* ಏಷ್ಯಾಕಪ್ ಹಾಕಿ ಟೂರ್ನಿಯಲ್ಲಿಂದು ಭಾರತ-ಕೊರಿಯಾ ಮುಖಾಮುಖಿ
* ಫೈನಲ್ ಪ್ರವೇಶಿಸುವ ದೃಷ್ಟಿಯಿಂದ ಈ ಪಂದ್ಯದಲ್ಲಿ ಭಾರತದ ಗೆಲುವು ಅನಿವಾರ್ಯ
* ಮಲೇಷ್ಯಾ ವಿರುದ್ಧ 3-3 ಗೋಲುಗಳ ಡ್ರಾಗೆ ತೃಪ್ತಿಪಟ್ಟಿದ್ದ ಭಾರತ
ಜಕಾರ್ತ(ಮೇ.31): ಏಷ್ಯಾ ಕಪ್ ಹಾಕಿ ಟೂರ್ನಿಯಲ್ಲಿ (Asia Cup Hockey Tournament) ಫೈನಲ್ ಪ್ರವೇಶಿಸುವ ಕಾತರದಲ್ಲಿರುವ ಹಾಲಿ ಚಾಂಪಿಯನ್ ಭಾರತ, ಸೋಮವಾರ ಸೂಪರ್-4ರ ಹಂತದ ಕೊನೆ ಪಂದ್ಯದಲ್ಲಿ ದ.ಕೊರಿಯಾ ವಿರುದ್ಧ ಸೆಣಸಾಡಲಿದೆ. ಗುಂಪು ಹಂತದಿಂದ ರೋಚಕವಾಗಿ ಸೂಪರ್-4 ಹಂತ ಪ್ರವೇಶಿಸಿದ್ದ ಭಾರತ, ಮೊದಲ ಪಂದ್ಯದಲ್ಲಿ ಜಪಾನ್ ವಿರುದ್ಧ 2-1 ಗೋಲುಗಳಿಂದ ಗೆದ್ದಿತ್ತು. ಆದರೆ ಭಾನುವಾರ ಮಲೇಷ್ಯಾ ವಿರುದ್ಧ 3-3 ಗೋಲುಗಳ ಡ್ರಾಗೆ ತೃಪ್ತಿಪಟ್ಟಿತ್ತು.
ಸದ್ಯ ಸೂಪರ್-4 ಅಂಕಪಟ್ಟಿಯಲ್ಲಿ ದಕ್ಷಿಣ ಕೊರಿಯಾ ಮತ್ತು ಭಾರತ (Hockey India) ತಲಾ 4 ಅಂಕ ಹೊಂದಿದ್ದರೂ, ಗೋಲುಗಳ ಅಂತರದಲ್ಲಿ ಕೊರಿಯಾ ಮೊದಲ ಸ್ಥಾನದಲ್ಲಿದೆ. ಭಾರತ ಫೈನಲ್ ಸ್ಥಾನ ಖಚಿತಪಡಿಸಿಕೊಳ್ಳಬೇಕಾದರೆ ಕೊರಿಯಾ ವಿರುದ್ಧ ಗೆಲ್ಲಲೇಬೇಕು. ಒಂದು ವೇಳೆ ಸೋತರೆ ಅಥವಾ ಪಂದ್ಯ ಡ್ರಾ ಆದರೆ, ಮತ್ತೊಂದು ಪಂದ್ಯದಲ್ಲಿ ಜಪಾನ್ ವಿರುದ್ಧ ಮಲೇಷ್ಯಾ ಸೋಲಬೇಕಿದೆ.
undefined
ಭಾರತದ ಪಂದ್ಯ ಆರಂಭ: ಸಂಜೆ 5ಕ್ಕೆ
ಹಾಕಿ ರ‍್ಯಾಂಕಿಂಗ್: 4ನೇ ಸ್ಥಾನಕ್ಕೆ ಕುಸಿದ ಭಾರತ
ನವದೆಹಲಿ: ಭಾರತ ಪುರುಷರ ಹಾಕಿ ತಂಡ (Indian Men's Hockey Tournament) ಎಫ್‌ಐಎಚ್ ವಿಶ್ವ ರ‍್ಯಾಂಕಿಂಗ್‌ನಲ್ಲಿ 4ನೇ ಸ್ಥಾನಕ್ಕೆ ಕುಸಿದಿದ್ದು, ಮಹಿಳಾ ತಂಡ 6ನೇ ಸ್ಥಾನಕ್ಕೆ ಪ್ರಗತಿ ಸಾಧಿಸಿದೆ. ಸೋಮವಾರ ಬಿಡುಗಡೆಗೊಂಡ ನೂತನ ರ‍್ಯಾಂಕಿಂಗ್‌ನಲ್ಲಿ ಪುರುಷರ ತಂಡ 2366.9 ಅಂಕದೊಂದಿಗೆ 4ನೇ ಸ್ಥಾನ ಪಡೆದರೆ, ನೆದರ್ಲೆಂಡ್ಸ್ ತಂಡ ಭಾರತವನ್ನು ಹಿಂದಿಕ್ಕಿ 3ನೇ ಸ್ಥಾನಕ್ಕೇರಿದೆ.
ಆಸ್ಪ್ರೇಲಿಯಾ ಅಗ್ರ ಸ್ಥಾನ ಕಾಯ್ದುಕೊಂಡಿದ್ದು, ಬೆಲ್ಜಿಯಂ ದ್ವಿತೀಯ ಸ್ಥಾನದಲ್ಲಿದೆ. ಮಹಿಳಾ ರ‍್ಯಾಂಕಿಂಗ್‌ನಲ್ಲಿ ಭಾರತ ಒಂದು ಸ್ಥಾನ ಮೇಲೇರಿ 6ನೇ ಸ್ಥಾನ ಪಡೆದಿದೆ. ಈ ಪಟ್ಟಿಯಲ್ಲಿ ನೆದರ್ಲೆಂಡ್ಸ್ ಅಗ್ರಸ್ಥಾನದಲ್ಲೇ ಮುಂದುವರಿದಿದ್ದು, ಅರ್ಜೆಂಟೀನಾ, ಆಸ್ಪ್ರೇಲಿಯಾ, ಇಂಗ್ಲೆಂಡ್, ಜರ್ಮನಿ ನಂತರದ ಸ್ಥಾನಗಳಲ್ಲಿವೆ.
ಅಂಡರ್ 23 ಮಹಿಳಾ ಹಾಕಿ: ಭಾರತಕ್ಕೆ ವೈಷ್ಣವಿ ನಾಯಕಿ
ನವದೆಹಲಿ: ಜೂನ್ 19ರಿಂದ 26ರ ವರೆಗೆ ಐರ್ಲೆಂಡ್‌ನಲ್ಲಿ ನಡೆಯಲಿರುವ ಅಂಎರ್-23 5 ದೇಶಗಳ ಹಾಕಿ ಟೂರ್ನಿಗೆ 20 ಸದಸ್ಯರ ಭಾರತ ಮಹಿಳಾ ತಂಡವನ್ನು ಪ್ರಕಟಿಸಲಾಗಿದ್ದು, ವೈಷ್ಣವಿ ಪಾಲ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಮುಮ್ತಾಜ್ ಖಾನ್ ಉಪನಾಯಕಿಯಾಗಿ ಕಾರ‍್ಯನಿರ್ವಹಿಸಲಿದ್ದಾರೆ. ಟೂರ್ನಿಯಲ್ಲಿ ಭಾರತ ಮೊದಲ ಪಂದ್ಯದಲ್ಲಿ ಜೂ.19ಕ್ಕೆ ಐರ್ಲೆಂಡ್ ವಿರುದ್ಧ ಆಡಲಿದ್ದು, ಬಳಿಕ ನೆದರ್ಲೆಂಡ್(ಜೂ.20), ಉಕ್ರೇನ್(ಜೂ.22) ಹಾಗೂ ಅಮೆರಿಕ(ಜೂ.23) ವಿರುದ್ಧ ಸೆಣಸಾಡಲಿದೆ. ರೌಂಡ್ ರಾಬಿನ್ ಮಾದರಿಯ ಟೂರ್ನಿಯ ಫೈನಲ್ ಪಂದ್ಯ ಜೂ.26ಕ್ಕೆ ನಿಗದಿಯಾಗಿದೆ.
ಫಿನ್ಲೆಂಡ್‌ನಲ್ಲಿ ತರಬೇತಿ ಪಡೆಯಲಿರುವ ಚೋಪ್ರಾ
ನವದೆಹಲಿ: ಟೋಕಿಯೋ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಜಾವೆಲಿನ್ ಎಸೆತಗಾರ ಭಾರತದ ನೀರಜ್ ಚೋಪ್ರಾ ಇನ್ನು ಫಿನ್ಲೆಂಡ್‌ನಲ್ಲಿ ತರಬೇತಿ ಪಡೆಯಲಿದ್ದಾರೆ. 24 ವರ್ಷದ ನೀರಜ್, ಸದ್ಯ ಟರ್ಕಿಯ ಗ್ಲೋರಿಯಾ ಸ್ಪೋರ್ಟ್ಸ್ ಅರೆನಾದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ನೀರಜ್ ಫಿನ್ಲೆಂಡ್‌ಗೆ ತೆರಳಿದ್ದು, ಅಲ್ಲಿಯ ಕೋರ್ಟೇನ್ ಒಲಿಂಪಿಕ್ಸ್ ತರಬೇತಿ ಕೇಂದ್ರದಲ್ಲಿ ಜೂನ್ 22ರವರೆಗೆ ಅಭ್ಯಾಸ ನಡೆಸಲಿದ್ದಾರೆ.
French Open: ಇಂದು ರಾಫಾ vs ಜೋಕೋ ಕ್ವಾರ್ಟರ್ ಫೈನಲ್ ಫೈಟ್
ಸುಮಾರು 9.8 ಲಕ್ಷ ರು. ವೆಚ್ಚದಲ್ಲಿ ನೀರಜ್ ಅವರಿಗೆ ನಾಲ್ಕು ವಾರಗಳ ತರಬೇತಿಗೆ ಸರ್ಕಾರದ ಟಾರ್ಗೆಟ್ ಒಲಿಂಪಿಕ್ಸ್ ಪೋಡಿಯಂ ಯೋಜನೆಯಡಿ(ಟಾಫ್ಸ್) ಅನುಮೋದನೆ ನೀಡಲಾಗಿದೆ ಎಂದು ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್) ತಿಳಿಸಿದೆ.