ಹಾಕಿ ಫೈವ್ಸ್‌ ವಿಶ್ವಕಪ್: ಭಾರತ ಶುಭಾರಂಭ

By Naveen Kodase  |  First Published Jan 25, 2024, 11:19 AM IST

ಭಾರತದ ಪರ ಮುಮ್ತಾಜ್ ಖಾನ್‌ ಹಾಗೂ ದೀಪಿಕಾ ತಲಾ 2 ಗೋಲು ಬಾರಿಸಿದರೆ, ಮತ್ತೊಂದು ಗೋಲನ್ನು ಕುಜುರ್‌ ಮರಿಯಾನ ಹೊಡೆದರು. ಬುಧವಾರವೇ ನಡೆದ ಮತ್ತೊಂದು ಪಂದ್ಯದಲ್ಲಿ ಭಾರತ ತಂಡ, ಅಮೆರಿಕ ವಿರುದ್ಧ 7-3 ಗೆಲುವು ಸಾಧಿಸಿತು. ‘ಸಿ’ ಗುಂಪಿನಲ್ಲಿರುವ ಭಾರತ, ಗುಂಪು ಹಂತದ ಕೊನೆ ಪಂದ್ಯದಲ್ಲಿ ಗುರುವಾರ ನಮೀಬಿಯಾ ವಿರುದ್ಧ ಆಡಲಿದೆ.


ಮಸ್ಕಟ್‌(ಒಮಾನ್‌): ಇಲ್ಲಿ ಬುಧವಾರ ಆರಂಭಗೊಂಡ ಚೊಚ್ಚಲ ಆವೃತ್ತಿಯ ಹಾಕಿ ಫೈವ್ಸ್‌ ವಿಶ್ವಕಪ್‌ನಲ್ಲಿ ಭಾರತ ಮಹಿಳಾ ತಂಡ ಶುಭಾರಂಭ ಮಾಡಿದೆ. ಆರಂಭಿಕ ಪಂದ್ಯದಲ್ಲಿ ಭಾರತಕ್ಕೆ ಪೋಲೆಂಡ್‌ ವಿರುದ್ಧ 5-4 ಗೋಲುಗಳ ಗೆಲುವು ಲಭಿಸಿತು.

ಭಾರತದ ಪರ ಮುಮ್ತಾಜ್ ಖಾನ್‌ ಹಾಗೂ ದೀಪಿಕಾ ತಲಾ 2 ಗೋಲು ಬಾರಿಸಿದರೆ, ಮತ್ತೊಂದು ಗೋಲನ್ನು ಕುಜುರ್‌ ಮರಿಯಾನ ಹೊಡೆದರು. ಬುಧವಾರವೇ ನಡೆದ ಮತ್ತೊಂದು ಪಂದ್ಯದಲ್ಲಿ ಭಾರತ ತಂಡ, ಅಮೆರಿಕ ವಿರುದ್ಧ 7-3 ಗೆಲುವು ಸಾಧಿಸಿತು. ‘ಸಿ’ ಗುಂಪಿನಲ್ಲಿರುವ ಭಾರತ, ಗುಂಪು ಹಂತದ ಕೊನೆ ಪಂದ್ಯದಲ್ಲಿ ಗುರುವಾರ ನಮೀಬಿಯಾ ವಿರುದ್ಧ ಆಡಲಿದೆ.

Latest Videos

undefined

ಡೆಲ್ಲಿಗೆ ಶರಣಾದ ಹರ್ಯಾಣ

ಹೈದರಾಬಾದ್‌: 10ನೇ ಆವೃತ್ತಿ ಪ್ರೊ ಕಬಡ್ಡಿಯಲ್ಲಿ ಮಾಜಿ ಚಾಂಪಿಯನ್‌ ದಬಾಂಗ್‌ ಡೆಲ್ಲಿ 9ನೇ ಗೆಲುವು ದಾಖಲಿಸಿದೆ. ಬುಧವಾರ ಹರ್ಯಾಣ ಸ್ಟೀಲರ್ಸ್‌ ವಿರುದ್ಧ ಡೆಲ್ಲಿಗೆ 35-32 ಅಂಕಗಳ ರೋಚಕ ಜಯ ಲಭಿಸಿತು. ಆರಂಭದಿಂದಲೇ ಎದುರಾಳಿ ಮೇಲೆ ಹಿಡಿತ ಸಾಧಿಸಿದ್ದ ಡೆಲ್ಲಿ ಕೊನೆವರೆಗೂ ಪಂದ್ಯ ಕೈ ಜಾರದಂತೆ ನೋಡಿಕೊಂಡಿತು. ಆಶು ಮಲಿಕ್‌ 14 ಅಂಕಗಳೊಂದಿಗೆ ಮತ್ತೆ ಡೆಲ್ಲಿಗೆ ಆಸರೆಯಾದರು. ಹರ್ಯಾಣದ ಸಿದ್ಧಾರ್ಥ್‌ ದೇಸಾಯಿ(11 ಅಂಕ) ಹೋರಾಟ ಫಲ ನೀಡಲಿಲ್ಲ.

ಹೈದರಬಾದ್ ಟೆಸ್ಟ್: ಭಾರತ ಎದುರು ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ

ದಿನದ ಮತ್ತೊಂದು ಪಂದ್ಯದಲ್ಲಿ ತೆಲುಗು ಟೈಟಾನ್ಸ್‌ ವಿರುದ್ಧ ತಮಿಳ್‌ ತಲೈವಾಸ್ 54-29 ಅಂಕಗಳಲ್ಲಿ ಗೆಲುವು ಸಾಧಿಸಿತು.

ನಾಳಿನ ಪಂದ್ಯಗಳು

ಪಾಟ್ನಾ-ಬೆಂಗಾಲ್‌, ರಾತ್ರಿ 8ಕ್ಕೆ

ಗುಜರಾತ್‌-ಮುಂಬಾ, ರಾತ್ರಿ 9ಕ್ಕೆ

ಯೂತ್‌ ಗೇಮ್ಸ್‌: ರಾಜ್ಯದ ಧ್ರುವ, ರೀತುಶ್ರೀಗೆ ಬೆಳ್ಳಿ

ಚೆನ್ನೈ: ಇಲ್ಲಿ ನಡೆಯುತ್ತಿರುವ 6ನೇ ಆವೃತ್ತಿಯ ಖೇಲೋ ಇಂಡಿಯಾ ಯೂತ್‌ ಗೇಮ್ಸ್‌ನಲ್ಲಿ ಕರ್ನಾಟಕ ಮಂಗಳವಾರ 2 ಪದಕ ಗೆದ್ದಿದೆ. ಮಹಿಳೆಯರ 400 ಮೀ. ರೇಸ್‌ನಲ್ಲಿ ರೀತುಶ್ರೀ 57.50 ಸೆಕೆಂಡ್‌ಗಳಲ್ಲಿ ಕ್ರಮಿಸಿ ಬೆಳ್ಳಿ ಗೆದ್ದರೆ, ಪುರುಷರ 400 ಮೀಟರ್‌ ಸ್ಪರ್ಧೆಯಲ್ಲಿ ಧ್ರುವ ಬಳ್ಳಾಲ್‌ 49.06 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಬೆಳ್ಳಿ ಪದಕ ಜಯಿಸಿದರು. ಕರ್ನಾಟಕ ಕೂಟದಲ್ಲಿ ಒಟ್ಟು 3 ಪದಕ ಗೆದ್ದಿದೆ.

'ಇನ್ನಾದರೂ...?' ಶೋಯೆಬ್ ಮಲಿಕ್ ಮದುವೆಯಾಗಿದ್ದನ್ನ ಲೇವಡಿ ಮಾಡಿದ ಶಾಹಿದ್ ಅಫ್ರಿದಿ..! ಏನಂದ್ರು ನೀವೇ ನೋಡಿ

ಯೂತ್‌ ಗೇಮ್ಸ್‌: ಮತ್ತೆ 2 ಪದಕ ಗೆದ್ದ ಕರ್ನಾಟಕ

ಚೆನ್ನೈ: ಇಲ್ಲಿ ನಡೆಯುತ್ತಿರುವ 6ನೇ ಆವೃತ್ತಿಯ ಖೇಲೋ ಇಂಡಿಯಾ ಯೂತ್‌ ಗೇಮ್ಸ್‌ನಲ್ಲಿ ಕರ್ನಾಟಕದ ಅಥ್ಲೀಟ್‌ಗಳು ಮತ್ತೆರಡು ಪದಕ ಗೆದ್ದಿದ್ದಾರೆ. ಅಂಡರ್‌-15 ಬಾಲಕರ ಹ್ಯಾಮರ್‌ ಎಸೆತದಲ್ಲಿ ಯಶಸ್‌ ಕುರ್ಬಾರ್ 64.12 ಮೀ. ದೂರ ದಾಖಲಿಸಿ ಬೆಳ್ಳಿ ತಮ್ಮದಾಗಿಸಿಕೊಂಡರು. ಬಾಲಕಿಯರ 800 ಮೀ. ಓಟದ ಸ್ಪರ್ಧೆಯಲ್ಲಿ ಪ್ರಿಯಾಂಕಾ ಓಲೇಕಾರ್‌ 2 ನಿಮಿಷ 12.12 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು.

click me!