FIH Pro League ಕಿವೀಸ್‌ ವಿರುದ್ದ ಮತ್ತೊಮ್ಮೆ ಭರ್ಜರಿ ಜಯ ದಾಖಲಿಸಿದ ಭಾರತ ಹಾಕಿ ತಂಡ..!

By Kannadaprabha News  |  First Published Nov 5, 2022, 8:08 AM IST

2022-23ರ ಪ್ರೊ ಲೀಗ್‌ ಹಾಕಿ ಟೂರ್ನಿಯಲ್ಲಿ ಮುಂದುವರೆದ ಭಾರತದ ಗೆಲುವಿನ ನಾಗಾಲೋಟ
ನ್ಯೂಜಿಲೆಂಡ್ ವಿರುದ್ದದ ಎರಡನೇ ಪಂದ್ಯದಲ್ಲೂ ಭಾರತಕ್ಕೆ ಭರ್ಜರಿ ಗೆಲುವು
ಆರಂಭಿಕ ಹಿನ್ನಡೆಯನ್ನು ಮೆಟ್ಟಿನಿಂದ ಭಾರತ ಹಾಕಿ ತಂಡ


ಭುವನೇಶ್ವರ(ನ.05): 2022-23ರ ಪ್ರೊ ಲೀಗ್‌ ಹಾಕಿ ಟೂರ್ನಿಯಲ್ಲಿ ನ್ಯೂಜಿಲೆಂಡ್‌ ವಿರುದ್ಧ ಭಾರತ 2ನೇ ಗೆಲುವು ದಾಖಲಿಸಿದೆ. ಶುಕ್ರವಾರದ ಪಂದ್ಯದಲ್ಲಿ ಭಾರತ 7-4ರಿಂದ ಜಯಗಳಿಸಿತು. ಮೊದಲ ಕ್ವಾರ್ಟರಲ್ಲೇ ನ್ಯೂಜಿಲೆಂಡ್‌ 3 ಗೋಲು ಬಾರಿಸಿತಾದರೂ ಬಳಿಕ ಭಾರತ ಪುಟಿದೆದ್ದಿತು. ಸತತ 6 ಗೋಲು ಬಾರಿಸಿ ಪಂದ್ಯವನ್ನು ತನ್ನ ತೆಕ್ಕೆತೆ ಪಡೆದುಕೊಂಡಿತು. ಹರ್ಮನ್‌ಪ್ರೀತ್‌ ಸಿಂಗ್‌, ಕಾರ್ತಿ ಸೆಲ್ವಂ ತಲಾ 2, ರಾಜ್‌ಕುಮಾರ್‌, ಸುಖ್‌ಜೀತ್‌ ಸಿಂಗ್‌, ಜುಗ್‌ರಾಜ್‌ ಸಿಂಗ್‌ ತಲಾ 1 ಗೋಲು ಬಾರಿಸಿದರು. ನ್ಯೂಜಿಲೆಂಡ್‌ ವಿರುದ್ಧದ ಮೊದಲ ಪಂದ್ಯದಲ್ಲೂ ಭಾರತ ಗೆದ್ದಿತ್ತು.

ಸಾತ್ವಿಕ್‌-ಚಿರಾಗ್‌ಗೆ ಸೋಲು

Tap to resize

Latest Videos

ಬರ್ಲಿನ್‌: ಹೈಲೋ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ಪುರುಷ ಡಬಲ್ಸ್‌ ಜೋಡಿ ಚಿರಾಗ್‌ ಶೆಟ್ಟಿ-ಸಾತ್ವಿಕ್‌ ಕ್ವಾರ್ಟರ್‌ಫೈನಲ್‌ನಲ್ಲಿ ಅಭಿಯಾನ ಕೊನೆಗೊಳಿಸಿದೆ. ಶುಕ್ರವಾರ ಈ ಜೋಡಿ ಇಂಗ್ಲೆಂಡ್‌ನ ಬೆನ್‌ ಲೇನ್‌-ಸೀನ್‌ ವೆಂಡಿ ವಿರುದ್ಧ 17-21, 14-21ರಿಂದ ಪರಾಭವಗೊಂಡಿತು. ಇದೇ ವೇಳೆ ಮಹಿಳಾ ಡಬಲ್ಸ್‌ನಲ್ಲಿ ತ್ರೀಸಾ ಜಾಲಿ-ಗಾಯತ್ರಿ ಗೋಪಿಚಂದ್‌ ಸೆಮಿಫೈನಲ್‌ಗೆ ಲಗ್ಗೆ ಇಟ್ಟರು. ಮಹಿಳಾ ಸಿಂಗಲ್ಸ್‌ನಲ್ಲಿ ಮಾಳವಿಕಾ ಬನ್ಸೋದ್‌ ಸೋತು ಹೊರಬಿದ್ದರು.

ಸ್ಕ್ವಾಶ್‌: ಭಾರತಕ್ಕೆ ಏಷ್ಯನ್‌ ಕೂಟದಲ್ಲಿ ಚೊಚ್ಚಲ ಪ್ರಶಸ್ತಿ

ಚೆಂಗ್ಯು(ದ.ಕೊರಿಯಾ): ಭಾರತ ಪುರುಷರ ತಂಡ ಮೊತ್ತಮೊದಲ ಬಾರಿ ಏಷ್ಯನ್‌ ಸ್ಕಾ$್ವಶ್‌ ಟೀಮ್‌ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದೆ. ಶುಕ್ರವಾರ ನಡೆದ ಫೈನಲ್‌ ಹಣಾಹಣಿಯಲ್ಲಿ ಭಾರತ, ಕುವೈತ್‌ ವಿರುದ್ಧ 2-0 ಅಂತರದಲ್ಲಿ ಗೆಲುವು ಸಾಧಿಸಿತು. ತಾರಾ ಆಟಗಾರ ರಮಿತ್‌ ತಂಡನ್‌ ಅಲಿ ಅರಮೇಜಿ ವಿರುದ್ಧ 11-​5, 11-​7, 11-​4 ಅಂತರದಲ್ಲಿ ಗೆದ್ದರೆ, ಸೌರವ್‌ ಘೋಷಲ್‌ ಅಮ್ಮರ್‌ ಅಲ್ತಮಿಮಿ ವಿರುದ್ಧ 11-​9, 11-​2, 11-​3ರಿಂದ ಜಯಗಳಿಸಿ ಭಾರತಕ್ಕೆ ಪ್ರಶಸ್ತಿ ತಂದುಕೊಟ್ಟರು. ಕಳೆದ 2 ಆವೃತ್ತಿಗಳಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಭಾರತ ಈ ಚಿನ್ನಕ್ಕೆ ಮುತ್ತಿಟ್ಟಿತು. ಇದೇ ವೇಳೆ ಮಹಿಳಾ ತಂಡ ಸೆಮಿಫೈನಲ್‌ನಲ್ಲಿ ಮಲೇಷ್ಯಾ ವಿರುದ್ಧ ಸೋತು ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿತು.

ಭಾರತೀಯ ಒಲಿಂಪಿಕ್‌ ಸಂಸ್ಥೆ ಸಂವಿಧಾನ ತಿದ್ದುಪಡಿಗೆ ಅಭಿನವ್‌ ಬಿಂದ್ರಾ ಮೆಚ್ಚುಗೆ

ಪ್ರೊ ಕಬಡ್ಡಿ ಲೀಗ್: ಡೆಲ್ಲಿಗೆ ಸತತ 6ನೇ ಸೋಲು

ಪುಣೆ: 9ನೇ ಆವೃತ್ತಿ ಪ್ರೊ ಕಬಡ್ಡಿಯಲ್ಲಿ ಹಾಲಿ ಚಾಂಪಿಯನ್‌ ದಬಾಂಗ್‌ ಡೆಲ್ಲಿ ಸತತ 6ನೇ ಸೋಲುಂಡಿದೆ. ಶುಕ್ರವಾರ ಜೈಪುರ ಪಿಂಕ್‌ಪ್ಯಾಂಥ​ರ್‍ಸ್ ವಿರುದ್ಧ 40-45 ಅಂಕಗಳಿಂದ ಡೆಲ್ಲಿ ಪರಾಭವಗೊಂಡಿತು. ಜೈಪುರ 6ನೇ ಜಯ ದಾಖಲಿಸಿತು. ಅಶು ಮಲಿಕ್‌(13), ನಾಯಕ ನವೀನ್‌(12) ಮಿಂಚಿದರೂ ಡೆಲ್ಲಿಗೆ ಗೆಲುವು ದಕ್ಕಲಿಲ್ಲ. ಅರ್ಜುನ್‌ ದೇಸ್ವಾಲ್‌ 16 ರೈಡ್‌ ಅಂಕದೊಂದಿಗೆ ಜೈಪುರಕ್ಕೆ ಜಯ ತಂದುಕೊಟ್ಟರು. 

ಶುಕ್ರವಾರದ ಮೊದಲ ಪಂದ್ಯದಲ್ಲಿ ಯು ಮುಂಬಾ ವಿರುದ್ಧ ಪಾಟ್ನಾ ಪೈರೇಟ್ಸ್‌ 34-31 ಅಂಕಗಳಿಂದ ಜಯಗಳಿಸಿತು. ಇದರೊಂದಿಗೆ ಪಾಟ್ನಾ ಕೊನೆ ಪಂದ್ಯಗಳಲ್ಲಿ ಅಜೇಯವಾಗಿ ಉಳಿದರೆ, ಮುಂಬಾ 4ನೇ ಸೋಲು ಕಂಡಿತು.

ಇಂದಿನ ಪಂದ್ಯಗಳು: 
ಗುಜರಾತ್‌-ಬೆಂಗಾಲ್‌, ಸಂಜೆ 7.30ಕ್ಕೆ, 
ತಲೈವಾಸ್‌-ಟೈಟಾನ್ಸ್‌, ರಾತ್ರಿ 8.30ಕ್ಕೆ, 
ಹರ್ಯಾಣ-ಯೋಧಾಸ್‌, ರಾತ್ರಿ 9.30ಕ್ಕೆ

click me!