘೋಷಿಸಿದೆ.
ಪ್ರೊ ಕಬಡ್ಡಿ ಫೈನಲ್: ಹೊಸ ಚಾಂಪಿಯನ್ ಉದಯಕ್ಕೆ ಕ್ಷಣಗಣನೆ
ಪುರುಷರ ತಂಡಕ್ಕೆ ಮನ್‌ಪ್ರೀತ್ ಸಿಂಗ್, ವನಿತೆಯರ ತಂಡಕ್ಕೆ ರಾಣಿ ರಾಂಪಾಲ್ ನೇತೃತ್ವ ವಹಿಸಲಿದ್ದಾರೆ. ವನಿತೆಯರ ತಂಡಕ್ಕೆ ಅನುಭವಿ ಗೋಲ್‌ಕೀಪರ್ ಸವಿತಾ ಉಪನಾಯಕಿ ಆಗಿದ್ದಾರೆ. ಡಿಫೆಂಡರ್ ರೂಪಿಂದರ್ ಸಿಂಗ್ ಪಾಲ್ ಪುರುಷರ ತಂಡಕ್ಕೆ ಮರಳಿದ್ದಾರೆ.
ನ.1 ಹಾಗೂ 2ರಂದು ಭುವನೇಶ್ವರದ ಕಳಿಂಗಾ ಮೈದಾನದಲ್ಲಿ ನಡೆಯುವ ಒಲಿಂಪಿಕ್ ಕ್ವಾಲಿಫೈಯರ್’ನಲ್ಲಿ, ವನಿತೆಯರು ಅಮೆರಿಕ ಹಾಗೂ ಪುರುಷರ ರಷ್ಯಾ ತಂಡವನ್ನು ಎದುರಿಸಲಿದ್ದಾರೆ.
ತಂಡ ಹೀಗಿದೆ:
ಹಾಕಿ: ಬ್ರಿಟನ್-ಭಾರತ ಪಂದ್ಯ 3-3ರಲ್ಲಿ ಡ್ರಾ
ಜೋಹರ್ ಬಹ್ರು (ಮಲೇಷ್ಯಾ): 9ನೇ ಸುಲ್ತಾನ್ ಆಫ್ ಜೋಹರ್ ಕಪ್ ಹಾಕಿ ಫೈನಲ್ ಪಂದ್ಯಕ್ಕೂ ಮುನ್ನ ಶುಕ್ರವಾರ ನಡೆದ ಅಂತಿಮ ಲೀಗ್ ಪಂದ್ಯದಲ್ಲಿ ಭಾರತ, ಗ್ರೇಟ್ ಬ್ರಿಟನ್ ವಿರುದ್ಧ 3-3ರಲ್ಲಿ ಡ್ರಾ ಸಾಧಿಸಿತು.
ಭಾರತ ಪರ ಶಿಲಾನಂದ ಲಾಕ್ರಾ (48ನೇ ನಿ.), ಮನ್‌ದೀಪ್ ಮೋರ್ (51ನೇ ನಿ.) ಹಾಗೂ ಶಾರದಾನಂದ್ ತಿವಾರಿ (57ನೇ ನಿ.) ಗೋಲು ಬಾರಿಸಿದರು. ಬ್ರಿಟನ್ ಪರ 27, 32 ಹಾಗೂ 59ನೇ ನಿಮಿಷಗಳಲ್ಲಿ ಗೋಲುಗಳು ದಾಖಲಾದವು. ಶನಿವಾರ ಭಾರತ ಹಾಗೂ ಬ್ರಿಟನ್ ತಂಡಗಳೇ ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಸೆಣಸಲಿವೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.