ಮುಂಬರುವ ಹಾಕಿ ಪ್ರೊ ಲೀಗ್ ಟೂರ್ನಿಗೆ 32 ಆಟಗಾರರನ್ನೊಳಗೊಂಡ ಸಂಭವನೀಯ ತಂಡವನ್ನು ಪ್ರಕಟಿಸಲಾಗಿದ್ದು, ಕನ್ನಡಿಗ ಎಸ್.ವಿ ಸುನಿಲ್ ಸ್ಥಾನ ಪಡೆದಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..
ನವದೆಹಲಿ(ಡಿ.29): ಮುಂದಿನ ತಿಂಗಳು ನಡೆಯಲಿರುವ ಹಾಕಿ ಪ್ರೊ ಲೀಗ್‌ಗಾಗಿ 32 ಸಂಭವನೀಯ ಆಟಗಾರರ ಭಾರತ ತಂಡ 2 ವಾರಗಳ ಕಾಲ ರಾಷ್ಟ್ರೀಯ ಶಿಬಿರದಲ್ಲಿ ಪಾಲ್ಗೊಳ್ಳಲಿದೆ.
ಭಾರತ ಹಾಕಿ ತಂಡಕ್ಕೆ ಶುಭಕೋರಿದ ಕಮಲ್ ಹಸನ್!
ಕರ್ನಾಟಕದ ಎಸ್.ವಿ. ಸುನಿಲ್ ಸೇರಿದಂತೆ 32 ಆಟಗಾರರ ಪಟ್ಟಿಯನ್ನು ಶನಿವಾರ ಹಾಕಿ ಇಂಡಿಯಾ ಪ್ರಕಟಿಸಿದೆ. ಯುವ ಸ್ಟ್ರೈಕರ್ ದಿಲ್‌ಪ್ರೀತ್‌ಗೆ ಹಿರಿಯರ ತಂಡದಲ್ಲಿ ಅವಕಾಶ ಕಲ್ಪಿಸಲಾಗಿದೆ. ಯುವ ಆಟಗಾರರು ಹಾಗೂ ಹಿರಿಯ ಆಟಗಾರರಿಂದ ತಂಡ ಕೂಡಿದೆ.
2023ರ ಹಾಕಿ ವಿಶ್ವಕಪ್‌ಗೆ ಭಾರತ ಆತಿಥ್ಯ; ದಿನಾಂಕ ಪ್ರಕಟ!
ಸಂಭವನೀಯ ತಂಡ: ಶ್ರೀಜೇಶ್, ಕ್ರಿಶನ್, ಹರ್ಮನ್‌ಪ್ರೀತ್, ದಿಲ್‌ಪ್ರೀತ್, ಸುರೇಂದರ್, ಬೀರೇಂದ್ರ, ರುಪೀಂದರ್, ಗುರೀಂದರ್, ಅಮಿತ್, ಕೊತಾಜಿತ್, ಮನ್‌ಪ್ರೀತ್, ಹಾರ್ದಿಕ್, ನೀಲಕಂಠ, ವಿವೇಕ್, ಸಿಮ್ರನ್‌ಜಿತ್, ಆಕಾಶ್‌ದೀಪ್, ರಮಣ್‌ದೀಪ್, ಸುನಿಲ್, ಮನ್‌ದೀಪ್, ಲಲಿತ್, ಗುರುಸಾಹಿಬ್‌ಜಿತ್, ಶಂಶೀರ್, ಸೂರಜ್, ಜರ್ಮನ್‌ಪ್ರೀತ್, ದಿಪ್ಸನ್, ನೀಲಮ್, ಜಸ್‌ಕರಣ್, ರಾಜ್‌ಕುಮಾರ್, ಗುರ್ಜಂತ್, ಸುಮಿತ್, ಶೀಲಾನಂದ, ಚಿಂಗ್ಲೆನ್ಸಾನ.