ಅಂತಾರಾಷ್ಟ್ರೀಯ ಹಾಕಿಗೆ ನಿವೃತ್ತಿ ಹೇಳಿದ ಸುನಿತಾ

By Kannadaprabha News  |  First Published Jan 3, 2020, 11:19 AM IST

ಅಂತಾರಾಷ್ಟ್ರೀಯ ಹಾಕಿ ಪಟು ಸುನಿತಾ ದಿಢೀರ್ ನಿವೃತ್ತಿ ಹೇಳಿದ್ದಾರೆ. ಇಂಜುರಿಯಿಂದ ಚೇತರಿಸಿಕೊಳ್ಳದ ಕಾರಣ ಸುನಿತಾ ಲಾಕ್ರನಿವೃತ್ತಿ ಹೇಳುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ.


ನವದೆಹಲಿ(ಜ.03): ಗಾಯದಿಂದ ಚೇತರಿಸಿಕೊಳ್ಳಲಾಗದ ಹಿನ್ನೆಲೆಯಲ್ಲಿ ಭಾರತ ಮಹಿಳಾ ಹಾಕಿ ತಂಡದ ಡಿಫೆಂಡರ್‌ ಸುನಿತಾ ಲಾಕ್ರಾ ಗುರುವಾರ ಅಂತಾರಾಷ್ಟ್ರೀಯ ಹಾಕಿಗೆ ನಿವೃತ್ತಿ ಘೋಷಿಸಿದರು. 2018ರ ಏಷ್ಯನ್‌ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡ ಭಾರತ ತಂಡದ ಭಾಗವಾಗಿದ್ದ 28 ವರ್ಷದ ಸುನಿತಾ, ಇಂಜುರಿ ಕಾರಣದಿಂದ ವಿದಾಯ ಹೇಳಿದ್ದಾರೆ.

ಇದನ್ನೂ ಓದಿ: ಹಾಕಿ: ಸಂಭವನೀಯರ ಪಟ್ಟಿಯಲ್ಲಿ ರಾಜ್ಯದ ಸುನಿಲ್‌

Latest Videos

undefined

ಬಹಳ ದಿನಗಳಿಂದ ಮೊಣಕಾಲು ನೋವಿನಿಂದ ಬಳಲುತ್ತಿದ್ದು ಶಸ್ತ್ರಚಿಕಿತ್ಸೆಗೆ ಒಳಗಾದರೂ ಇನ್ನೂ ಗುಣಮುಖರಾಗಿಲ್ಲ. ವೈದ್ಯರ ಸಲಹೆಯಂತೆ ಇನ್ನೊಮ್ಮೆ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿದ್ದು, ಅಭ್ಯಾಸದಿಂದ ಸುದೀರ್ಘಕಾಲ ದೂರವೇ ಉಳಿಯಬೇಕಾಗಿದೆ.

 

Sunita Lakra might have bid adieu to the India jersey, but her heart beats for nothing but hockey. Every dribble, every tackle - hockey, hockey and hockey. We are proud of you. pic.twitter.com/97ivbLoHfH

— Odisha Sports (@sports_odisha)

ಇದನ್ನೂ ಓದಿ: ಭುವ​ನೇ​ಶ್ವರ, ರೂರ್ಕೆ​ಲಾ​ದ​ಲ್ಲಿ 2023ರ ಪುರು​ಷರ ಹಾಕಿ ವಿಶ್ವ​ಕ​ಪ್‌

‘ಟೋಕಿಯೊ ಒಲಿಂಪಿಕ್ಸ್‌ ಅಭಿಯಾನದಿಂದ ದೂರ ಉಳಿಯಬೇಕಾಗಿ ಬಂದಿರುವುದರಿಂದ ಕನಸೇ ನುಚ್ಚುನೂರಾದಂತಾಗಿದೆ. ಈ ದಿನ ನನಗೆ ಅತ್ಯಂತ ದುಃಖದ ದಿನವಾಗಿದೆ’ ಎಂದು ಸುನಿತಾ ಹೇಳಿಕೊಂಡಿದ್ದಾರೆ. 2008ರಿಂದ ಭಾರತ ತಂಡದಲ್ಲಿದ್ದ ಸುನಿತಾ, 139 ಪಂದ್ಯಗಳನ್ನು ಆಡಿದ್ದಾರೆ. 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಆಡಿದ ತಂಡದಲ್ಲೂ ಅವರು ಸ್ಥಾನ ಪಡೆದಿದ್ದರು.
 

click me!