
ನವದೆಹಲಿ: ಒಂದು ಜಿಲ್ಲೆ, ಒಂದು ತಾಲೂಕು, ಒಂದು ಗ್ರಾಮ, ಒಂದು ಅಕಾಡೆಮಿಯಿಂದ ಒಬ್ಬ ಆಟಗಾರ ಭಾರತ ತಂಡ ಪ್ರತಿನಿಧಿಸಿದರೆ ಅದೇ ದೊಡ್ಡದು. ಆದರೆ ಭಾರತೀಯ ಹಾಕಿ ಕ್ಷೇತ್ರದಲ್ಲಿ ಒಂದು ಕುಟುಂಬಕ್ಕೆ ಸೇರಿದ ಸೋನಿಪತ್‌ನ ಒಂದು ಅಕಾಡೆಮಿಯಿಂದ ಬರೋಬ್ಬರಿ ಐವರು ವಿಶ್ವಕಪ್‌ನಲ್ಲಿ ದೇಶವನ್ನು ಪ್ರತಿನಿಧಿಸಿದ್ದಾರೆ.
1998ರಲ್ಲಿ ನೆದರ್‌ಲೆಂಡ್ಸ್‌ನಲ್ಲಿ ನಡೆದಿದ್ದ ಮಹಿಳಾ ವಿಶ್ವಕಪ್‌ನಲ್ಲಿ ಪ್ರೀತಂ ರಾಣಿ ಸಿವಾಚ್ ಭಾರತ ಪರ ಆಡಿದ್ದರು. 28 ವರ್ಷ ಬಳಿಕ ಈ ಬಾರಿ ಅವರ ಪುತ್ರ, ಯಶ್‌ದೀಪ್ ಸಿವಾಚ್ ಪುರುಷರ ವಿಶ್ವಕಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಈ ಮೂಲಕ ವಿಶ್ವಕಪ್ ಆಡಿದ ಮೊದಲ ತಾಯಿ-ಮಗ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ಇನ್ನು ಪ್ರೀತಂ ರಾಣಿ ಅವರು ತಮ್ಮ ಪತಿ, ಹಾಕಿ ಕೋಚ್ ಕೂಡಾ ಆಗಿರುವ ಕುಲ್ದೀಪ್ ಸಿಚಾಚ್ ಜೊತೆಗೆ ಸೋನಿಪತ್‌ನಲ್ಲಿ ಅಕಾಡೆಮಿ ನಡೆಸುತ್ತಿದ್ದಾರೆ. ಈ ಅಕಾಡೆಮಿಯಲ್ಲಿ ತರಬೇತಿ ಪಡೆದಿರುವ ನಾಲ್ವರು ಈ ಬಾರಿ ಮಹಿಳಾ ವಿಶ್ವಕಪ್‌ನಲ್ಲಿ ಆಡುತ್ತಿದ್ದಾರೆ. ಡಿಫೆಂಡರ್ ಜ್ಯೋತಿ, ಮಿಡ್‌ಫೀಲ್ಡರ್ ನೇಹಾ ಗೋಯಲ್, ಶಿಲ್ಪಿ ದಾಬಸ್ ಹಾಗೂ ಫಾರ್ವರ್ಡರ್ ಸಾಕ್ಷಿ ರಾಣಾ ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
ಆಮ್ಸ್‌ಟೆಲ್ವೀನ್: ಹಾಕಿ ವಿಶ್ವಕಪ್‌ನಲ್ಲಿ ಭಾರತದ ಪುರುಷರ ಬಳಿಕ ಮಹಿಳಾ ತಂಡವೂ ಅಂತಿಮ-8ರ ಘಟ್ಟ ಪ್ರವೇಶಿಸಿದೆ. ಗುರುವಾರ ಇಂಗ್ಲೆಂಡ್ ವಿರುದ್ಧ ನಿರ್ಣಾಯಕ ಪಂದ್ಯದಲ್ಲಿ ಗೋಲು ರಹಿತ ಡ್ರಾ ಸಾಧಿಸಿದ ಭಾರತ ಮಹಿಳೆಯರು, ‘ಡಿ’ ಗುಂಪಿನಲ್ಲಿ 2ನೇ ಸ್ಥಾನಿಯಾಗಿ ಮುಂದಿನ ಸುತ್ತಿಗೇರಿತು. ತಂಡ ಆಡಿರುವ 3 ಪಂದ್ಯಗಳಲ್ಲಿ 1 ಗೆಲುವು, 2 ಡ್ರಾದೊಂದಿಗೆ 5 ಅಂಕ ಸಂಪಾದಿಸಿದೆ. ಇಂಗ್ಲೆಂಡ್ 4 ಅಂಕದೊಂದಿಗೆ ಮುಂದಿನ ಸುತ್ತಿಗೇರುವ ಅವಕಾಶ ಕಳೆದುಕೊಂಡಿತು.
ಚೀನಾ ವಿರುದ್ಧ ಡ್ರಾ ಸಾಧಿಸಿ, ದಕ್ಷಿಣ ಆಫ್ರಿಕಾ ವಿರುದ್ಧ 6-1ರಲ್ಲಿ ಗೆದ್ದಿದ್ದ ಭಾರತಕ್ಕೆ ಇಂಗ್ಲೆಂಡ್ ವಿರುದ್ಧ ಕನಿಷ್ಠ ಡ್ರಾ ಮಾಡಿಕೊಳ್ಳಬೇಕಿತ್ತು. ಪಾಸಿಂಗ್, ಚೆಂಡಿನ ಮೇಲಿನ ನಿಯಂತ್ರಣ, ಪೆನಾಲ್ಟಿ ಕಾರ್ನರ್‌ಗಳಲ್ಲಿ ಭಾರತ ನೀರಸ ಪ್ರದರ್ಶನ ತೋರಿದರೂ ಸೋಲಿನಿಂದ ಪಾರಾಯಿತು. ಆರಂಭಿಕ 15 ನಿಮಿಷಗಳಲ್ಲೇ 3 ಪೆನಾಲ್ಟಿ ಕಾರ್ನರ್ ಪಡೆದಿದ್ದ ತಂಡ, ಆ ಬಳಿಕವೂ ಸಿಕ್ಕ ಅವಕಾಶಗಳನ್ನು ಕೈಚೆಲ್ಲಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.