ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ಕ್ವಾರ್ಟರ್ ಫೈನಲ್‌ಗೆ ಲಗ್ಗೆ
ಸ್ಪೇನ್ ವಿರುದ್ದ 4-0 ಅಂತರದಲ್ಲಿ ಗೆಲುವು ಸಾಧಿಸಿದ ಇಂಗ್ಲೆಂಡ್
ಭಾರತವನ್ನು ಹಿಂದಿಕ್ಕಿ 'ಡಿ' ಗುಂಪಿನಲ್ಲಿ ಅಗ್ರಸ್ಥಾನ ಪಡೆದ ಇಂಗ್ಲೆಂಡ್ ಹಾಕಿ ತಂಡ
ಭುವನೇಶ್ವರ(ಜ.20): 15ನೇ ಆವೃತ್ತಿ ಹಾಕಿ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ನೇರವಾಗಿ ಕ್ವಾರ್ಟರ್ ಫೈನಲ್‌ಗೇರಿದೆ. ‘ಡಿ’ ಗುಂಪಿನ ಕೊನೆ ಪಂದ್ಯದಲ್ಲಿ ಸ್ಪೇನ್ ವಿರುದ್ಧ 4-0 ಗೋಲುಗಳ ಭರ್ಜರಿ ಗೆಲುವು ಸಾಧಿಸಿದ ಇಂಗ್ಲೆಂಡ್ 7 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದುಕೊಂಡಿತು. ಸೋಲಿನ ಹೊರತಾಗಿಯೂ 3 ಅಂಕದೊಂದಿಗೆ 3ನೇ ಸ್ಥಾನ ಪಡೆದ ಸ್ಪೇನ್ ಕ್ರಾಸ್ ಓವರ್ಸ್ ಹಂತಕ್ಕೆ ಪ್ರವೇಶಿಸಿತು.
ಪಂದ್ಯಕ್ಕೂ ಮುನ್ನ ಭಾರತಕ್ಕಿಂತ 5 ಗೋಲುಗಳ ವ್ಯತ್ಯಾಸದಲ್ಲಿ ಮುಂದಿದ್ದ ಇಂಗ್ಲೆಂಡ್ ಮತ್ತಷ್ಟು ಗೋಲುಗಳನ್ನು ಬಾರಿಸಿ ಅಂತರವನ್ನು ಹೆಚ್ಚಿಸಿತು. ಆಡಿದ ಮೂರು ಪಂದ್ಯಗಳಲ್ಲೂ ಇಂಗ್ಲೆಂಡ್ ಒಂದೂ ಗೋಲು ಬಿಟ್ಟುಕೊಡಲಿಲ್ಲ ಎನ್ನುವುದು ವಿಶೇಷ. ಕ್ರಾಸ್ ಓವರ್‌ನಲ್ಲಿ ಸ್ಪೇನ್‌ಗೆ ಮಲೇಷ್ಯಾ ಎದುರಾಗಲಿದೆ.
14-0 ದಾಖಲೆ ಜಯ ಸಾಧಿಸಿ ಕ್ವಾರ್ಟರ್‌ಗೆ ಡಚ್
undefined
ಭುವನೇಶ್ವರ: ದಾಖಲೆಯ 14-0 ಗೋಲುಗಳ ಅಂತರದಲ್ಲಿ ಚಿಲಿ ವಿರುದ್ಧ ಜಯಭೇರಿ ಬಾರಿಸಿದ 3 ಬಾರಿ ಚಾಂಪಿಯನ್ ನೆದರ್‌ಲೆಂಡ್‌್ಸ, 15ನೇ ಆವೃತ್ತಿ ಹಾಕಿ ವಿಶ್ವಕಪ್‌ನಲ್ಲಿ ನೇರವಾಗಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದೆ. ಮೊದಲೆರಡು ಪಂದ್ಯಗಳಲ್ಲೂ ಗೆದ್ದಿದ್ದ ನೆದರ್‌ಲೆಂಡ್‌್ಸ ಇದರೊಂದಿಗೆ ‘ಸಿ’ ಗುಂಪಿನಲ್ಲಿ 9 ಅಂಕಗಳೊಂದಿಗೆ ಅಗ್ರಸ್ಥಾನಿಯಾದರೆ, ಚಿಲಿ ಕೊನೆ ಸ್ಥಾನದೊಂದಿಗೆ ಅಭಿಯಾನ ಕೊನೆಗೊಳಿಸಿತು.
23ನೇ ರ‍್ಯಾಂಕಿಂಗ್‌ನ ಚಿಲಿ ವಿರುದ್ಧ ಆರಂಭದಲ್ಲೇ ಪ್ರಾಬಲ್ಯ ಸಾಧಿಸಿದ ನೆದರ್‌ಲೆಂಡ್‌್ಸ ಪೆನಾಲ್ಟಿ ಕಾರ್ನರ್ ಮೂಲಕವೇ 6 ಗೋಲು ದಾಖಲಿಸಿತು. 6ನೇ ನಿಮಿಷದಲ್ಲೇ ಗೋಲು ಖಾತೆ ತೆರೆದಿದ್ದ ತಂಡ 2ನೇ ಕ್ವಾರ್ಟರ್‌ನಲ್ಲಿ 4, 3ನೇ ಕ್ವಾರ್ಟರ್ 6, ಕೊನೆ ಕ್ವಾರ್ಟರ್‌ನಲ್ಲಿ 3 ಗೋಲು ಬಾರಿಸಿತು. ಗುರುವಾರ ನ್ಯೂಜಿಲೆಂಡ್ ವಿರುದ್ಧ 3-2 ಗೋಲುಗಳಿಂದ ಗೆದ್ದ ಮಲೇಷ್ಯಾ ಗುಂಪಿನಲ್ಲಿ 2ನೇ ಸ್ಥಾನ ಪಡೆಯಿತು. ಈ ಎರಡೂ ತಂಡಗಳು ಕ್ರಾಸ್ ಓವರ್ಸ್ ಹಂತ ಪ್ರವೇಶಿಸಿವೆ.
Hockey World cup ವೇಲ್ಸ್ ವಿರುದ್ಧ ಭಾರತಕ್ಕೆ 4-2 ಅಂತರದ ಗೆಲುವು, ದೇಶದೆಲ್ಲೆಡೆ ಸಂಭ್ರಮ
ಆಸೀಸ್ ದಾಖಲೆ ಪತನ: ವಿಶ್ವಕಪ್‌ನಲ್ಲಿ ಅತಿದೊಡ್ಡ ಗೆಲುವು ಸಾಧಿಸಿದ ದಾಖಲೆ ಆಸ್ಪ್ರೇಲಿಯಾ ಹೆಸರಿನಲ್ಲಿತ್ತು. 2010ರಲ್ಲಿ ಆಸ್ಪ್ರೇಲಿಯಾ, ದ.ಆಫ್ರಿಕಾ ವಿರುದ್ಧ 12-0 ಅಂತರದಲ್ಲಿ ಜಯಿಸಿತ್ತು. ಆ ದಾಖಲೆಯನ್ನು ನೆದರ್‌ಲೆಂಡ್‌್ಸ ಮುರಿದಿದೆ.
ಕ್ವಾರ್ಟರ್ ಚಾನ್ಸ್ ಕೈಚೆಲ್ಲಿದ ಭಾರತ!
ಭುವನೇಶ್ವರ: ಹಾಕಿ ವಿಶ್ವಕಪ್‌ನ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಲು ಭಾರತಕ್ಕೆ ವೇಲ್ಸ್ ವಿರುದ್ಧ ಕನಿಷ್ಠ 8-0 ಗೋಲುಗಳ ಗೆಲುವು ಅಗತ್ಯವಿತ್ತು. ಆದರೆ 5 ಪೆನಾಲ್ಟಿಕಾರ್ನರ್ ಅವಕಾಶಗಳನ್ನು ವ್ಯರ್ಥ ಮಾಡಿದ್ದಲ್ಲದೇ 2 ಗೋಲು ಸಹ ಬಿಟ್ಟುಕೊಟ್ಟ ಭಾರತ, 4-2ರ ಅಂತರದಲ್ಲಷ್ಟೇ ಗೆಲುವು ಸಾಧಿಸಲು ಯಶಸ್ವಿಯಾಯಿತು. ಈ ಫಲಿತಾಂಶದ ಪರಿಣಾಮ ಕ್ವಾರ್ಟರ್ ಫೈನಲ್ ಪ್ರವೇಶಿಸಲು ಕ್ರಾಸ್ ಓವರ್(ಪ್ರಿ ಕ್ವಾರ್ಟರ್ ಫೈನಲ್) ಪಂದ್ಯವನ್ನು ಆಡಬೇಕಿದೆ.
‘ಡಿ’ ಗುಂಪಿನಲ್ಲಿದ್ದ ಭಾರತ ಆಡಿದ 3 ಪಂದ್ಯಗಳಲ್ಲಿ 2 ಜಯ, 1 ಡ್ರಾನೊಂದಿಗೆ ಒಟ್ಟು 7 ಅಂಕ ಕಲೆಹಾಕಿದರೆ, ಇಂಗ್ಲೆಂಡ್ ಸಹ 2 ಜಯ, 1 ಡ್ರಾನೊಂದಿಗೆ 7 ಅಂಕ ಪಡೆಯಿತು. ಆದರೆ ಭಾರತದ ಗೋಲು ವ್ಯತ್ಯಾಸ +4 ಇದ್ದರೆ, ಇಂಗ್ಲೆಂಡ್ +9 ಗೋಲು ವ್ಯತ್ಯಾಸ ಹೊಂದಿರುವ ಕಾರಣ ಗುಂಪಿನಲ್ಲಿ ಮೊದಲ ಸ್ಥಾನ ಪಡೆದು ನೇರವಾಗಿ ಕ್ವಾರ್ಟರ್ ಫೈನಲ್‌ಗೇರಿತು. 3ನೇ ಸ್ಥಾನಿ ಸ್ಪೇನ್ ಸಹ ಕ್ರಾಸ್ ಓವರ್ ಹಂತಕ್ಕೇರಿತು. 3 ಸೋಲು ಕಂಡ ವೇಲ್ಸ್ ತನ್ನ ಅಭಿಯಾನ ಕೊನೆಗೊಳಿಸಿತು.
ಕ್ವಾರ್ಟರ್‌ಗೇರಲು ಕಿವೀಸ್ ಚಾಲೆಂಜ್ ಗೆಲ್ಲಬೇಕು ಭಾರತ
ಜ.22ರಂದು ಕ್ರಾಸ್ ಓವರ್ ಪಂದ್ಯ ನಡೆಯಲಿದ್ದು, ‘ಡಿ’ ಗುಂಪಿನಲ್ಲಿ 2ನೇ ಸ್ಥಾನ ಪಡೆದ ಭಾರತ ‘ಸಿ’ ಗುಂಪಿನಲ್ಲಿ 3ನೇ ಸ್ಥಾನ ಗಳಿಸಿದ ನ್ಯೂಜಿಲೆಂಡ್ ವಿರುದ್ಧ ಸೆಣಸಲಿದೆ. ಈ ಪಂದ್ಯದಲ್ಲಿ ಗೆದ್ದರೆ ಭಾರತ ಕ್ವಾರ್ಟರ್ ಫೈನಲ್ ಪ್ರವೇಶಿಸಲಿದ್ದು, ಹಾಲಿ ಚಾಂಪಿಯನ್ ಆಸ್ಪ್ರೇಲಿಯಾ ಎದುರಾಗುವ ಸಾಧ್ಯತೆ ಇದೆ. ನ್ಯೂಜಿಲೆಂಡ್ ವಿರುದ್ಧ ಭಾರತ ಉತ್ತಮ ದಾಖಲೆ ಹೊಂದಿದ್ದು, ಆಡಿರುವ 104 ಪಂದ್ಯಗಳಲ್ಲಿ 58ರಲ್ಲಿ ಗೆದ್ದಿದೆ. 29ರಲ್ಲಿ ನ್ಯೂಜಿಲೆಂಡ್ ಗೆದ್ದಿದ್ದು, 17 ಪಂದ್ಯ ಡ್ರಾಗೊಂಡಿದೆ.