
ಲಂಡನ್ (ಜೂ.23) ಪಾಕಿಸ್ತಾನ ವಿರುದ್ದ ಗೆಲುವಿನ ಸಂಭ್ರಮಾಚರಣೆ ಮುಂದುವರಿದಿದೆ. ಅದು ಆಪರೇಶನ್ ಸಿಂದೂರ್ ಆಗಿರಲಿ, ಕ್ರಿಕೆಟ್, ಫುಟ್ಬಾಲ್, ಹಾಕಿ ಆಗಿರಲಿ ಭಾರತಕ್ಕೆ ಗೆಲುವು. FIH ಪ್ರೋ ಲೀಗ್ ಟೂರ್ನಿಯಲ್ಲಿ ಹರ್ಮನ್‌ಪ್ರೀತ್ ಸಿಂಗ್ ನೇತೃತ್ವದ ಹಾಕಿ ಇಂಡಿಯಾ 4-3 ಅಂತರದಲ್ಲಿ ಪಾಕಿಸ್ತಾನ ಮಣಿಸಿದೆ. ಆರಂಭದಲ್ಲೇ ಭಾರತ ತೀವ್ರ ಮುನ್ನಡೆ ಸಾಧಿಸಿತ್ತು. 3-1 ಅಂತರದಲ್ಲಿ ಮುನ್ನಡೆ ಸಾಧಿಸಿತ್ತು. ಭಾರತ 4ನೇ ಗೋಲು ಸಿಡಿಸಿದ ಬೆನ್ನಲ್ಲೇ ಪಾಕಿಸ್ತಾನ ಸತತ 2 ಗೋಲು ಸಿಡಿಸಿ ಆಂತಕ ಸೃಷ್ಟಿಸಿತ್ತು. ಆಧರೆ ಭಾರತ 4-1 ಅಂತರದಲ್ಲಿ ಪಂದ್ಯ ಗೆದ್ದುಕೊಂಡಿತು.
ಭಾರತದ ಪರ ಅಭಿಷೇಕ್, ನಿಲಕಂಠ ಶರ್ಮಾ, ಸುಖಜಿತ್ ಸಿಂಗ್ ಹಾಗೂ ರಾಜೇಂದ್ರ ಸಿಂಗ್ ಗೋಲು ಸಿಡಿಸಿದರು. ಇತ್ತ ಪಾಕಿಸ್ತಾನ ಪರ ಅಹಮ್ಮದ್ ನದೀಮ್, ಅಬು ಮೊಹಮ್ಮದ್ ಹಾಗೂ ಮೊಯಿನ್ ಶಕೀಲ್ ಗೋಲು ಸಿಡಿಸಿದರು. ಭಾರತದ ದಿಟ್ಟ ಹೋರಾಟದಿಂದ ಗೆಲುವಿನ ಸಂಭ್ರಮಾಚರಣೆ ನಡೆಸಿದೆ.
ಪಂದ್ಯ ಆರಂಭಗೊಂಡ 8ನೇ ನಿಮಿಷದಲ್ಲಿ ಪಾಕಿಸ್ತಾನ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶ ಸದುಪಯೋಗ ಪಡಿಸಿತು. ಪರಿಣಾಮ ಪಾಕಿಸ್ತಾನ ಮುನ್ನಡೆ ಸಾಧಿಸಿತು. ಆರಂಭಿಕ ಹಿನ್ನಡೆಯಲ್ಲಿದ್ದ ಭಾರತ ಅಷ್ಟೇ ವೇಗದಲ್ಲಿ ಪುಟಿದೆದ್ದಿತು. ಇತ್ತ ಫಸ್ಟ್ ಕ್ವಾರ್ಟರ್‌ನಲ್ಲಿ ಭಾರತ ಹಲವು ಪೆನಾಲ್ಟಿ ಕಾರ್ನರ್ ಅವಕಾಶ ಪಡೆಯಿತು. ಆದರೆ ಗೋಲಾಗಿ ಪರಿವರ್ತನೆ ಆಗಲಿಲ್ಲ. ಸೆಕೆಂಡ್ ಕ್ವಾರ್ಟರ್‌ನಲ್ಲಿ ಅಭಿಷೇಕ್ ಸಿಡಿಸಿದ ಗೋಲಿನಿಂದ ಭಾರತ ಖಾತೆ ತೆರೆದು ಹೋರಾಟ ಮುಂದುವರಿಸಿತು. ಸತತ ಸೋಲಿನಿಂದ ಪಾಕಿಸ್ತಾನ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
ಪಾಕಿಸ್ತಾನ ವಿರುದ್ದ ಗೆಲುವು ದಾಖಲಿಸಿದ ಭಾರತ ಜೂನ್ 25ಕ್ಕೆ ಆತಿಥೇಯ ಇಂಗ್ಲೆಂಡ್ ವಿರುದ್ದ ಹೋರಾಟ ನಡೆಸಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.