Hockey World cup ಜಪಾನ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು, 8-0 ಗೋಲುಗಳ ಸುರಿಮಳೆ!

By Suvarna News  |  First Published Jan 26, 2023, 9:05 PM IST

ಜಪಾನ್ ವಿರುದ್ದ ನಡದ ಹಾಕಿ ವಿಶ್ವಕಪ್ ಕ್ಲಾಸಿಫಿಕೇಶನ್ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ದಾಖಲಿಸಿದೆ. ಜಪಾನ್ ವಿರುದ್ದ ಭಾರತ 8-0 ಅಂತರದಲ್ಲಿ ಗೆಲುವು ದಾಖಲಿಸಿದೆ.


ಒಡಿಶಾ(ಜ.26): ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಅವಕಾಶ ಮಿಸ್ ಮಾಡಿಕೊಂಡ ಭಾರತ, ಇದೀಗ ಜಪಾನ್ ವಿರುದ್ಧ 5-0 ಅಂತರದ ಗೋಲು ಸಿಡಿಸಿ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ 9ನೇ ಸ್ಥಾನ ಖಚಿತಪಡಿಸಿಕೊಂಡಿದೆ. ಕ್ಲಾಸಿಫಿಕೇಶನ್ ಪಂದ್ಯದಲ್ಲಿ ಭಾರತ ಅಬ್ಬರಿಸಿತು. ಜಪಾನ್ ವಿರುದ್ಧ ಮೊದಲ ಕ್ವಾರ್ಟರ್‌ಲ್ಲಿ ಯಾವುದೇ ಗೋಲು ದಾಖಲಾಗಲಿಲ್ಲ. ಆದರೆ,3 ಹಾಗೂ 4 ಕ್ವಾರ್ಟರ್‌ನಲ್ಲಿ ಗೋಲು ಸಿಡಿಸಿ ಭರ್ಜರಿ 8-0 ಅಂತರದಿಂದ ಗೆಲುವು ದಾಖಲಿಸಿತು.

ಮೊದಲ ಕ್ವಾರ್ಟರ್‌ನಲ್ಲಿ ಭಾರತಕ್ಕೆ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಸಿಡಿಸುವ ಅವಕಾಶ ಒಲಿದು ಬಂದಿತ್ತು. ಆದರೆ ಗೋಲಾಗಿ ಪರಿವರ್ತನೆಯಾಗಲಿಲ್ಲ. ಹೀಗಾಗಿ ಮೊದಲ ಕ್ವಾರ್ಟರ್ ಉಭಯ ತಂಡಗಳು ಗೋಲಿಲ್ಲದೆ ನಿರಾಸೆ ಅನುಭವಿಸಿತು. ಆದರೆ ಎರಡನೇ ಕ್ವಾರ್ಟರ್‌ನಲ್ಲಿ ಜಪಾನ್ ಮೇಲಿಂದ ಮೇಲೆ ಪೆನಾಲ್ಟಿ ಕಾರ್ನರ್ ಅವಕಾಶ ಪಡೆಯಿತು. ಭಾರತದ ಬಲಿಷ್ಠ ರಕ್ಷಣೆಯಿಂದ ಯಾವುದೇ ಗೋಲು ದಾಖಲಾಗಲಿಲ್ಲ. 2ನೇ ಕ್ವಾರ್ಟರ್ ಕೂಡ ಗೋಲಿಲ್ಲದೆ ಅಂತ್ಯಗೊಂಡಿತು.

Tap to resize

Latest Videos

undefined

Hockey World Cup: ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟ ಜರ್ಮನಿ, ಕೊರಿಯಾ..!

33ನೇ ನಿಮಿಷದಲ್ಲಿ ಭಾರತ ಮೊದಲ ಗೋಲು ಸಿಡಿಸಿತು. ಪೆನಾಲ್ಟಿ ಕಾರ್ನರ್ ಅವಕಾಶವನ್ನು ಮನ್ದೀಪ್ ಸಿಂಗ್ ಗೋಲಾಗಿ ಪರಿವರ್ತಿಸಿದರು. ಈ ಮೂಲಕ ಜಪಾನ್ ವಿರುದ್ದ ಭಾರತ ಗೋಲಿನ ಖಾತ ತೆರೆಯಿತು. 36ನೇ ನಿಮಿಷದಲ್ಲಿ ಅಭಿಷೇಕ್ ಸಿಡಿಸಿದ ಗೋಲಿನಿಂದ ಭಾರತ 2-0 ಮುನ್ನಡೆ ಕಾಯ್ದುಕೊಂಡಿತು.

40 ನಿಮಿಷದಲ್ಲಿ ಭಾರತ ಪೆನಾಲ್ಟಿ ಕಾರ್ನರ್ ಅವಕಾಶ ಪಡೆಯಿತು. ಆದರೆ ರಿಬೌಂಡ್ ಮೂಲಕ ವಿವೆಕ್ ಸಾಗರ್ ಗೋಲು ಸಿಡಿಸಿದರು. 44ನೇ ನಿಮಿಷದಲ್ಲಿ ಅಭಿಷೇಕ್ ಮತ್ತೊಂದು ಗೋಲು ಸಿಡಿಸಿ ಮಿಂಚಿದರು. ಈ ಮೂಲಕ 4-0 ಅಂತರ ಕಾಯ್ದುಕೊಂಡಿತು. ಮೂರನೇ ಕ್ವಾರ್ಟರ್ ಅಂತ್ಯದ ವೇಳೆ ಭಾರತ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು.

ನಾಲ್ಕನೇ ಕ್ವಾರ್ಟರ್ ಆರಂಭದಲ್ಲೇ ಭಾರತ ಗೋಲು ಸಿಡಿಸಿ ಸಂಭ್ರಮಿಸಿತು. 46ನೇ ನಿಮಿಷದಲ್ಲಿ ಹರ್ಮನ್‌ಪ್ರೀತ್ ಸಿಂಗ್ ಗೋಲು ಸಿಡಿಸಿದರು. 46ನೇ ನಿಮಿಷದಿಂದ ಭಾರತ ಸತತ ಗೋಲು ಸಿಡಿಸಿ ಸಂಭ್ರಮಿಸಿತು. 59ನೇ ನಿಮಿಷದಲ್ಲಿ 2 ಗೋಲು ಸಿಡಿಸಿದರೆ. 60ನೇ ನಿಮಿಷದಲ್ಲಿ ಮತ್ತೊಂದು ಗೋಲು ಸಿಡಿಸಿತು. ಈ ಮೂಲಕ ಭಾರತ 8-0 ಅಂತರದಲ್ಲಿ ಗೆಲುವು ದಾಖಲಿಸಿತು. 

 

Hockey World Cup: ಅಂತಿಮ 8ರ ಸುತ್ತಿಗೆ ಇಂಗ್ಲೆಂಡ್‌ ಲಗ್ಗೆ

ಸತತ 12ನೇ ಬಾರಿ ಸೆಮೀಸ್‌ಗೆ ಆಸ್ಪ್ರೇಲಿಯಾ!
ಜೆರಿಮಿ ಹೇವರ್ಡ್‌ 4 ನಿಮಿಷಗಳಲ್ಲಿ 2 ಪೆನಾಲ್ಟಿಕಾರ್ನರ್‌ಗಳನ್ನು ಗೋಲಾಗಿಸಿದ್ದರ ಜೊತೆಗೆ 9 ನಿಮಿಷಗಳಲ್ಲಿ ಒಟ್ಟು 4 ಗೋಲು ಬಾರಿಸಿದ ಆಸ್ಪ್ರೇಲಿಯಾ, ಸ್ಪೇನ್‌ ವಿರುದ್ಧ ರೋಚಕ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ 4-3 ಗೋಲುಗಳ ಗೆಲುವು ಸಾಧಿಸಿ ಸತತ 12ನೇ ಬಾರಿಗೆ ಹಾಕಿ ವಿಶ್ವಕಪ್‌ನ ಸೆಮಿಫೈನಲ್‌ ಪ್ರವೇಶಿಸಿದೆ.1978ರಿಂದ 2018ರ ನಡುವಿನ 11 ವಿಶ್ವಕಪ್‌ಗಳಲ್ಲೂ ಸೆಮಿಫೈನಲ್‌ಗೇರಿದ್ದ ಆಸ್ಪ್ರೇಲಿಯಾ, 1986, 2010, 2014ರಲ್ಲಿ ಚಾಂಪಿಯನ್‌ ಆಗಿತ್ತು. ಸ್ಪೇನ್‌ನ ನಾಯಕ ಮಾರ್ಕ್ ಮಿರಾಲೆಸ್‌, ಪಂದ್ಯ ಮುಕ್ತಾಯಕ್ಕೆ ಕೇವಲ 5 ನಿಮಿಷ ಬಾಕಿ ಇದ್ದಾಗ ಪೆನಾಲ್ಟಿಸ್ಟೊ್ರೕಕ್‌ ವ್ಯರ್ಥಗೊಳಿಸಿದರು. ಈ ಹಂತದಲ್ಲಿ 3-4ರ ಹಿನ್ನಡೆಯಲ್ಲಿದ್ದ ಸ್ಪೇನ್‌, ಪೆನಾಲ್ಟಿಸ್ಟೊ್ರೕಕ್‌ನಲ್ಲಿ ಗೋಲು ಬಾರಿಸಿದ್ದರೆ ಪಂದ್ಯ ಪೆನಾಲ್ಟಿಶೂಟೌಟ್‌ಗೆ ಹೋಗುವ ಸಾಧ್ಯತೆ ಇರುತ್ತಿತ್ತು.

click me!