ಸ್ಪೇನ್ ವಿರದ್ಧ ಭರ್ಜರಿ ಗೆಲುವಿನ ಮೂಲಕ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದ ಭಾರತ, ಇದೀಗ ಇಂಗ್ಲೆಂಡ್ ವಿರುದ್ಧದ ಪಂದ್ಯವನ್ನು ಟೈನಲ್ಲಿ ಅಂತ್ಯಗೊಳಿಸಿದೆ. ರೋಚಕ ಪಂದ್ಯದ ಹೆಚ್ಚಿನ ವಿವರ ಇಲ್ಲಿದೆ.
ರೂರ್ಕೆಲಾ(ಜ.15): ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಮತ್ತೆ ದಿಟ್ಟ ಹೋರಾಟ ನೀಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಸ್ಪೇನ್ ವಿರುದ್ದ ಗೆದ್ದು ಶುಭಾರಂಭ ಮಾಡಿದ್ದ ಭಾರತಕ್ಕೆ ಇಂಗ್ಲೆಂಡ್ ಸವಾಲು ಎದುರಾಗಿತ್ತು. ಇಂದು ನಡೆದ ಪಂದ್ಯದಲ್ಲಿ ಗೆಲುವಿಗಾಗಿ ಭಾರತ ಹಾಗೂ ಇಂಗ್ಲೆಂಡ್ ತೀವ್ರ ಪೈಪೋಟಿ ನಡೆಸಿತು. ಇದರ ಪರಿಣಾಮ ಗೋಲು ದಾಖಲಾಗಲಿಲ್ಲ. 60 ನಿಮಿಗಳ ರೋಚಕ ಹೋರಾಟದಲ್ಲಿ ಯಾವುದೇ ಗೆೋಲು ದಾಖಲಾಗಲಿಲ್ಲ. ಹೀಗಾಗಿ ಪಂದ್ಯ 0-0 ಅಂತರದಲ್ಲಿ ಟೈಗೊಂಡಿತು.
ಪಂದ್ಯ ಆರಂಭಗೊಂಡ 8ನೇ ನಿಮಿಷಕ್ಕೆ ಇಂಗ್ಲೆಂಡ್ ಪೆನಾಲ್ಟಿ ಕಾರ್ನರ್ ಪಡೆಯಿತು. ಸುರೇಂದರ್ ಕಾಲಿಗೆ ಚೆಂಡು ತಗುಲಿದ ಕಾರಣ ಪೆನಾಲ್ಟಿ ಕಾರ್ನರ್‌ಗೆ ಅವಕಾಶ ನೀಡಲಾಯಿತು. ಆದರೆ ಭಾರತದ ರಕ್ಷಣೆಗೆ ಗೋಲು ದಾಖಲಾಗಲಿಲ್ಲ. ಇದರ ಬೆನ್ನಲ್ಲೇ ಒಂದೆರೆಡು ಅವಕಾಶ ಪಡೆಯಿತು. ಆದರೆ ಭಾರತ ಗೋಲು ಬಿಟ್ಟುಕೊಡಲಿಲ್ಲ. 15 ನಿಮಿಷ ಅಂತ್ಯದ ಮೊದಲ ಕ್ವಾರ್ಟರ್‌ನಲ್ಲಿ ಯಾವುದೇ ಗೋಲು ದಾಖಲಾಗಲಿಲ್ಲ.
ಹಾಕಿ ವಿಶ್ವಕಪ್‌ನಲ್ಲಿ ಭಾರತ ಶುಭಾರಂಭ, ಬಲಿಷ್ಠ ಸ್ಪೇನ್ ವಿರುದ್ಧ 2-0 ಗೆಲುವು!
24 ನೇ ನಿಮಿಷದಲ್ಲಿ ಭಾರತ ಪೆನಾಲ್ಟಿ ಕಾರ್ನರ್ ಅವಕಾಶ ಪಡೆಯಿತು. ಆದರೆ ಭಾರತದ ಪೆನಾಲ್ಟಿ ಕಾರ್ನರ್‌ನ್ನು ಗೋಲಾಗಿ ಪರಿವರ್ತಿಸಲು ಇಂಗ್ಲೆಂಡ್ ಅವಕಾಶ ನೀಡಲಿಲ್ಲ. ಮೊದಲಾರ್ಧದಲ್ಲಿ ಯಾವುದೇ ಗೋಲು ಸಿಡಿಯಲಿಲ್ಲ. ಇನ್ನು ದ್ವಿತಿಯಾರ್ಧದ ಆರಂಭದಲ್ಲಿ ಭಾರತ ಆಕ್ರಮಣಕಾರಿ ಆಟ ಪ್ರದರ್ಶಿಸಿತು. ಆದರೆ ಇಂಗ್ಲೆಂಡ್ ಗೋಲಿಗೆ ಅವಕಾಶ ನೀಡಲೇ ಇಲ್ಲ.
ಮನ್ದೀಪ್ ಹಾಗೂ ಅಕ್ಷದೀಪ್ ಕೈಗೆ ಸಿಕ್ಕ ಅವಕಾಶಗಳನ್ನೂ ಗೋಲಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಭಾರತ ಇಂಗ್ಲೆಂಡ್ ನಡುವಿನ ಪಂದ್ಯ 0-0 ಅಂತರದಲ್ಲಿ ಟೈಗೊಂಡಿತು. ಸ್ಪೇನ್ ವಿರುದ್ದ ಪಂದ್ಯದಲ್ಲೂ ಭಾರತ ಪೆನಾಲ್ಟಿ ಕಾರ್ನರ್‌ನ್ನು ಗೋಲಾಗಿ ಪರಿವರ್ತಿಸುವಲ್ಲಿ ವಿಫಲವಾಗಿತ್ತು. ಭಾರತಕ್ಕೆ 5 ಅವಕಾಶಗಳು ಒದಗಿ ಬಂದಿತ್ತು. ಇದರಲ್ಲಿ 1 ಗೋಲು ಸಿಡಿಸಿತ್ತು.
Hockey World Cup: ಫ್ರಾನ್ಸ್ ಎದುರು ಆಸ್ಪ್ರೇಲಿಯಾಕ್ಕೆ 8-0 ಭರ್ಜರಿ ಗೆಲುವು
ಮೊದಲ ಪಂದ್ಯದಲ್ಲಿ ಸ್ಪೇನ್ ವಿರುದ್ದ ಗೆಲುವು ಸಾಧಿಸಿದ್ದ ಭಾರತ
ಸ್ಪೇನ್ ವಿರುದ್ದದ ಮೊದಲ ಪಂದ್ಯದಲ್ಲಿ ಭಾರತ ಪಂದ್ಯದ 12ನೇ ನಿಮಿಷದಲ್ಲೇ ಗೋಲಿನ ಖಾತೆ ತೆರೆದಿತ್ತು. ಪೆನಾಲ್ಟಿಕಾರ್ನರ್ ಅವಕಾಶದಲ್ಲಿ ಹರ್ಮನ್‌ಪ್ರೀತ್ ಬಾರಿಸಿದ ಚೆಂಡು ಸ್ಪೇನ್ ಗೋಲ್‌ಕೀಪರ್‌ನ ಪ್ಯಾಡ್‌ಗೆ ಬಡಿದು ಹಿಂದಿರುಗಿತು. ಗೋಲು ಪೆಟ್ಟಿಗೆಯ ಮುಂದೆಯೇ ಇದ್ದ ತವರಿನ ತಾರೆ, ಉಪನಾಯಕ ಅಮಿತ್ ರೋಹಿದಾಸ್ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸಿ ತಂಡದ ಖಾತೆ ತೆರೆದರು. ಸ್ಥಳೀಯ ಆಟಗಾರ ಟೂರ್ನಿಯಲ್ಲಿ ಭಾರತ ಪರ ಮೊದಲ ಗೋಲು ದಾಖಲಿಸಿದ್ದನ್ನು ಕಂಡು ಕ್ರೀಡಾಂಗಣದಲ್ಲಿ ನೆರೆದಿದ್ದ 20000ಕ್ಕೂ ಹೆಚ್ಚು ಅಭಿಮಾನಿಗಳು ಸಂಭ್ರಮಿಸಿದರು.
ಪಂದ್ಯದುದ್ದಕ್ಕೂ ಮಿಡ್‌ಫೀಲ್ಡ್‌ನಲ್ಲಿ ಮಿಂಚಿದ ಹಾರ್ದಿಕ್ ಸಿಂಗ್ 26ನೇ ನಿಮಿಷದಲ್ಲಿ ಭಾರತದ ಮುನ್ನಡೆಯನ್ನು 2-0ಗೇರಿಸಿದರು. ಅಂಕಣದ ಬಲ ಭಾಗದಿಂದ ಆಕ್ರಮಣಕಾರಿಯಾಗಿ ಮುನ್ನಡೆದ ಹಾರ್ದಿಕ್, ಸ್ಪೇನ್‌ನ ಹಲವು ಡಿಫೆಂಡರ್‌ಗಳ ಜೊತೆ ಗೋಲ್‌ಕೀಪರನ್ನೂ ವಂಚಿಸುವಲ್ಲಿ ಯಶಸ್ವಿಯಾದರು.