ಬೆಂಗಳೂರಿಗೆ ಬಂದ ಹಾಕಿ ವಿಶ್ವಕಪ್‌; ದಿಗ್ಗಜರಿಂದ ಟ್ರೋಫಿ ಅನಾವರಣ

Published : Dec 24, 2022, 08:46 AM IST
ಬೆಂಗಳೂರಿಗೆ ಬಂದ ಹಾಕಿ ವಿಶ್ವಕಪ್‌; ದಿಗ್ಗಜರಿಂದ ಟ್ರೋಫಿ ಅನಾವರಣ

ಸಾರಾಂಶ

15ನೇ ಆವೃತ್ತಿಯ ಹಾಕಿ ವಿಶ್ವಕಪ್‌ ಟೂರ್ನಿಗೆ ಕ್ಷಣಗಣನೆ ಜನವರಿ 13ರಿಂದ 29ರವರೆಗೆ ಒಡಿಶಾದಲ್ಲಿ ನಡೆಯಲಿರುವ ಹಾಕಿ ವಿಶ್ವಕಪ್‌ ಡಿಸೆಂಬರ್ 25ಕ್ಕೆ ಒಡಿಶಾದಲ್ಲಿ ಟ್ರೋಫಿ ಟೂರ್‌ ಕೊನೆಗೊಳ್ಳಲಿದೆ

ಬೆಂಗಳೂರು(ಡಿ.24): 15ನೇ ಆವೃತ್ತಿಯ ಹಾಕಿ ವಿಶ್ವಕಪ್‌ ಟೂರ್ನಿಯ ಟ್ರೋಫಿ ಶುಕ್ರವಾರ ಬೆಂಗಳೂರಲ್ಲಿ ಪ್ರದರ್ಶನಗೊಂಡಿತು. ನಗರದ ಫೀಲ್ಡ್‌ ಮಾರ್ಷಲ್‌ ಕೆ.ಎಂ. ಕಾರ್ಯಪ್ಪ ಹಾಕಿ ಕ್ರೀಡಾಂಗಣದಲ್ಲಿ ದಿಗ್ಗಜ ಆಟಗಾರರ ಉಪಸ್ಥಿತಿಯಲ್ಲಿ ಟ್ರೋಫಿ ಅನಾವರಣ ಕಾರ‍್ಯಕ್ರಮ ನಡೆಯಿತು. ಭಾರತದ ಮಾಜಿ ನಾಯಕ ಧನರಾಜ್‌ ಪಿಳ್ಳೈ, ಕರ್ನಾಟಕದ ದಿಗ್ಗಜ ಆಟಗಾರರಾದ ಎಂ.ಪಿ.ಗಣೇಶ್‌, ಆಶೀಶ್‌ ಬಳ್ಳಾಲ್‌, ಎ.ಬಿ.ಸುಬ್ಬಯ್ಯ, ಅರ್ಜುನ್‌ ಹಾಲಪ್ಪ ಜೊತೆ ಹಲವು ಒಲಿಂಪಿಯನ್‌ಗಳು, ಅಂತಾರಾಷ್ಟ್ರೀಯ ಹಾಕಿ ಪಟುಗಳು ಪಾಲ್ಗೊಂಡ ಸಮಾರಂಭದಲ್ಲಿ ಆರಂಭದಲ್ಲಿ ಹಾಕಿ ಅಂಗಳದ ರೂಪದ ಕೇಕ್‌ ಕತ್ತರಿಸಲಾಯಿತು.

ಟ್ರೋಫಿ ಪ್ರದರ್ಶಿಸಿದ ಬಳಿಕ ದಿಗ್ಗಜ ಹಾಕಿ ಪಟುಗಳು ತಮ್ಮ ಕಾಲದ ವಿಶ್ವಕಪ್‌, ಒಲಿಂಪಿಕ್ಸ್‌ನ ಅನುಭವದ ನೆನಪುಗಳನ್ನು ಬಿಚ್ಚಿಟ್ಟರು. ಹಾಲಿ ಆಟಗಾರ ಮೊಹಮದ್‌ ರಾಹಿಲ್‌ ಸೇರಿದಂತೆ ಹಲವರು ಸಮಾರಂಭದಲ್ಲಿದ್ದರು. ಈ ವೇಳೆ ಮಾತನಾಡಿದ ಎಂ.ಪಿ.ಗಣೇಶ್‌, ‘ಭಾರತ ಈ ಬಾರಿ ಟ್ರೋಫಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದು. ಭಾರತ ತಂಡ ಇತ್ತೀಚಿನ ವರ್ಷಗಳಲ್ಲಿ ಬಹಳಷ್ಟುಸುಧಾರಿಸಿದ್ದು, ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿದ್ದು ಖುಷಿ ನೀಡಿದೆ’ ಎಂದರು.

ಟ್ರೋಫಿ ಟೂರ್‌ ಈಗಾಗಲೇ ಹಲವು ರಾಜ್ಯಗಳನ್ನು ಸುತ್ತಿದ್ದು, ಬೆಂಗಳೂರಿನ ಬಳಿಕ ಛತ್ತೀಸ್‌ಗಢಕ್ಕೆ ಪ್ರಯಾಣಿಸಲಿದೆ. ಡಿಸೆಂಬರ್ 25ಕ್ಕೆ ಒಡಿಶಾದಲ್ಲಿ ಟ್ರೋಫಿ ಟೂರ್‌ ಕೊನೆಗೊಳ್ಳಲಿದೆ.

ಹಾಕಿ ವಿಶ್ವಕಪ್‌: ರಾಜ್ಯದ ಆಟಗಾರರಿಗಿಲ್ಲ ಸ್ಥಾನ!

ನವದೆಹಲಿ: ಜ.13ರಿಂದ 29ರವರೆಗೆ ಒಡಿಶಾದಲ್ಲಿ ನಡೆಯಲಿರುವ ಹಾಕಿ ವಿಶ್ವಕಪ್‌ಗೆ ಶುಕ್ರವಾರ ಭಾರತ ತಂಡ ಪ್ರಕಟಿಸಲಾಗಿದ್ದು, ಹರ್ಮನ್‌ಪ್ರೀತ್‌ ಸಿಂಗ್‌ ನಾಯಕರಾಗಿ ನೇಮಕಗೊಂಡಿದ್ದಾರೆ. ಅಮಿತ್‌ ರೋಹಿದಾಸ್‌ ಉಪನಾಯಕನಾಗಿ ಕಾರ‍್ಯನಿರ್ವಹಿಸಲಿದ್ದಾರೆ. 33 ಸಂಭವನೀಯ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ರಾಜ್ಯದ ಮೊಹಮದ್‌ ರಾಹೀಲ್‌ಗೆ ಅಂತಿಮ 16ರ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ. ಭಾರತ ತಂಡ ‘ಡಿ’ ಗುಂಪಿನಲ್ಲಿ ಇಂಗ್ಲೆಂಡ್‌, ಸ್ಪೇನ್‌, ವೇಲ್ಸ್‌ ಜೊತೆ ಸ್ಥಾನ ಪಡೆದಿದೆ. ಜ.13ಕ್ಕೆ ಆರಂಭಿಕ ಪಂದ್ಯವನ್ನು ಸ್ಪೇನ್‌ ವಿರುದ್ಧ ಆಡಲಿದೆ. ಬಳಿಕ 15ಕ್ಕೆ ಇಂಗ್ಲೆಂಡ್‌, 19ಕ್ಕೆ ವೇಲ್ಸ್‌ ವಿರುದ್ಧ ಸೆಣಸಲಿದೆ.

ರಾಷ್ಟ್ರೀಯ ಕುಸ್ತಿ: ಮೊದಲ ಬಾರಿ ಕರ್ನಾಟಕಕ್ಕೆ 2 ಪದಕ

ವಿಶಾಖಪಟ್ಟಣಂ: ರಾಷ್ಟ್ರೀಯ ಹಿರಿಯರ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ಒಂದು ಬೆಳ್ಳಿ, 1 ಕಂಚಿನ ಪದಕದೊಂದಿಗೆ ಅಭಿಯಾನ ಕೊನೆಗೊಳಿಸಿದೆ. ಈ ಮೂಲಕ ಇದೇ ಮೊದಲ ಬಾರಿ ಕೂಟದಲ್ಲಿ ಕರ್ನಾಟಕ 2 ಪದಕ ಗೆದ್ದ ಸಾಧನೆ ಮಾಡಿತು. 8 ವರ್ಷಗಳ ಬಳಿಕ ಮೊದಲ ಬಾರಿ ಬೆಳ್ಳಿ ಪದಕ ತನ್ನದಾಗಿಸಿಕೊಂಡಿತು. ಗ್ರೀಕೋ ರೋಮನ್‌ ವಿಭಾಗದ 67 ಕೆ.ಜಿ. ಸ್ಪರ್ಧೆಯಲ್ಲಿ ರಾಜ್ಯದ ಸಂದೀಪ್‌ ಹಳಲ್ದೆಕರ್‌ ಬೆಳ್ಳಿ ಪದಕ ಪಡೆದರೆ, 87 ಕೆ.ಜಿ. ವಿಭಾಗದಲ್ಲಿ ದರಿಯಪ್ಪ ಕಂಚು ತಮ್ಮದಾಗಿಸಿಕೊಂಡರು.

ಅರ್ಜೆಂಟೀನಾದಲ್ಲಿ ಮೆಸ್ಸಿ ಚಿತ್ರ ಹಚ್ಚೆ ಹಾಕಿಸಲು ಕ್ಯೂ!

ಬ್ಯುನಸ್‌ ಐರಿಸ್‌: ಫಿಫಾ ವಿಶ್ವಕಪ್‌ ಗೆದ್ದ ಬಳಿಕ ಅರ್ಜೆಂಟೀನಾದಲ್ಲಿ ಲಿಯೋನೆಲ್‌ ಮೆಸ್ಸಿಯ ಮೇಲಿನ ಅಭಿಮಾನ ಜನರಲ್ಲಿ ಹೆಚ್ಚಾಗಿದ್ದು, ಮೆಸ್ಸಿಯ ಚಿತ್ರಗಳನ್ನು ಹಚ್ಚೆ ಹಾಕಿಸಿಕೊಳ್ಳಲು ಮುಗಿಬೀಳುತ್ತಿದ್ದಾರೆ. ಇದರ ಬಗೆಗಿನ ಹಲವು ಫೋಟೋ, ವಿಡಿಯೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿವೆ.

ನ್ಯಾಷನಲ್ ಕ್ರಶ್ ಕಾವ್ಯ ಮಾರನ್ ನಗುವಿಗೆ ಕ್ಲೀನ್ ಬೋಲ್ಡ್, ಹರಾಜಿನಲ್ಲಿ ವೈರಲ್ ವಿಡಿಯೋ!

ಹಲವರು ಮೆಸ್ಸಿ ವಿಶ್ವಕಪ್‌ಗೆ ಮುತ್ತಿಡುವ ಐತಿಹಾಸಿಕ ಫೋಟೋವನ್ನು ಕೈ, ಬೆನ್ನು, ಎದೆಯ ಮೇಲೆ ಹಚ್ಚೆ ಹಾಕಿಸಿಕೊಂಡರೆ, ಮತ್ತೆ ಕೆಲವರು ಮೆಸ್ಸಿಯ ಮುಖ, ಅವರ 10 ನಂಬರ್‌ನ ಜೆರ್ಸಿ, ಅರ್ಜೆಂಟೀನಾ ತಂಡದ ಜೆರ್ಸಿಗಳನ್ನು ಹಚ್ಚೆ ಹಾಕಿಸಿಕೊಂಡಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಜೋಹರ್‌ ಕಪ್: ಹಾಕಿ ಪಂದ್ಯದಲ್ಲಿ ಭಾರತ-ಪಾಕ್‌ ಹ್ಯಾಂಡ್‌ಶೇಕ್‌!
ಕ್ರಿಕೆಟ್ ಆಯ್ತು, ಈಗ ಭಾರತ-ಪಾಕ್ ಹಾಕಿಯಲ್ಲೂ ನೋ ಹ್ಯಾಂಡ್ ಶೇಕ್ ?