Hockey World Cup: ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟ ಜರ್ಮನಿ, ಕೊರಿಯಾ..!

By Kannadaprabha News  |  First Published Jan 24, 2023, 11:07 AM IST

ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಅಂತಿಮ ಎಂಟರಘಟ್ಟ ಪ್ರವೇಶಿಸಿದ ಜರ್ಮನಿ, ಕೊರಿಯಾ
ರಿಯೋ ಒಲಿಂಪಿಕ್ಸ್‌ ಚಾಂಪಿಯನ್‌ ಅರ್ಜೆಂಟೀನಾಗೆ ಶಾಕ್ ನೀಡಿದ ಕೊರಿಯಾ
ಮೊದಲ ಕ್ವಾರ್ಟರಲ್ಲಿ ಆಸ್ಪ್ರೇಲಿಯಾ-ಸ್ಪೇನ್‌ ಸೆಣಸಾಟ


ಭುವನೇಶ್ವರ(ಜ.24): ಎಫ್‌ಐಎಚ್‌ ಪುರುಷರ ಹಾಕಿ ವಿಶ್ವಕಪ್‌ನ ಕ್ವಾರ್ಟರ್‌ ಫೈನಲ್‌ಗೆ ಜರ್ಮನಿ ಹಾಗೂ ಏಷ್ಯಾ ಚಾಂಪಿಯನ್‌ ಕೊರಿಯಾ ಲಗ್ಗೆಯಿಟ್ಟಿವೆ. ಇದರೊಂದಿಗೆ ಅಂತಿಮ 8ರ ಸುತ್ತಿನ ವೇಳಾಪಟ್ಟಿಅಂತಿಮಗೊಂಡಿದೆ.

ಸೋಮವಾರ ನಡೆದ ಕ್ರಾಸ್‌ ಓವರ್‌ ಪಂದ್ಯದಲ್ಲಿ ಜರ್ಮನಿ 5-1 ಗೋಲುಗಳಲ್ಲಿ ಫ್ರಾನ್ಸ್‌ ವಿರುದ್ಧ ಸುಲಭ ಜಯ ಸಾಧಿಸಿತು. ಮೊದಲ 24 ನಿಮಿಷಗಳಲ್ಲೇ 4 ಗೋಲು ಬಾರಿಸಿದ ಜರ್ಮನಿ, ಫ್ರಾನ್ಸ್‌ಗೆ ಪುಟಿದೇಳಲು ಅವಕಾಶ ನೀಡಲಿಲ್ಲ. ಆಕ್ರಮಣಕಾರಿ ಆಟದ ಜೊತೆ ಅತ್ಯುತ್ತಮ ರಕ್ಷಣಾತ್ಮಕ ಆಟವನ್ನೂ ಪ್ರದರ್ಶಿಸಿದ ಜರ್ಮನಿ ಎಲ್ಲಾ ಹಂತಗಳಲ್ಲೂ ಮೇಲುಗೈ ಸಾಧಿಸಿತು. 57ನೇ ನಿಮಿಷದಲ್ಲಿ ಫ್ರಾನ್ಸ್‌ ಪೆನಾಲ್ಟಿಕಾರ್ನರ್‌ ಮೂಲಕ ಖಾತೆ ತೆರೆದು ಸೋಲಿನ ಅಂತರ ತಗ್ಗಿಸಿಕೊಳ್ಳುವ ಪ್ರಯತ್ನ ನಡೆಸಿತು. ಆದರೆ 59ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿಕಾರ್ನರ್‌ ಅನ್ನು ಉಪಯೋಗಿಸಿಕೊಂಡ ಜರ್ಮನಿ ತನ್ನ ಖಾತೆಗೆ ಮತ್ತೊಂದು ಗೋಲು ಸೇರ್ಪಡೆ ಮಾಡಿಕೊಂಡಿತು.

Tap to resize

Latest Videos

undefined

ಅರ್ಜೆಂಟೀನಾಗೆ ಶಾಕ್‌!

ರಿಯೋ ಒಲಿಂಪಿಕ್ಸ್‌ ಚಾಂಪಿಯನ್‌ ಅರ್ಜೆಂಟೀನಾ ಕ್ರಾಸ್‌ ಓವರ್‌ ಪಂದ್ಯದಲ್ಲಿ ಕೊರಿಯಾ ವಿರುದ್ಧ ಶೂಟೌಟ್‌ನಲ್ಲಿ ಸೋಲುಂಡಿತು. ಮೊದಲಾರ್ಧದ ಮುಕ್ತಾಯಕ್ಕೆ 3-2ರ ಮುನ್ನಡೆ ಹೊಂದಿದ್ದ ಅರ್ಜೆಂಟೀನಾ, ಕೊನೆ 20 ನಿಮಿಷದಲ್ಲಿ 3 ಗೋಲು ಬಿಟ್ಟುಕೊಟ್ಟಿತು. ನಿಗದಿತ ಸಮಯದ ಮುಕ್ತಾಯಕ್ಕೆ ಎರಡೂ ತಂಡಗಳು 5-5ರಲ್ಲಿ ಸಮಬಲ ಸಾಧಿಸಿದ ಪರಿಣಾಮ ಫಲಿತಾಂಶಕ್ಕೆ ಪೆನಾಲ್ಟಿಶೂಟೌಟ್‌ ಮೊರೆ ಹೋಗಾಯಿತು. ಶೂಟೌಟ್‌ನಲ್ಲಿ ಕೊರಿಯಾ 3, ಅರ್ಜೆಂಟೀನಾ 2 ಗೋಲು ಗಳಿಸಿದವು.

ಇಂದಿನಿಂದ ಕ್ವಾರ್ಟರ್‌ ಫೈನಲ್‌

ಕ್ವಾರ್ಟರ್‌ ಫೈನಲ್‌ ಪಂದ್ಯಗಳು ಮಂಗಳವಾರದಿಂದ ಆರಂಭಗೊಳ್ಳಲಿದ್ದು ಮೊದಲ ಕ್ವಾರ್ಟರಲ್ಲಿ ಆಸ್ಪ್ರೇಲಿಯಾ-ಸ್ಪೇನ್‌ ಸೆಣಸಲಿವೆ. 2ನೇ ಕ್ವಾರ್ಟರಲ್ಲಿ ಹಾಲಿ ಚಾಂಪಿಯನ್‌ ಬೆಲ್ಜಿಯಂಗೆ ನ್ಯೂಜಿಲೆಂಡ್‌ ಎದುರಾಗಲಿದೆ. ಬುಧವಾರ ಮತ್ತೆರಡು ಕ್ವಾರ್ಟರ್‌ ಫೈನಲ್‌ಗಳು ನಡೆಯಲಿದ್ದು, ಇಂಗ್ಲೆಂಡ್‌-ಜರ್ಮನಿ, ನೆದರ್‌ಲೆಂಡ್‌್ಸ-ಕೊರಿಯಾ ಸೆಣಸಲಿವೆ.

Australian Open: ನೋವಾಕ್ ಜೋಕೋವಿಚ್ ಅನಾಯಾಸವಾಗಿ ಕ್ವಾರ್ಟರ್‌ಗೆ ಲಗ್ಗೆ

ಇಂದಿನ ಪಂದ್ಯಗಳು

ಆಸ್ಪ್ರೇಲಿಯಾ-ಸ್ಪೇನ್‌, ಸಂಜೆ 4.30ಕ್ಕೆ

ಬೆಲ್ಜಿಯಂ-ನ್ಯೂಜಿಲೆಂಡ್‌, ಸಂಜೆ 7ಕ್ಕೆ

ಮಹಿಳಾ ಹಾಕಿ: ಭಾರತ, ದ.ಆಫ್ರಿಕಾ ಪಂದ್ಯ ಡ್ರಾ

ಕೇಪ್‌ಟೌನ್‌: ದಕ್ಷಿಣ ಆಫ್ರಿಕಾ ಹಾಗೂ ಭಾರತ ಮಹಿಳಾ ತಂಡಗಳ ನಡುವಿನ ಹಾಕಿ ಸರಣಿಯ 4ನೇ ಹಾಗೂ ಕೊನೆ ಪಂದ್ಯ 2-2 ಗೋಲುಗಳಿಂದ ಡ್ರಾಗೊಂಡಿದೆ. ಮೊದಲ 3 ಪಂದ್ಯಗಳನ್ನು ಗೆದ್ದಿದ್ದ ಭಾರತ ಸರಣಿಯನ್ನು 3-0 ಅಂತರದಲ್ಲಿ ತನ್ನದಾಗಿಸಿಕೊಂಡಿತು. ಭಾರತ ಹಿರಿಯರ ತಂಡದ ಪರ ಚೊಚ್ಚಲ ಪಂದ್ಯವಾಡಿದ ವೈಶ್ಣವಿ ಪಾಲ್ಕೆ 2 ಗೋಲು ಬಾರಿಸಿ ತಂಡವನ್ನು ಸೋಲಿನಿಂದ ಪಾರು ಮಾಡಿದರು. ಅವರು 29 ಹಾಗೂ 51ನೇ ನಿಮಿಷದಲ್ಲಿ ದೊರೆತ ಎರಡು ಪೆನಾಲ್ಟಿಕಾರ್ನರ್‌ ಅವಕಾಶಗಳನ್ನು ಗೋಲಾಗಿ ಪರಿವರ್ತಿಸಿದರು. ಆರಂಭಿಕ 3 ಪಂದ್ಯಗಳಲ್ಲಿ ಭಾರತ 5-1, 7-0, 4-0 ಅಂತರದಲ್ಲಿ ಗೆದ್ದಿತ್ತು.

click me!