ಭಾರತ ಮಹಿಳಾ ಹಾಕಿ ಕೋಚ್‌ ಜಾನೆಕ್‌ ಶಾಪ್ಮನ್‌ ರಾಜೀನಾಮೆ

By Kannadaprabha NewsFirst Published Feb 24, 2024, 1:05 PM IST
Highlights

ಅವರ ಗುತ್ತಿಗೆ ಅವಧಿ ಈ ವರ್ಷ ಪ್ಯಾರಿಸ್‌ ಒಲಿಂಪಿಕ್ಸ್‌ವರೆಗೂ ಇತ್ತು. ಆದರೆ ಅವಧಿಗೂ ಮುನ್ನ ಹುದ್ದೆ ತೊರೆದಿದ್ದಾರೆ. ಇತ್ತೀಚೆಗಷ್ಟೇ ಹಾಕಿ ಇಂಡಿಯಾ ತಮ್ಮನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು. ಪುರುಷ ತಂಡಕ್ಕೆ ಹೋಲಿಸಿದರೆ ಮಹಿಳಾ ತಂಡವನ್ನು ಹಾಕಿ ಇಂಡಿಯಾ ವಿಭಿನ್ನವಾಗಿ ವರ್ತಿಸುತ್ತಿದೆ ಎಂದಿದ್ದರು.

ನವದೆಹಲಿ(ಫೆ.24): ಇತ್ತೀಚೆಗಷ್ಟೇ ಹಾಕಿ ಇಂಡಿಯಾ ವಿರುದ್ಧ ಅಸಮಾಧಾನ ಹೊರಹಾಕಿದ್ದ ಭಾರತ ಮಹಿಳಾ ಹಾಕಿ ತಂಡದ ಕೋಚ್‌ ಜಾನೆಕ್‌ ಶಾಪ್ಮನ್ ಅವರು ಶುಕ್ರವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ನೆದರ್‌ಲೆಂಡ್ಸ್‌ನ ಶಾಪ್ಮನ್‌ 2021ರಲ್ಲಿ ಭಾರತ ತಂಡದ ಕೋಚ್‌ ಆಗಿ ನೇಮಕಗೊಂಡಿದ್ದರು. 

ಅವರ ಗುತ್ತಿಗೆ ಅವಧಿ ಈ ವರ್ಷ ಪ್ಯಾರಿಸ್‌ ಒಲಿಂಪಿಕ್ಸ್‌ವರೆಗೂ ಇತ್ತು. ಆದರೆ ಅವಧಿಗೂ ಮುನ್ನ ಹುದ್ದೆ ತೊರೆದಿದ್ದಾರೆ. ಇತ್ತೀಚೆಗಷ್ಟೇ ಹಾಕಿ ಇಂಡಿಯಾ ತಮ್ಮನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು. ಪುರುಷ ತಂಡಕ್ಕೆ ಹೋಲಿಸಿದರೆ ಮಹಿಳಾ ತಂಡವನ್ನು ಹಾಕಿ ಇಂಡಿಯಾ ವಿಭಿನ್ನವಾಗಿ ವರ್ತಿಸುತ್ತಿದೆ ಎಂದಿದ್ದರು.

ತಂದೆ ವಿರೋಧದ ನಡುವೆ ಕ್ರಿಕೆಟಿಗನಾದ ಆಕಾಶ್ ದೀಪ್ ಈಗ ಟೀಂ ಇಂಡಿಯಾ ಹೀರೋ

ಪ್ರೊ ಲೀಗ್‌ ಹಾಕಿ: ಇಂದು ಭಾರತ vs ಆಸ್ಟ್ರೇಲಿಯಾ

ರೂರ್ಕೆಲಾ: 2023-24ರ ಪ್ರೊ ಲೀಗ್‌ ಹಾಕಿ ಟೂರ್ನಿಯಲ್ಲಿ ಭಾರತ ತಂಡ ಶನಿವಾರ ಆಸ್ಟ್ರೇಲಿಯಾ ವಿರುದ್ಧ ಸೆಣಸಾಡಲಿದೆ. ಭಾರತ ಟೂರ್ನಿಯಲ್ಲಿ 6 ಪಂದ್ಯಗಳನ್ನಾಡಿದ್ದು, 4 ಗೆಲುವಿನೊಂದಿಗೆ 11 ಅಂಕ ಸಂಪಾದಿಸಿ 4ನೇ ಸ್ಥಾನದಲ್ಲಿದೆ. ಅತ್ತ ಆಸ್ಟ್ರೇಲಿಯಾ ಆಡಿರುವ 6 ಪಂದ್ಯಗಳಲ್ಲೂ ಜಯಭೇರಿ ಬಾರಿಸಿದ್ದು, 18 ಅಂಕಗಳೊಂದಿಗೆ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಆಸೀಸ್‌ ವಿರುದ್ಧದ ಮೊದಲ ಮುಖಾಮುಖಿಯಲ್ಲಿ 4-6 ಗೋಲುಗಳಿಂದ ಸೋಲುಂಡಿದ್ದ ಭಾರತ ಈ ಪಂದ್ಯದಲ್ಲಿ ಸೇಡು ತೀರಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.

WPL 2024: ಬೆಂಗಳೂರಿನಲ್ಲಿಂದು ಆರ್‌ಸಿಬಿ vs ಯುಪಿ ವಾರಿಯರ್ಸ್‌ ಫೈಟ್

ಮಾ.20ಕ್ಕೆ ಬೆಂಗಳೂರಲ್ಲಿ ರಾಷ್ಟ್ರೀಯ ಜಂಪ್ಸ್‌ ಕೂಟ

ಬೆಂಗಳೂರು: ರಾಷ್ಟ್ರೀಯ 3ನೇ ಜಂಪ್ಸ್‌ ಕೂಟವು ಬೆಂಗಳೂರಿನ ಕುಂಬಳಗೋಡುನಲ್ಲಿರುವ ಅಂಜು ಬಾಬಿ ಹೈ ಪರ್ಪಾಮೆನ್ಸ್‌ ಕೇಂದ್ರದಲ್ಲಿ ಮಾ.20ರಂದು ಆಯೋಜಿಸಲಾಗಿದೆ. ಭಾರತೀಯ ಅಥ್ಲೆಟಿಕ್ಸ್‌ ನಿಯಮಗಳ ಪ್ರಕಾರ ಉದ್ದ ಜಿಗಿತ, ಎತ್ತರ ಜಿಗಿತ, ಟ್ರಿಪಲ್‌ ಜಂಪ್‌ ಹಾಗೂ ಪೋಲ್‌ವಾಲ್ಟ್‌ ಸ್ಫರ್ಧೆಗಳು ಜರುಗಲಿವೆ. 1 ಸಾವಿರ ರು. ಪ್ರವೇಶ ಶುಲ್ಕ ಪಾವತಿಸಿ ಆನ್‌ಲೈನ್‌ ಮೂಲಕ ಮಾ.10ರೊಳಗಾಗಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.
 

click me!