ಹಾಕಿ ವಿಶ್ವಕಪ್ ಟೂರ್ನಿಗೆ ಕ್ಷಣಗಣನೆ, ಒಡಿಶಾ ಆತಿಥ್ಯ
ಜನವರಿ 13ರಿಂದ 29ರವರೆಗೆ ನಡೆಯಲಿರುವ ನಡೆಯಲಿರುವ ಕ್ರೀಡಾಕೂಟ
ಭಾರತದ ಅತಿದೊಡ್ಡ ಹಾಕಿ ಸ್ಟೇಡಿಯಂ ರೂರ್ಕೆಲಾದಲ್ಲಿ ಉದ್ಘಾಟನೆ
ರೂರ್ಕೆಲಾ(ಜ.06): ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಗುರುವಾರ ಭಾರತದ ಅತಿದೊಡ್ಡ ಹಾಕಿ ಕ್ರೀಡಾಂಗಣ ಎನ್ನುವ ಖ್ಯಾತಿ ಪಡೆದಿರುವ ಬಿರ್ಸಾ ಮುಂಡಾ ಅಂತಾರಾಷ್ಟ್ರೀಯ ಕ್ರೀಡಾಂಗಣವನ್ನು ಉದ್ಘಾಟನೆ ಮಾಡಿದರು. ಜನವರಿ 13ರಿಂದ ಆರಂಭಗೊಳ್ಳಲಿರುವ ಪುರುಷರ ವಿಶ್ವಕಪ್‌ನ 44 ಪಂದ್ಯಗಳ ಪೈಕಿ 20 ಪಂದ್ಯಗಳಿಗೆ ಈ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಫೈನಲ್ ಸೇರಿ ಉಳಿದ ಪಂದ್ಯಗಳು ಭುವನೇಶ್ವರದ ಕಳಿಂಗಾ ಕ್ರೀಡಾಂಗಣದಲ್ಲಿ ನಡೆಯಲಿದೆ.
146 ಕೋಟಿ ರುಪಾಯಿ ವೆಚ್ಚದಲ್ಲಿ ಕೇವಲ 11 ತಿಂಗಳಲ್ಲಿ ಪೂರ್ಣಗೊಂಡಿರುವ ಕ್ರೀಡಾಂಗಣ ಒಟ್ಟು 21,000 ಆಸನ ಸಾಮರ್ಥ್ಯ ಹೊಂದಿದೆ. ಇದು ವಿಶ್ವದ ಅತಿದೊಡ್ಡ ಹಾಕಿ ಕ್ರೀಡಾಂಗಣಗಳಲ್ಲಿ ಒಂದೆನಿಸಿದೆ.
undefined
ಭಾರತ ಗೆದ್ದರೆ ಪ್ರತಿ ಆಟಗಾರಗೆ 1 ಕೋಟಿ!
ಭಾರತ ವಿಶ್ವಕಪ್ ಗೆದ್ದರೆ ತಂಡದ ಪ್ರತಿ ಆಟಗಾರನಿಗೆ ತಲಾ 1 ಕೋಟಿ ರುಪಾಯಿ ಬಹುಮಾನ ನೀಡುವುದಾಗಿ ಸಿಎಂ ಪಟ್ನಾಯಕ್ ಘೋಷಿಸಿದ್ದಾರೆ. ಭಾರತ 1975ರಲ್ಲಿ ವಿಶ್ವಕಪ್ ಗೆದ್ದಿತ್ತು. ಇದು ತಂಡದ ಏಕೈಕ ವಿಶ್ವಕಪ್ ಗೆಲುವಾಗಿದೆ.
Hockey World Cup: ಸವಾಲು ಸ್ವೀಕರಿಸಿ ಇತಿಹಾಸ ನಿರ್ಮಿಸಲು ಒಡಿಶಾ ರೆಡಿ
ಹಾಲಿ ಚಾಂಪಿಯನ್ ಬೆಲ್ಜಿಯಂ ಆಗಮನ: ಒಡಿಶಾದಲ್ಲಿ ನಡೆಯಲಿರುವ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಬೆಲ್ಜಿಯಂ ತಂಡವು ಇದೀಗ ಭಾರತಕ್ಕೆ ಬಂದಿಳಿದೆ. 16 ರಾಷ್ಟ್ರಗಳು ಪಾಲ್ಗೊಳ್ಳಲಿರುವ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಕಪ್ ಗೆಲ್ಲಬಲ್ಲ ನೆಚ್ಚಿನ ತಂಡಗಳಲ್ಲಿ ಬೆಲ್ಜಿಯಂ ತಂಡವು ಕೂಡಾ ಒಂದೆನಿಸಿದೆ.
The Defending Champions, Belgium Hockey Team was greeted warmly upon their arrival in Bhubaneswar ahead of the FIH Odisha Hockey Men's World Cup 2023 Bhubaneswar-Rourkela. pic.twitter.com/IkkbFnKjY2
— Hockey India (@TheHockeyIndia)ಹಾಕಿ ವಿಶ್ವಕಪ್‌ನಲ್ಲಿ ಚಿನ್ನ ಗೆದ್ದರೆ ಭಾರತೀಯ ಆಟಗಾರರಿಗೆ ತಲಾ 25 ಲಕ್ಷ ರುಪಾಯಿ ಬಹುಮಾನ!
ನವದೆಹಲಿ: ಭಾರತ ತಂಡವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಮುಂಬರುವ ಹಾಕಿ ವಿಶ್ವಕಪ್‌ನಲ್ಲಿ ಚಿನ್ನದ ಪದಕ ಗೆದ್ದರೆ ತಂಡದ ಪ್ರತಿ ಆಟಗಾರನಿಗೆ ತಲಾ 25 ಲಕ್ಷ ರುಪಾಯಿ ಬಹುಮಾನ ನೀಡುವುದಾಗಿ ಹಾಕಿ ಇಂಡಿಯಾ ಈಗಾಗಲೇ ಘೋಷಿಸಿದೆ. ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಹಾಕಿ ಇಂಡಿಯಾ ಸಂಸ್ಥೆ, ಸಹಾಯಕ ಸಿಬ್ಬಂದಿಗೂ ತಲಾ 5 ಲಕ್ಷ ರುಪಾಯಿ ನೀಡುವುದಾಗಿ ತಿಳಿಸಿದೆ. ಅಲ್ಲದೇ ಬೆಳ್ಳಿ ಗೆದ್ದರೆ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಗೆ ಕ್ರಮವಾಗಿ ತಲಾ 15 ಲಕ್ಷ ರುಪಾಯಿ ಹಾಗೂ 3 ಲಕ್ಷ ರುಪಾಯಿ, ಕಂಚು ಗೆದ್ದರೆ ತಲಾ 10 ಲಕ್ಷ ಹಾಗೂ 2 ಲಕ್ಷ ರುಪಾಯಿ ನೀಡುವುದಾಗಿ ತಿಳಿಸಿದೆ.
ಹಾಕಿ ವಿಶ್ವಕಪ್: ರೂರ್ಕೆಲಾ ಪಂದ್ಯಗಳ ಟಿಕೆಟ್ ಸೋಲ್ಡೌಟ್!
2023ರ ಎಫ್‌ಐಎಚ್ ಹಾಕಿ ವಿಶ್ವಕಪ್ ಒಡಿಶಾದಲ್ಲಿ ಜನವರಿ 13ರಿಂದ 29ರ ವರೆಗೆ ನಡೆಯಲಿದ್ದು, ರೂರ್ಕೆಲಾದಲ್ಲಿ ನಡೆಯಲಿರುವ ಎಲ್ಲಾ ಪಂದ್ಯಗಳ ಟಿಕೆಟ್‌ಗಳು ಕೆಲವೇ ದಿನಗಳಲ್ಲಿ ಮಾರಾಟವಾಗಿದೆ ಎಂದು ಹಾಕಿ ಇಂಡಿಯಾ ತಿಳಿಸಿದೆ. ರೂರ್ಕೆಲಾದಲ್ಲಿ ನೂತನವಾಗಿ ನಿರ್ಮಿಸಲಾದ ಬಿರ್ಸಾ ಮುಂಡಾ ಕ್ರೀಡಾಂಗಣ 21,000 ಆಸನ ಸಾಮರ್ಥ್ಯ ಹೊಂದಿದ್ದು, ಭಾರತದ ಅತಿದೊಡ್ಡ ಹಾಕಿ ಕ್ರೀಡಾಂಗಣ ಎನಿಸಿಕೊಂಡಿದೆ. ಟೂರ್ನಿಯ 20 ಪಂದ್ಯಗಳಿಗೆ ಈ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಡಿ.19ಕ್ಕೆ ಇಲ್ಲಿನ ಪಂದ್ಯಗಳ ಟಿಕೆಟ್ ಮಾರಾಟಕ್ಕಿಟ್ಟಿದ್ದು, ವಾರದೊಳಗೆ ಎಲ್ಲಾ ಟಿಕೆಟ್‌ಗಳು ಮಾರಾಟವಾಗಿದೆ. ಇನ್ನು ಭುವನೇಶ್ವರದ ಕಳಿಂಗಾ ಕ್ರೀಡಾಂಗಣದ 24 ಪಂದ್ಯಗಳ ಬಹುತೇಕ ಟಿಕೆಟ್‌ಗಳು ಕೂಡಾ ಮಾರಾಟವಾಗಿವೆ ಎಂದು ವರದಿಯಾಗಿದೆ.