* ಏಷ್ಯಾಕಪ್ ಹಾಕಿ ಟೂರ್ನಿಯಲ್ಲಿಂದು ಭಾರತಕ್ಕೆ ಜಪಾನ್ ಸವಾಲು
* ಇಂಡೋನೇಷ್ಯಾ ವಿರುದ್ದ ಭರ್ಜರಿ ಗೆಲುವು ಸಾಧಿಸಿ ಸೂಪರ್ 4 ಹಂತ ಪ್ರವೇಶಿಸಿದ್ದ ಭಾರತ
* ಲೀಗ್ ಹಂತದ ಸೋಲಿಗೆ ಜಪಾನ್ ಎದುರು ಸೋಲು ಕಂಡಿದ್ದ ಭಾರತ
ಜಕಾರ್ತ(ಮೇ.28): ಏಷ್ಯಾ ಕಪ್ ಹಾಕಿ ಟೂರ್ನಿಯ (Asia Cup Hockey Tournament) ಸೂಪರ್ 4 ಹಂತ ಶನಿವಾರ ಆರಂಭಗೊಳ್ಳಲಿದ್ದು, ಇಂಡೋನೇಷ್ಯಾ ವಿರುದ್ಧದ ಗುಂಪು ಹಂತದ ಕೊನೆ ಪಂದ್ಯದ ಭರ್ಜರಿ ಗೆಲುವು ಸಾಧಿಸಿ ಹುಮ್ಮಸ್ಸಿನಲ್ಲಿರುವ ಭಾರತ, ಮೊದಲ ಪಂದ್ಯದಲ್ಲಿ ಜಪಾನ್ ವಿರುದ್ಧ ಸೆಣಸಾಡಲಿದೆ. ಗುಂಪು ಹಂತದಲ್ಲಿ ಜಪಾನ್ ವಿರುದ್ಧ 2-5 ಗೋಲುಗಳಿಂದ ಸೋತಿದ್ದ ಹಾಲಿ ಚಾಂಪಿಯನ್ ಭಾರತ, ಈ ಪಂದ್ಯದಲ್ಲಿ ಸೇಡು ತೀರಿಸಿಕೊಳ್ಳಲು ಕಾತರಿಸುತ್ತಿದೆ.
‘ಎ’ ಗುಂಪಿನಲ್ಲಿ ಎಲ್ಲಾ 3 ಪಂದ್ಯ ಗೆದ್ದು ಸೂಪರ್ 4ರ ಹಂತ ಪ್ರವೇಶಿಸಿರುವ ಜಪಾನ್‌ನಿಂದ ಭಾರತಕ್ಕೆ ಮತ್ತೆ ಕಠಿಣ ಸವಾಲು ಎದುರಾಗುವ ನಿರೀಕ್ಷೆ ಇದೆ. ಸೂಪರ್ 4 ಹಂತದಲ್ಲಿ ಮಲೇಷ್ಯಾ, ದ.ಕೊರಿಯಾ ತಂಡಗಳೂ ಇದ್ದು, ಎಲ್ಲಾ ತಂಡಗಳು ತಲಾ ಒಂದು ಬಾರಿ ಮುಖಾಮುಖಿಯಾಗಲಿವೆ. ಭಾರತ ಮಲೇಷ್ಯಾ ವಿರುದ್ಧ ಮೇ 29, ದ.ಕೊರಿಯಾ ವಿರುದ್ಧ ಮೇ 31ಕ್ಕೆ ಸೆಣಸಾಡಲಿದೆ.
undefined
ಪಂದ್ಯ ಆರಂಭ: ಸಂಜೆ 5ಕ್ಕೆ
ಕಿರಿಯರ ಬಾಕ್ಸಿಂಗ್: ಪ್ರಶಸ್ತಿ ಗೆದ್ದ ಸರ್ವಿಸಸ್, ಹರ್ಯಾಣ
ಬಳ್ಳಾರಿ: ಬಳ್ಳಾರಿಯಲ್ಲಿ ಶುಕ್ರವಾರ ಮುಕ್ತಾಯಗೊಂಡ ರಾಷ್ಟ್ರೀಯ ಸಬ್ ಜೂನಿಯರ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಸರ್ವಿಸಸ್ ಹಾಗೂ ಹರ್ಯಾಣ ಕ್ರಮವಾಗಿ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್ ಪ್ರಶಸ್ತಿ ತನ್ನದಾಗಿಸಿಕೊಂಡಿವೆ. ಕೂಟದ ಕೊನೆ ದಿನ ಸರ್ವಿಸಸ್ ನ 9 ಬಾಕ್ಸರ್‌ಗಳು ಚಿನ್ನದ ಪದಕ ಗೆದ್ದಿದ್ದು, ಒಟ್ಟು 10 ಪದಕಗಳೊಂದಿಗೆ ಪ್ರಶಸ್ತಿ ತನ್ನಲ್ಲೇ ಉಳಿಸಿಕೊಂಡಿತು.
ಇನ್ನು ಹರ್ಯಾಣ ಹಾಗೂ ಉತ್ತರ ಪ್ರದೇಶ ಕ್ರಮವಾಗಿ ದ್ವಿತೀಯ, ತೃತೀಯ ಸ್ಥಾನ ಪಡೆದುಕೊಂಡಿತು. ಬಾಲಕಿಯರ ವಿಭಾಗದಲ್ಲಿ ಹರಾರಯಣ 10 ಪದಕಗಳನ್ನು ಗೆದ್ದು ಪ್ರಥಮ ಸ್ಥಾನಿಯಾಯಿತು. ಕೂಟದಲ್ಲಿ 31 ತಂಡಗಳ 621 ಬಾಕ್ಸರ್‌ಗಳು ಸ್ಪರ್ಧಿಸಿದ್ದರು.
ಕೋಚ್ ವಿರುದ್ಧ ಜಿಮ್ನಾಸ್ಟ್ ಅರುಣಾ ರೆಡ್ಡಿ ವಿಡಿಯೋ ಚಿತ್ರೀಕರಣ ಆರೋಪ
ನವದೆಹಲಿ: ಫಿಟ್ನೆಸ್ ಟೆಸ್ಟ್ ವೇಳೆ ಕೋಚ್ ರೋಹಿತ್ ಜೈಸ್ವಾಲ್ ತಮ್ಮ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ ಎಂಬ ಭಾರತದ ಅಗ್ರ ಜಿಮ್ನಾಸ್ಟಿಕ್ ಪಟು ಅರುಣಾ ರೆಡ್ಡಿ ಅವರ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಭಾರತೀಯ ಕ್ರೀಡಾ ಪ್ರಾಧಿಕಾರ(ಸಾಯ್) ಶುಕ್ರವಾರ 3 ಸದಸ್ಯರ ಸಮಿತಿ ರಚನೆ ಮಾಡಿದೆ.
French Open ರಾಫಾ, ಜೋಕೋ ಪ್ರೀ ಕ್ವಾರ್ಟರ್‌ಗೆ ಲಗ್ಗೆ
2018ರಲ್ಲಿ ಮೆಲ್ಬರ್ನ್‌ನಲ್ಲಿ ವಿಶ್ವ ಚಾಂಪಿಯನ್‌ಶಿಪ್ ಕಂಚು ಗೆದ್ದಿದ್ದ ಅರುಣಾ ಅವರು, ಇತ್ತೀಚೆಗೆ ಬಾಕು ವಿಶ್ವಕಪ್‌ಗೂ ಮುನ್ನ ದೆಹಲಿಯಲ್ಲಿ ಫಿಟ್ನೆಸ್ ಪರೀಕ್ಷೆಗೆ ತೆರಳಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ಬಳಿಕ ಅವರ ಆರೋಪದ ಬಗ್ಗೆ ಭಾರತೀಯ ಜಿಮ್ನಾಸ್ಟಿಕ್ ಫೆಡರೇಶನ್(ಜಿಎಫ್‌ಐ) ತನಿಖೆ ನಡೆಸಿದ್ದರೂ ಜೈಸ್ವಾಲ್ ಅವರಿಗೆ ಕ್ಲೀನ್‌ಚಿಟ್ ನೀಡಲಾಗಿತ್ತು.
ಫೈನಲ್‌ನಲ್ಲಿ ವೀರೋಚಿತ ಸೋಲು ಕಂಡ ಪ್ರಜ್ಞಾನಂದ
ಚೆನ್ನೈ: ಭಾರತದ ಯುವ ಗ್ರ್ಯಾಂಡ್ ಮಾಸ್ಟರ್, 16ರ ಆರ್.ಪ್ರಜ್ಞಾನಂದ ಚೆಸ್ಸೇಬಲ್ ಆನ್‌ಲೈನ್ ರಾರಯಪಿಡ್ ಚೆಸ್ ಟೂರ್ನಿಯಲ್ಲಿ ರನ್ನರ್-ಅಪ್ ಸ್ಥಾನ ಪಡೆದುಕೊಂಡಿದ್ದಾರೆ. ಶುಕ್ರವಾರ ನಡೆದ ಫೈನಲ್ 2ನೇ ಸುತ್ತಿನಲ್ಲಿ ಅವರು ವಿಶ್ವ ನಂ.2 ಚೀನಾದ ಡಿಂಗ್ ಲೈರೆನ್ ವಿರುದ್ಧ ಟೈ ಬ್ರೇಕರ್‌ನಲ್ಲಿ ವೀರೋಚಿತ ಸೋಲು ಕಂಡರು.
2 ದಿನಗಳ ಕಾಲ ನಡೆದ ಫೈನಲ್‌ನ ಮೊದಲ ದಿನ 4 ಸುತ್ತುಗಳ ಮುಕ್ತಾಯಕ್ಕೆ ಪ್ರಜ್ಞಾನಂದ 1.5-2.5ರ ಹಿನ್ನಡೆ ಅನುಭವಿಸಿದ್ದರು. 2ನೇ ದಿನ 4 ಸುತ್ತುಗಳ ಪಂದ್ಯದಲ್ಲಿ ಅವರು 2.5-1.5 ಅಂತರದಲ್ಲಿ ಮುನ್ನಡೆ ಗಳಿಸಿ ಸಮಬಲ ಸಾಧಿಸಿದರು. ಆದರೆ ಟೈ ಬ್ರೇಕರ್‌ನಲ್ಲಿ ಅವರು 29 ವರ್ಷದ ಲೈರೆನ್‌ಗೆ ಶರಣಾದರು.