ಮಹಿಳಾ ಹಾಕಿ ವಿಶ್ವಕಪ್ ಟೂರ್ನಿಗೆ ಭಾರತ ತಂಡ ಪ್ರಕಟ
ರಾಣಿ ರಾಂಪಾಲ್ ಅನುಪಸ್ಥಿತಿಯಲ್ಲಿ ಸವಿತಾ ಪೂನಿಯಾಗೆ ಒಲಿದ ನಾಯಕಿ ಪಟ್ಟ
ನೆದರ್ಲೆಂಡ್ಸ್ ಹಾಗೂ ಸ್ಪೇನ್‌ನಲ್ಲಿ ಜುಲೈ 1ರಿಂದ 17ರ ವರೆಗೆ ನಡೆಯಲಿರುವ ಮಹಿಳಾ ಹಾಕಿ ವಿಶ್ವಕಪ್
ನವದೆಹಲಿ(ಜೂ.22): ನೆದರ್ಲೆಂಡ್ಸ್ ಹಾಗೂ ಸ್ಪೇನ್‌ನಲ್ಲಿ ಜುಲೈ 1ರಿಂದ 17ರ ವರೆಗೆ ನಡೆಯಲಿರುವ ಮಹಿಳಾ ಹಾಕಿ (Indian Women's Hockey Team) ವಿಶ್ವಕಪ್‌ಗೆ 20 ಮಂದಿಯ ಭಾರತ ತಂಡ ಪ್ರಕಟಿಸಲಾಗಿದ್ದು, ಸವಿತಾ ಪೂನಿಯಾ (Savita Punia) ನಾಯಕಿಯಾಗಿ ನೇಮಕಗೊಂಡಿದ್ದಾರೆ. ದೀಪ್ ಗ್ರೇಸ್ ಅವರು ಉಪನಾಯಕಿಯಾಗಿ ಕಾರ‍್ಯನಿರ್ವಹಿಸಲಿದ್ದಾರೆ. ಖಾಯಂ ನಾಯಕಿ ರಾಣಿ ರಾಂಪಾಲ್ (Rani Rampal) ಇನ್ನಷ್ಟೇ ಗಾಯದಿಂದ ಚೇತರಿಸಿಕೊಳ್ಳಬೇಕಿದ್ದು, ಅವರು ತಂಡದಿಂದ ಹೊರಗುಳಿದಿದ್ದಾರೆ.
ಉಳಿದಂತೆ ಮೋನಿಕಾ, ನೇಹಾ, ಜ್ಯೋತಿ, ಸಲೀಮಾ ಟೆಟೆ, ನವ್‌ಜೋತ್ ಕೂಡಾ ತಂಡಕ್ಕೆ ಆಯ್ಕೆಯಾಗಿದ್ದಾರೆ. ರಾಣಿ ಹೊರತುಪಡಿಸಿ ಕಳೆದ ವರ್ಷ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ಎಲ್ಲಾ ಆಟಗಾರರು ವಿಶ್ವಕಪ್ ತಂಡದಲ್ಲೂ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಭಾರತ ಲೀಗ್‌ನಲ್ಲಿ ‘ಬಿ’ ಗುಂಪಿನಲ್ಲಿ ಇಂಗ್ಲೆಂಡ್, ನ್ಯೂಜಿಲೆಂಡ್, ಚೀನಾ ಜೊತೆ ಸ್ಥಾನ ಪಡೆದಿದ್ದು, ಜುಲೈ 3ಕ್ಕೆ ಇಂಗ್ಲೆಂಡ್ ವಿರುದ್ಧ ಮೊದಲ ಪಂದ್ಯ ಅಡಲಿದೆ.
undefined
ಮಹಿಳಾ ಪ್ರೊ ಲೀಗ್: ಅಮೆರಿಕ ವಿರುದ್ದ ಭಾರತ ಜಯಭೇರಿ
ಮಹಿಳಾ ಪ್ರೊ ಲೀಗ್ ಹಾಕಿ (Women's Pro League Hockey) ಟೂರ್ನಿಯಲ್ಲಿ ಮಂಗಳವಾರ ಭಾರತ ತಂಡ ಅಮೆರಿಕ ವಿರುದ್ದ 4-2 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿದೆ. ಇದರೊಂದಿಗೆ ಭಾರತ 13 ಪಂದ್ಯಗಳಲ್ಲಿ 5ನೇ ಗೆಲುವು ಸಾಧಿಸಿ 27 ಅಂಕ ಕಲೆಹಾಕಿದ್ದು, ಮೂರನೇ ಸ್ಥಾನದಲ್ಲೇ ಮುಂದುವರೆದಿದೆ.
Commonwealth Games 2022: ಭಾರತ ಹಾಕಿ ತಂಡಕ್ಕೆ ಮನ್‌ಪ್ರೀತ್ ಸಿಂಗ್ ನಾಯಕ
ಮಂಗಳವಾರ ನಡೆದ ಪಂದ್ಯದಲ್ಲಿ ಅಮೆರಿಕ 27ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆಯಿತು. ಆದರೆ ಬಳಿಕ ತಿರುಗೇಟು ನೀಡಿದ ಭಾರತ 3 ಗೋಲು ಬಾರಿಸಿತು. ದೀಪ್ ಗ್ರೇಸ್(30ನೇ ನಿಮಿಷ), ನವನೀತ್ ಕೌರ್(31ನೇ ನಿಮಿಷ) ಹಾಗೂ ಸೋನಿಕಾ(39ನೇ ನಿಮಿಷ) ಗೋಲು ಬಾರಿಸಿದರು. 45ನೇ ನಿಮಿಷದಲ್ಲಿ ಅಮೆರಿಕ ಎರಡನೇ ಗೋಲು ದಾಖಲಿಸಿದರೇ, ವಂದನಾ ಕಟಾರಿಯಾ 49ನೇ ನಿಮಿಷದಲ್ಲಿ ಗೋಲು ಬಾರಿಸುವ ಮೂಲಕ ಭಾರತದ ಗೆಲುವನ್ನು ಖಚಿತಪಡಿಸಿದರು. ಉಭಯ ತಂಡಗಳ ನಡುವಿನ ಎರಡನೇ ಪಂದ್ಯವು ಬುಧವಾರ ನಡೆಯಲಿದೆ.
ಅ-23 ಮಹಿಳಾ ಹಾಕಿ: ಭಾರತ-ನೆದರ್ಲೆಂಡ್ಸ್ ಡ್ರಾ
ಡಬ್ಲಿನ್: 5 ರಾಷ್ಟ್ರಗಳ ಅಂಡರ್-23 ಮಹಿಳಾ ಹಾಕಿ ಟೂರ್ನಿಯಲ್ಲಿ ಭಾರತ ಹಾಗೂ ನೆದರ್ಲೆಂಡ್‌್ಸ ವಿರುದ್ಧದ ಪಂದ್ಯ 2-2 ಗೋಲುಗಳಿಂದ ಡ್ರಾಗೊಂಡಿದೆ. ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ ನೆದರ್ಲೆಂಡ್ಸ್ 13 ಮತ್ತು 17ನೇ ನಿಮಿಷದಲ್ಲಿ ಗೋಲು ಹೊಡೆದು ಮುನ್ನಡೆ ಸಾಧಿಸಿತ್ತು. ಆದರೆ ಭಾರತದ ಪರ 19ನೇ ನಿಮಿಷದಲ್ಲಿ ಅನ್ನು, 37ನೇ ನಿಮಿಷದಲ್ಲಿ ಬ್ಯೂಟಿ ಡಂಗ್‌ದಂಗ್ ಗೋಲು ಹೊಡೆದು ಪಂದ್ಯ ಡ್ರಾಗೊಳಿಸಲು ನೆರವಾದರು. ಮೊದಲ ಪಂದ್ಯದಲ್ಲಿ ಆತಿಥೇಯ ಐರ್ಲೆಂಡ್ ವಿರುದ್ಧ 4-1 ಗೋಲುಗಳಿಂದ ಗೆಲುವು ಸಾಧಿಸಿದ್ದ ಭಾರತ, ಬುಧವಾರ ಉಕ್ರೇನ್ ವಿರುದ್ಧ 3ನೇ ಪಂದ್ಯ ಆಡಲಿದೆ.
ವಿಂಬಲ್ಡನ್: ಅರ್ಹತಾ ಸುತ್ತಲ್ಲೇ ರಾಮ್‌ಕುಮಾರ್, ಯೂಕಿಗೆ ಸೋಲು
ಲಂಡನ್: ಭಾರತದ ತಾರಾ ಟೆನಿಸಿಗರಾದ ರಾಮ್‌ಕುಮಾರ್ ರಾಮನಾಥನ್ ಹಾಗೂ ಯೂಕಿ ಭಾಂಬ್ರಿ ವಿಂಬಲ್ಡನ್ ಗ್ರ್ಯಾನ್‌ಸ್ಲಾಂ ಟೆನಿಸ್ ಟೂರ್ನಿಹ ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲಿ ಸೋತು ನಿರಾಸೆ ಮೂಡಿಸಿದ್ದಾರೆ. ಭಾರತದ ನಂ.1 ಟೆನಿಸಿಗರಾದ ರಾಮನಾಥನ್ ಅವರು ಪುರುಷರ ಸಿಂಗಲ್ಸ್‌ನಲ್ಲಿ ಚೆಕ್ ಗಣರಾಜ್ಯದ ವಿಟ್ ಕೊಪ್ರಿವಾ ವಿರುದ್ಧ 4-7, 4-6 ನೇರ ಗೇಮ್‌ಗಳಲ್ಲಿ ಪರಾಭವಗೊಂಡರು.
29 ವರ್ಷದ ಯೂಕಿ ಸ್ಪೇನ್‌ನ ಬೆರ್ನಾಬೆ ಜಪಟಾ ಎದುರು 5-7, 1-6 ನೇರ ಸೆಟ್‌ಗಳಿಂದ ಸೋತು ಹೊರಬಿದ್ದರು. ಇದರೊಂದಿಗೆ ವಿಂಬಲ್ಡನ್ ಸಿಂಗಲ್ಸ್‌ನಲ್ಲಿ ಈ ಬಾರಿಯೂ ಭಾರತೀಯ ಆಟಗಾರರ ಸ್ಪರ್ಧೆ ಇರುವುದಿಲ್ಲ. ಸಾನಿಯಾ ಮಿರ್ಜಾ ಮಹಿಳಾ ಡಬಲ್ಸ್‌ನಲ್ಲಿ ಚೆಕ್ ಗಣರಾಜ್ಯದ ಲೂಸಿ ಹೆಂಡ್ರಿಕ್ಕಾ ಜೊತೆ ಕಣಕ್ಕಿಳಿಯಲಿದ್ದಾರೆ.