Commonwealth Games 2022: ಟೂರ್ನಿಗೆ ಭಾರತ ಮಹಿಳಾ ಹಾಕಿ ತಂಡ ಪ್ರಕಟ, ರಾಣಿಗಿಲ್ಲ ಸ್ಥಾನ..!

By Naveen Kodase  |  First Published Jun 24, 2022, 11:07 AM IST

* ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ ಗೇಮ್ಸ್‌ಗೆ ಭಾರತ ಮಹಿಳಾ ಹಾಕಿ ತಂಡ ಪ್ರಕಟ
* 18 ಆಟಗಾರ್ತಿಯರನ್ನೊಳಗೊಂಡ ಭಾರತ ತಂಡಕ್ಕೆ ಸವಿತಾ ಪೂನಿಯಾ ನಾಯಕಿ
* ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿರುವ ರಾಣಿ ರಾಂಪಾಲ್‌ಗಿಲ್ಲ ಸ್ಥಾನ


ನವದೆಹಲಿ(ಜೂ.24): ಫಿಟ್ನೆಸ್‌ ಸಮಸ್ಯೆಯಿಂದಾಗಿ ಮಹಿಳಾ ಹಾಕಿ ವಿಶ್ವಕಪ್‌ ಭಾರತ ತಂಡದಿಂದಲೂ ಹೊರಬಿದ್ದಿದ್ದ ರಾಣಿ ರಾಂಪಾಲ್‌ (Rani Rampal), ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ ಗೇಮ್ಸ್‌ನ (Birmingham Commonwealth Games 2022) ತಂಡದಲ್ಲೂ ಸ್ಥಾನ ಗಿಟ್ಟಿಸಿಕೊಳ್ಳಲು ವಿಫಲರಾಗಿದ್ದಾರೆ. ಜುಲೈ 18ರಿಂದ 28ರ ವರೆಗೆ ನಡೆಯಲಿರುವ ಗೇಮ್ಸ್‌ಗೆ ಗುರುವಾರ 18 ಮಂದಿಯ ಭಾರತ ತಂಡವನ್ನು ಪ್ರಕಟಿಸಲಾಯಿತು. 

ಕಳೆದ ವರ್ಷ ನಡೆದಿದ್ದ ಟೋಕಿಯೋ ಒಲಿಂಪಿಕ್ಸ್‌ (Tokyo Olympics) ಕ್ರೀಡಾಕೂಟದಲ್ಲಿ ರಾಣಿ ರಾಂಪಾಲ್ ನೇತೃತ್ವದ ಭಾರತ ಮಹಿಳಾ ಹಾಕಿ ತಂಡವು (Indian Women's Hockey Team) ಅಮೋಘ ಪ್ರದರ್ಶನ ತೋರುವ ಮೂಲಕ ಒಲಿಂಪಿಕ್ಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಸೆಮಿಫೈನಲ್‌ ಪ್ರವೇಶಿಸಿತ್ತು. ಆದರೆ ಕಂಚಿನ ಪದಕಕ್ಕಾಗಿ ನಡೆದ ಕಾದಾಟದಲ್ಲಿ ಕೂದಲೆಳೆ ಅಂತರದಲ್ಲಿ ಸೋಲು ಕಾಣುವ ಮೂಲಕ ಚೊಚ್ಚಲ ಪದಕ ಗೆಲ್ಲುವ ಅವಕಾಶವನ್ನು ಕೈಚೆಲ್ಲಿತ್ತು. ಇನ್ನು 2014ರಲ್ಲಿ ಆಸ್ಟ್ರೇಲಿಯಾದ ಗೋಲ್ಡ್‌ ಕೋಸ್ಟ್‌ನಲ್ಲಿ ನಡೆದ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲೂ ಭಾರತೀಯ ಮಹಿಳಾ ಹಾಕಿ ತಂಡವು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಕಂಚಿನ ಪದಕಕ್ಕಾಗಿ ನಡೆದ ಹೋರಾಟದಲ್ಲಿ ಭಾರತ ತಂಡವು ಇಂಗ್ಲೆಂಡ್ ಎದುರು ರೋಚಕ ಸೋಲು ಅನುಭವಿಸಿತ್ತು. ಇತ್ತೀಚೆಗಷ್ಟೇ ಮುಕ್ತಾಯವಾದ ಎಫ್‌ಐಎಚ್ ಮಹಿಳಾ ಪ್ರೊ ಲೀಗ್ ಹಾಕಿ ಟೂರ್ನಿಯಲ್ಲಿ ಭಾರತ ಮಹಿಳಾ ಹಾಕಿ ತಂಡವು ಘಟಾನುಘಟಿ ತಂಡಗಳಿಗೆ ಸೋಲುಣಿಸಿ ಮೂರನೇ ಸ್ಥಾನ ಪಡೆದಿತ್ತು.

Tap to resize

Latest Videos

undefined

ಗೋಲ್‌ಕೀಪರ್‌ ಸವಿತಾ ಪೂನಿತಾ (Savita Punia) ಮತ್ತೊಮ್ಮೆ ತಂಡದ ನಾಯಕಿಯಾಗಿ ನೇಮಕಗೊಂಡಿದ್ದು, ದೀಪ್‌ ಗ್ರೇಸ್‌ ಎಕ್ಕಾ ಉಪನಾಯಕಿಯಾಗಿ ಕಾರ‍್ಯನಿರ್ವಹಿಸಲಿದ್ದಾರೆ. ಇದೇ ವಾರ ಪ್ರಕಟಗೊಂಡಿದ್ದ ವಿಶ್ವಕಪ್‌ ತಂಡಕ್ಕೂ ಈ ಇಬ್ಬರೇ ನಾಯಕರಾಗಿ ನೇಮಕಗೊಂಡಿದ್ದರು. ಇನ್ನು, ವಿಶ್ವಕಪ್‌ಗೆ ಆಯ್ಕೆಯಾದ ಬಹುತೇಕ ಆಟಗಾರರೇ ಕಾಮನ್‌ವೆಲ್ತ್‌ ತಂಡದಲ್ಲೂ ಸ್ಥಾನ ಪಡೆದಿದ್ದಾರೆ. ಆದರೆ 3 ಬದಲಾವಣೆಗಳನ್ನು ಮಾಡಲಾಗಿದೆ. ಗೇಮ್ಸ್‌ನಲ್ಲಿ ಭಾರತ ‘ಎ’ ಗುಂಪಿನಲ್ಲಿ ಇಂಗ್ಲೆಂಡ್‌, ಕೆನಡಾ, ವೇಲ್ಸ್‌ ಹಾಗೂ ಘಾನಾ ಜೊತೆ ಸ್ಥಾನ ಪಡೆದಿದೆ. ಜು.29ಕ್ಕೆ ಘಾನಾ ವಿರುದ್ಧ ಮೊದಲ ಪಂದ್ಯ ಆಡಲಿದೆ.

Commonwealth Games 2022: ಭಾರತ ಹಾಕಿ ತಂಡಕ್ಕೆ ಮನ್‌ಪ್ರೀತ್ ಸಿಂಗ್ ನಾಯಕ

ಮುಂಬರುವ ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್‌ ಗೇಮ್ಸ್‌ಗೆ ಭಾರತ ಮಹಿಳಾ ಹಾಕಿ ತಂಡ ಹೀಗಿದೆ ನೋಡಿ

ಗೋಲ್ ಕೀಪರ್

ಸವಿತಾ ಪೂನಿಯಾ(ನಾಯಕಿ), ರಜನಿ ಎಟಿಮಾರ್ಪು

ಡಿಫೆಂಡರ್ಸ್‌

ದೀಪ್ ಗ್ರೇಸ್ ಎಕ್ಕಾ(ಉಪನಾಯಕಿ), ಗುರ್ಜೀತ್ ಕೌರ್, ನಿಕ್ಕಿ ಪ್ರಧಾನ್, ಉದಿತಾ

ಮಿಡ್ ಫೀಲ್ಡರ್ಸ್‌

ನಿಶಾ, ಸುಶೀಲಾ ಚಾನು, ಫುಕಾರಂಭಮ್, ಮೋನಿಕಾ, ನೇಹ, ಜ್ಯೋತಿ, ನವಜ್ಯೋತ್ ಕೌರ್, ಸಲಿಮಾ ತೇಟೆ

ಫಾವರ್ಡ್‌ ಪ್ಲೇಯರ್

ವಂದನಾ ಕಟಾರಿಯಾ, ಲಾಲ್‌ರೇಶಿಮಿ, ನವನೀತ್ ಕೌರ್, ಶರ್ಮಿಳಾ ದೇವಿ, ಸಂಗೀತಾ ಕುಮಾರಿ.

ಆರ್ಚರಿ ವಿಶ್ವಕಪ್‌: ಭಾರತ ಮಹಿಳಾ ತಂಡ ಫೈನಲ್‌ಗೆ

ಪ್ಯಾರಿಸ್‌: ಆರ್ಚರಿ ವಿಶ್ವಕಪ್‌ 3ರಲ್ಲಿ ಭಾರತದ ಮಹಿಳಾ ಆರ್ಚರಿ ತಂಡ ಫೈನಲ್‌ಗೆ ಪ್ರವೇಶಿಸಿದ್ದು, ಕೂಟದಲ್ಲಿ ಭಾರತಕ್ಕೆ ಮೊದಲ ಪದಕ ಖಚಿತಪಡಿಸಿಕೊಂಡಿದೆ. ದೀಪಿಕಾ ಕುಮಾರಿ, ಅಂಕಿತಾ ಭಕತ್‌ ಹಾಗೂ ಸಿಮ್ರನ್‌ಜೀತ್‌ ಕೌರ್‌ ಅವರನ್ನೊಳಗೊಂಡ ತಂಡ ಉಕ್ರೇನ್‌, ಬ್ರಿಟನ್‌ ಹಾಗೂ ಟರ್ಕಿ ತಂಡಗಳನ್ನು ಸೋಲಿಸಿ ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆಯಿತು. 

ಅರ್ಹತಾ ಸುತ್ತಿನಲ್ಲಿ ಕಳಪೆ ಪ್ರದರ್ಶನ ನೀಡಿ 13ನೇ ಸ್ಥಾನ ಪಡೆದಿದ್ದ ತಂಡ ಬಳಿಕ ಅತ್ಯುತ್ತಮ ಆಟವಾಡಿತು. ಫೈನಲ್‌ನಲ್ಲಿ ಭಾರತ ಭಾನುವಾರ ರಿಯೋ ಒಲಿಂಪಿಕ್ಸ್‌ ಕಂಚು ವಿಜೇತ ಚೈನೀಸ್‌ ತೈಪೆ ತಂಡವನ್ನು ಎದುರಿಸಲಿದೆ. ಆದರೆ ತರುಣ್‌ದೀಪ್‌ ರೈ, ಜಯಂತ, ಪ್ರವೀಣ್‌ ಜಾಧವ್‌ ಅವರನ್ನೊಳಗೊಂಡ ಪುರುಷರ ತಂಡ ಮೊದಲ ಸುತ್ತಲ್ಲೇ ಸೋತು ಹೊರಬಿತ್ತು.

click me!