ಪ್ರೊ ಲೀಗ್ ಹಾಕಿ ಟೂರ್ನಿಯಲ್ಲಿ ಭಾರತ ಸತತ 4ನೇ ಗೆಲುವು
ಹ್ಯಾಟ್ರಿಕ್ ಗೋಲು ಬಾರಿಸಿ ಮಿಂಚಿದ ಹರ್ಮನ್ಪ್ರೀತ್ ಸಿಂಗ್
ಭಾರತಕ್ಕೆ ಮುಂದಿನ ಪಂದ್ಯದಲ್ಲಿ ಜರ್ಮನಿ ಸವಾಲು
ರೂರ್ಕೆಲಾ(ಮಾ.13): 2022-23ರ ಎಫ್‌ಐಎಚ್ ಪ್ರೊ ಲೀಗ್ ಹಾಕಿ ಟೂರ್ನಿಯಲ್ಲಿ ಭಾರತ ಸತತ 4ನೇ ಗೆಲುವು ಸಾಧಿಸಿದೆ. ಭಾನುವಾರ ಆಸ್ಪ್ರೇಲಿಯಾ ವಿರುದ್ಧ ಆತಿಥೇಯ ತಂಡ 5-4 ಗೋಲುಗಳಿಂದ ರೋಚಕ ಜಯಗಳಿಸಿತು. ಇದರೊಂದಿಗೆ ಭಾರತ 6 ಪಂದ್ಯಗಳಲ್ಲಿ 14 ಅಂಕಗಳೊಂದಿಗೆ 2ನೇ ಸ್ಥಾನಕ್ಕೇರಿತು.
ಆಸ್ಪ್ರೇಲಿಯಾ 6 ಪಂದ್ಯಗಳಲ್ಲಿ ಕೇವಲ 4 ಅಂಕಗಳೊಂದಿಗೆ 8ನೇ ಸ್ಥಾನದಲ್ಲಿದೆ. ಹರ್ಮನ್ಪ್ರೀತ್ ಸಿಂಗ್ ಬಾರಿಸಿದ ಹ್ಯಾಟ್ರಿಕ್ ಗೋಲು ಭಾರತಕ್ಕೆ ಗೆಲುವು ತಂದುಕೊಟ್ಟಿತು. ಅವರು 13, 14 ಹಾಗೂ 55ನೇ ನಿಮಿಷಗಳಲ್ಲಿ ಗೋಲು ಬಾರಿಸಿದರು. ಇನ್ನೆರಡು ಗೋಲನ್ನು ಜುಗ್ರಾಜ್ ಸಿಂಗ್(17ನೇ ನಿ.), ಸೆಲ್ವಂ ಕಾರ್ತಿ(25ನೇ ನಿ.) ಹೊಡೆದರು. ಭಾರತ ಮುಂದಿನ ಪಂದ್ಯದಲ್ಲಿ ಸೋಮವಾರ ಜರ್ಮನಿ ವಿರುದ್ಧ ಆಡಲಿದೆ.
undefined
ಬೆಂಗಳೂರು ಟೆನಿಸ್: 15ರ ಬ್ರೆಂಡಾ ಚಾಂಪಿಯನ್!
ಬೆಂಗಳೂರು: ಭಾರತದ ನಂ.1 ಟೆನಿಸ್ ಆಟಗಾರ್ತಿ ಅಂಕಿತಾ ರೈನಾ ಐಟಿಎಫ್ ಬೆಂಗಳೂರು ಮಹಿಳಾ ಟೆನಿಸ್ ಟೂರ್ನಿಯಲ್ಲಿ ರನ್ನರ್-ಅಪ್ ಆಗಿದ್ದಾರೆ. ನಗರದ ಕೆಎಸ್ಎಲ್ಟಿಎ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಮಹಿಳಾ ಸಿಂಗಲ್ಸ್ ಫೈನಲ್ನಲ್ಲಿ ಟೂರ್ನಿಯ 4ನೇ ಶ್ರೇಯಾಂಕಿತೆ ಅಂಕಿತಾ, ಚೆಕ್ ಗಣರಾಜ್ಯದ 15 ವರ್ಷದ ಬ್ರೆಂಡಾ ಫ್ರುವಿರ್ಟೊವಾ ವಿರುದ್ಧ 6-0, 4-6, 0-6 ಸೆಟ್ಗಳಲ್ಲಿ ಸೋತು ನಿರಾಸೆ ಅನುಭವಿಸಿದರು.
ಮೊದಲ ಸೆಟ್ನಲ್ಲಿ ಉತ್ತಮ ಆಟ ಪ್ರದರ್ಶಿಸಿ ಗೆದ್ದ ಅಂಕಿತಾ 2ನೇ ಸೆಟ್ನಲ್ಲಿ ಆರಂಭದಲ್ಲಿ 3-0 ಮುನ್ನಡೆ ಪಡೆದಿದ್ದರು. ಆದರೆ ಬಳಿಕ ಪುಟಿದೆದ್ದ ಬ್ರೆಂಡಾ ಸಂಪೂರ್ಣ ಮೇಲುಗೈ ಸಾಧಿಸಿ 2ನೇ ಸೆಟ್ನಲ್ಲಿ ಗೆಲುವು ತಮ್ಮದಾಗಿಸಿಕೊಂಡರು. 3ನೇ ಸೆಟ್ನಲ್ಲಿ ಮಂಕಾದ ಅಂಕಿತಾ, ಪ್ರತಿರೋಧ ತೋರದೆ ಪ್ರಶಸ್ತಿ ಬಿಟ್ಟುಕೊಟ್ಟರು.
ಯುವ ಅಥ್ಲೆಟಿಕ್ಸ್: ಕಂಚು ಗೆದ್ದ ಕರ್ನಾಟಕದ ದಿಶಾ
ಉಡುಪಿ: ಕರ್ನಾಟಕ ಅಥ್ಲೆಟಿಕ್ಸ್ ಸಂಸ್ಥೆ ಆಯೋಜಿಸಿದ 18ನೇ ರಾಷ್ಟ್ರೀಯ ಯುವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಕರ್ನಾಟಕದ ದಿಶಾ ನೆಲ್ವಾಡೆ ಜಾವೆಲಿನ್ ಎಸೆತದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಅವರು ಬಾಲಕಿಯರ ವಿಭಾಗದಲ್ಲಿ 43.83 ಮೀ. ದೂರ ಎಸೆದರೆ, ಪಂಜಾಬ್ನ ನವ್ರೀತ್ ಕೌರ್ 47.09 ಮೀ. ಎಸೆದು ಚಿನ್ನ, ಹರ್ಯಾಣದ ರುಚಿ(44.74 ಮೀ.) ಬೆಳ್ಳಿ ಪದಕ ಗೆದ್ದರು.
Indian Super League: ಮುಂಬೈ ಮಣಿಸಿ ಫೈನಲ್‌ಗೆ ಲಗ್ಗೆಯಿಟ್ಟ ಬೆಂಗಳೂರು ಎಫ್‌ಸಿ..!
ಕರ್ನಾಟಕ ಕೂಟದಲ್ಲಿ 2 ಪದಕದೊಂದಿಗೆ ಅಭಿಯಾನ ಕೊನೆಗೊಳಿಸಿತು. ಶನಿವಾರ ಗೌತಮಿ ಬಾಲಕಿಯರ ಹೈಜಂಪ್ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಬಾಲಕರ ವಿಭಾಗದಲ್ಲಿ ಉತ್ತರ ಪ್ರದೇಶ, ಬಾಲಕಿಯರ ವಿಭಾಗದಲ್ಲಿ ಹರ್ಯಾಣ ಸಮಗ್ರ ಚಾಂಪಿಯನ್ ಆಯಿತು.
ಯುವ ಅಥ್ಲೆಟಿಕ್ಸ್: ರಾಜ್ಯದ ಗೌತಮಿಗೆ ಹೈಜಂಪ್ ಕಂಚು
ಉಡುಪಿ: ಕರ್ನಾಟಕ ಅಥ್ಲೆಟಿಕ್ಸ್ ಸಂಸ್ಥೆ ಆಯೋಜಿಸಿದ 18ನೇ ರಾಷ್ಟ್ರೀಯ ಯುವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಕರ್ನಾಟಕದ ಗೌತಮಿ ಬಾಲಕಿಯರ ಹೈಜಂಪ್ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಅವರು 1.60 ಮೀ. ಎತ್ತರಕ್ಕೆ ನೆಗೆದು 3ನೇ ಸ್ಥಾನ ಪಡೆದರೆ, ಹರ್ಯಾಣದ ಪೂಜಾ(1.76 ಮೀ.) ಚಿನ್ನ, ಪಶ್ಚಿಮ ಬಂಗಾಳದ ಮೊಹುರು ಮುಖರ್ಜಿ(1.63 ಮೀ.) ಬೆಳ್ಳಿ ಪಡೆದರು.