Commonwealth Games 2022: ಭಾರತ ಹಾಕಿ ತಂಡಕ್ಕೆ ಮನ್‌ಪ್ರೀತ್ ಸಿಂಗ್ ನಾಯಕ

Published : Jun 21, 2022, 09:54 AM IST
Commonwealth Games 2022: ಭಾರತ ಹಾಕಿ ತಂಡಕ್ಕೆ ಮನ್‌ಪ್ರೀತ್ ಸಿಂಗ್ ನಾಯಕ

ಸಾರಾಂಶ

ಕಾಮನ್‌ವೆಲ್ತ್ ಗೇಮ್ಸ್‌ ಕ್ರೀಡಾಕೂಟಕ್ಕೆ ಭಾರತ ಹಾಕಿ ತಂಡಕ್ಕೆ ಪ್ರಕಟ ಮತ್ತೊಮ್ಮೆ ಹಾಕಿ ತಂಡದ ನಾಯಕರಾಗಿ ಪುನಾರಾಯ್ಕೆಯಾದ ಮನ್‌ಪ್ರೀತ್ ಸಿಂಗ್ 18 ಆಟಗಾರರನ್ನೊಳಗೊಂಡ ಪುರುಷರ ಹಾಕಿ ತಂಡದಲ್ಲಿ ಕನ್ನಡಿಗ ಸುನಿಲ್‌ಗಿಲ್ಲ ಸ್ಥಾನ

ನವದೆಹಲಿ(ಜೂ.21): ಮುಂಬರುವ ಕಾಮನ್‌ವೆಲ್ತ್‌ ಗೇಮ್ಸ್‌ಗೆ (Commonwealth Games) 18 ಮಂದಿಯ ಭಾರತದ ಪುರುಷರ ಹಾಕಿ ತಂಡವನ್ನು ಸೋಮವಾರ ಪ್ರಕಟಿಸಲಾಗಿದ್ದು, ಮನ್‌ಪ್ರೀತ್‌ ಸಿಂಗ್‌ ಮತ್ತೊಮ್ಮೆ ನಾಯಕನಾಗಿ ನೇಮಕಗೊಂಡಿದ್ದಾರೆ. ಹರ್ಮನ್‌ಪ್ರೀತ್‌ ಉಪನಾಯಕನಾಗಿ ಕಾರ‍್ಯನಿರ್ವಹಿಸಲಿದ್ದಾರೆ. ಈ ಮೊದಲು ಏಷ್ಯನ್‌ ಗೇಮ್ಸ್‌ ದೃಷ್ಟಿಯಲ್ಲಿಟ್ಟುಕೊಂಡು ಕಾಮನ್‌ವೆಲ್ತ್‌ಗೆ ಯುವ ಆಟಗಾರರ ತಂಡ ಕಳುಹಿಸಲು ಹಾಕಿ ಇಂಡಿಯಾ ನಿರ್ಧರಿಸಿತ್ತು. ಆದರೆ ಏಷ್ಯನ್‌ ಗೇಮ್ಸ್‌ ಮುಂದೂಡಿಕೆಯಾಗಿದ್ದರಿಂದ ಹಿರಿಯ ಆಟಗಾರರನ್ನೇ ಕಣಕ್ಕಿಳಿಸಲಾಗಿದೆ. 

ಗೋಲ್‌ಕೀಪರ್‌ ಪಿ.ಆರ್‌.ಶ್ರಿಜೇಶ್‌, ಅಭಿಷೇಕ್‌, ಅಮಿತ್‌ ರೋಹಿದಾಸ್‌ ಕೂಡಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. 2 ಬಾರಿ ಬೆಳ್ಳಿ ಗೆದ್ದಿರುವ, 2018ರ ಗೇಮ್ಸ್‌ನಲ್ಲಿ 4ನೇ ಸ್ಥಾನ ಪಡೆದಿರುವ ಭಾರತ ಹಾಕಿ ತಂಡ ಈ ಬಾರಿ ‘ಬಿ’ ಗುಂಪಿನಲ್ಲಿ ಇಂಗ್ಲೆಂಡ್‌, ಕೆನಡಾ, ವೇಲ್ಸ್‌ ಮತ್ತು ಘಾನಾ ಜೊತೆ ಸ್ಥಾನ ಗಿಟ್ಟಿಸಿಕೊಂಡಿದೆ. ಜು.31ಕ್ಕೆ ಘಾನಾ ವಿರುದ್ಧ ಮೊದಲ ಪಂದ್ಯ ಆಡಲಿದೆ. ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್‌ ಗೇಮ್ಸ್‌ ಕ್ರೀಡಾಕೂಟವು ಜುಲೈ 28ರಿಂದ ಆರಂಭವಾಗಲಿದೆ

ಕಳೆದ ವರ್ಷ ನಡೆದ ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತ ಹಾಕಿ ತಂಡವು ಬರೋಬ್ಬರಿ 4 ದಶಕಗಳ ಬಳಿಕ ಪದಕ ಭೇಟೆಯಾಡುವಲ್ಲಿ ಯಶಸ್ವಿಯಾಗಿತ್ತು. ಮನ್‌ಪ್ರೀತ್ ಸಿಂಗ್ ಪಡೆ ಟೋಕಿಯೋ ಒಲಿಂಪಿಕ್ಸ್‌ (Tokyo Olympics) ಕ್ರೀಡಾಕೂಟದಲ್ಲಿ ಕಂಚಿನ ಪದಕವನ್ನು ಜಯಿಸಿತ್ತು. ಸದ್ಯ ನೆದರ್ಲೆಂಡ್ಸ್‌ನಲ್ಲಿ ನಡೆಯುತ್ತಿರುವ ಎಫ್‌ಐಎಚ್‌ ಪ್ರೊ ಹಾಕಿ ಲೀಗ್ ಟೂರ್ನಿಯಲ್ಲಿ ಅಮಿತ್ ರೋಹಿದಾಸ್ ಭಾರತ ಹಾಕಿ ತಂಡವನ್ನು ನಾಯಕನಾಗಿ ಮುನ್ನಡೆಸುತ್ತಿದ್ದಾರೆ.

ರಾಜ್ಯದ ಸುನಿಲ್‌ಗಿಲ್ಲ ಸ್ಥಾನ

ಕರ್ನಾಟಕದ ಹಿರಿಯ ಆಟಗಾರ ಎಸ್‌.ವಿ.ಸುನಿಲ್‌ (SV Sunil) ಅವರಿಗೆ ಕಾಮನ್‌ವೆಲ್ತ್‌ ಗೇಮ್ಸ್‌ ತಂಡದಲ್ಲಿ ಸ್ಥಾನ ಲಭಿಸಿಲ್ಲ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಹಾಕಿಗೆ ನಿವೃತ್ತಿ ಘೋಷಿಸಿದ್ದ ಸುನಿಲ್‌, ಬಳಿಕ ಇತ್ತೀಚೆಗೆ ತಂಡಕ್ಕೆ ಮರಳಿದ್ದರು. ಕಳೆದ ತಿಂಗಳು ನಡೆದ ಏಷ್ಯನ್‌ ಗೇಮ್ಸ್‌ನಲ್ಲಿ ಅವರು ಉಪನಾಯಕನಾಗಿ ಕಾರ‍್ಯನಿರ್ವಹಿಸಿದ್ದರು.

ಮಹಿಳಾ ಪ್ರೊ ಹಾಕಿ: ಇಂದು ಭಾರತಕ್ಕೆ ಅಮೆರಿಕ ಸವಾಲು

ರಾಟೆರ್ಡಾಮ್‌(ನೆದರ್ಲೆಂಡ್‌್ಸ): ಮುಂದಿನ ತಿಂಗಳು ಆರಂಭವಾಗಲಿರುವ ಎಫ್‌ಐಎಚ್‌ ಮಹಿಳಾ ಹಾಕಿ ವಿಶ್ವಕಪ್‌ಗೂ ಮುನ್ನ ಗೆಲುವಿನ ಲಯ ಕಂಡುಕೊಳ್ಳುವ ತವಕದಲ್ಲಿರುವ ಭಾರತ ಮಹಿಳಾ ಹಾಕಿ ತಂಡ ಪ್ರೊ ಲೀಗ್‌ ಹಾಕಿ ಟೂರ್ನಿಯಲ್ಲಿ ಮಂಗಳವಾರ ಅಮೆರಿಕ ಸವಾಲನ್ನು ಎದುರಿಸಲಿದೆ. ಉಭಯ ತಂಡಗಳ ನಡುವಿನ 2ನೇ ಪಂದ್ಯ ಬುಧವಾರ ನಿಗದಿಯಾಗಿದೆ. 

FIH Hockey Pro League : ಭಾರತ ಮಹಿಳಾ ತಂಡಕ್ಕೆ ಭರ್ಜರಿ ಗೆಲುವು

ಟೂರ್ನಿಯಲ್ಲಿ ಭಾರತ 14 ಪಂದ್ಯಗಳಲ್ಲಿ 24 ಅಂಕ ಸಂಪಾದಿಸಿದ್ದು, 3ನೇ ಸ್ಥಾನದಲ್ಲಿದೆ. 16 ಪಂದ್ಯಗಳಲ್ಲಿ 42 ಅಂಕ ಪಡೆದಿರುವ ಅರ್ಜೆಂಟೀನಾ ಈಗಾಗಲೇ ಪ್ರಶಸ್ತಿ ಖಚಿತಪಡಿಸಿಕೊಂಡಿದೆ. ಹೀಗಾಗಿ ಭಾರತ ಉಳಿದ ಎರಡೂ ಪಂದ್ಯಗಳಲ್ಲಿ ಗೆದ್ದರೂ ನಂ.1 ಸ್ಥಾನಕ್ಕೇರಿ ಪ್ರಶಸ್ತಿ ಗೆಲ್ಲಲು ಸಾಧ್ಯವಿಲ್ಲ. ಆದರೆ ಜುಲೈ 1ಕ್ಕೆ ವಿಶ್ವಕಪ್‌ ಆರಂಭವಾಗಲಿದ್ದು, ಬಲಿಷ್ಠ ತಂಡವನ್ನು ಕಟ್ಟಲು ಈ ಟೂರ್ನಿ ಸಹಕಾರಿಯಾಗಲಿದೆ.

ಏಷ್ಯನ್‌ ಟ್ರ್ಯಾಕ್‌ ಸೈಕ್ಲಿಂಗ್‌: ಭಾರತಕ್ಕೆ ಮತ್ತೆರಡು ಕಂಚು

ನವದೆಹಲಿ: ಏಷ್ಯನ್‌ ಟ್ರ್ಯಾಕ್‌ ಸೈಕ್ಲಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ 3ನೇ ದಿನವಾದ ಸೋಮವಾರ ಆತಿಥೇಯ ಭಾರತ 2 ಕಂಚಿನ ಪದಕ ಗೆದ್ದುಕೊಂಡಿದೆ. ಪುರುಷರು ಕಿರಿಯರ ವಿಭಾಗದ 1 ಕಿ.ಮೀ. ಟೈಮ್‌ ಟ್ರಯಲ್‌ ಇವೆಂಟ್‌ನಲ್ಲಿ ರೊನಾಲ್ಡೊ ಸಿಂಗ್‌ ದೇಶದ ಪರ ಪ್ರಥಮ ಅಂತಾರಾಷ್ಟ್ರೀಯ ಪದಕ ಗೆದ್ದರೆ, 10 ಕಿ.ಮೀ. 40 ಲ್ಯಾಪ್‌ ರೇಸ್‌ನಲ್ಲಿ ಬಿರ್ಜಿತ್‌ ಸಿಂಗ್‌ ಕಂಚು ತಮ್ಮದಾಗಿಸಿಕೊಂಡರು. ಭಾರತ ಒಟ್ಟಾರೆ 20 ಪದಕಗಳನ್ನು ಬಾಚಿಕೊಂಡಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಜೋಹರ್‌ ಕಪ್: ಹಾಕಿ ಪಂದ್ಯದಲ್ಲಿ ಭಾರತ-ಪಾಕ್‌ ಹ್ಯಾಂಡ್‌ಶೇಕ್‌!
ಕ್ರಿಕೆಟ್ ಆಯ್ತು, ಈಗ ಭಾರತ-ಪಾಕ್ ಹಾಕಿಯಲ್ಲೂ ನೋ ಹ್ಯಾಂಡ್ ಶೇಕ್ ?