ನಿರ್ಣಾಯಕ ಘಟ್ಟದತ್ತ 23ನೇ ಕೊಡವ ಕೌಟುಂಬಿಕ ಹಾಕಿ ನೆಮ್ಮೆಯ
ಅಮ್ಮಣಿಚಂಡ, ಪಳಂಗಂಡ ತಂಡಗಳು ಕ್ವಾರ್ಟರ್ ಫೈನಲ್ ಪ್ರವೇಶ
ಮಳೆಯ ಕಾರಣದಿಂದಾಗಿ ಮರುವಂಡ ಮತ್ತು ಕುಪ್ಪಣ್ಣ ತಂಡಗಳ ನಡುವಿನ ಪಂದ್ಯ ಮುಂದೂಡಿಕೆ
ದುಗ್ಗಳ ಸದಾನಂದ, ಕನ್ನಡಪ್ರಭ
ನಾಪೋಕ್ಲು(ಏ.06): ಇಲ್ಲಿಗೆ ಸಮೀಪದ ಚೆರಿಯಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 23ನೇ ಕೊಡವ ಕೌಟುಂಬಿಕ ಹಾಕಿ ನಮ್ಮೆಯ ಬುಧವಾರದ ಫ್ರೀ ಕ್ವಾರ್ಟರ್ ಫೈನಲ್ ಪಂದ್ಯಾಟದಲ್ಲಿ ಚಕ್ಕೆರ, ಅಮ್ಮಣಿಚಂಡ, ಪಳಂಗಂಡ ತಂಡಗಳು ಮುಂದಿನ ಸುತ್ತು ಪ್ರವೇಶಿಸಿದವು. ಮೊದಲ ಪಂದ್ಯದಲ್ಲಿ ಚಕ್ಕೆರ ಮತ್ತು ಕಲಿಯಂಡ ತಂಡಗಳು ಸ್ಪರ್ಧಿಸಿದವು. ಚಕ್ಕೇರ ತಂಡದ ಆಟಗಾರರಾದ ವಿಶಾಲ್ ಎರಡು ಹಾಗೂ ಶಿವನ್ ಒಂದು ಗೋಲು ಗಳಿಸಿದರು. ಕಲಿಯಂಡ ತಂಡದ ಮಾಚಯ್ಯ ಹಾಗೂ ಕಾರ್ಯಪ್ಪ ಎರಡು ಗೋಲು ಗಳಿಸಿದರು. ಚಕ್ಕೆರ ತಂಡ 3- 2 ಅಂತರದಲ್ಲಿ ಮುನ್ನಡೆ ಸಾಧಿಸಿತು.
undefined
ಎರಡನೇ ಪಂದ್ಯದಲ್ಲಿ ಅಮ್ಮಣಿಚಂಡ ತಂಡವು ಕರಿನೆರವಂಡ ತಂಡದ ವಿರುದ್ಧ ಗೆಲುವು ಸಾಧಿಸಿತು. ಅಮ್ಮಣಿಚಂಡ ತಂಡದ ಪರವಾಗಿ ಆಟಗಾರರಾದ ವಿಜ್ಞೇಶ್ ಬೋಪಣ್ಣ ,ಬೆನ್ ಬೆಳ್ಳಿಯಪ್ಪ ಹಾಗೂ ಸಜನ್ ಸುಬ್ಬಯ್ಯ 3 ಗೋಲು ಗಳಿಸಿದರು. ಕರಿನೆರವಂಡ ತಂಡದ ಪರವಾಗಿ ರತನ್ ಕುಂಜಪ್ಪ ಹಾಗೂ ಬಿದ್ದಪ್ಪ ಎರಡು ಗೋಲು ಗಳಿಸಿದರು.
ಪಳಂಗಂಡ ಮತ್ತು ಕೊಂಗಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಪಳಂಗಂಡ ತಂಡ 2- 0 ಅಂತರದ ಜಯ ಸಾಧಿಸಿತು. ಪಳಗಂಡ ತಂಡದ ಪರವಾಗಿ ಪಿ.ಸಿ. ಮುತ್ತಣ್ಣ ಹಾಗೂ ಪೊನ್ನಪ್ಪ ಎರಡು ಗೋಲು ಗಳಿಸಿದರೆ ಕೊಂಗಂಡ ತಂಡಕ್ಕೆ ಯಾವುದೇ ಗೋಲು ಲಭ್ಯವಾಗಲಿಲ್ಲ.
ತಲೆಕೆಳಗಾಗಿ ನಿಂತು ಕಾಲುಗಳಿಂದ ಬಾಣದ ಪ್ರಯೋಗ, ಜಮ್ನಾಸ್ಟ್ ಹುಡುಗಿಯ ಬಿಲ್ವಿದ್ಯೆ ಪ್ರದರ್ಶನ
ಮಳೆಯ ಕಾರಣದಿಂದಾಗಿ ಮರುವಂಡ ಮತ್ತು ಕುಪ್ಪಣ್ಣ ತಂಡಗಳ ನಡುವಿನ ಪಂದ್ಯ ಮುಂದೂಡಲ್ಪಟ್ಟಿತು. ಈ ಎರಡು ತಂಡಗಳ ನಡುವೆ ಗುರುವಾರ ಸಡೆಸಾಟ ನಡೆಯಲಿದೆ.
ಅಪ್ಪಚೆಟ್ಟೋಳಂಡ ಕಪ್ ಹಾಕಿ ನಮ್ಮೆಯಲ್ಲಿ ಪಾಲ್ಗೊಳ್ಳಲು 336 ತಂಡಗಳು ನೋಂದಾಯಿಸಿದ್ದು ಹಲವು ತಂಡಗಳು ಪಂದ್ಯಗಳಿಂದ ಸೋತು ಹೊರನಡೆದಿವೆ. ಇದೀಗ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಪ್ರಬಲ ತಂಡಗಳು ಸೆಣೆಸಾಡಲಿದ್ದು ಇದುವರೆಗಿನ ಪಂದ್ಯಗಳಲ್ಲಿ ಒಟ್ಟು 952 ಗೋಲುಗಳು ದಾಖಲಾಗಿವೆ. 66 ಹಸಿರು ಕಾರ್ಡ್ ಹಾಗೂ 11 ಹಳದಿ ಕಾರ್ಡ್ ಬಳಸಲಾಗಿದೆ. 49 ಟೈ ಬ್ರೇಕರ್ ಪಂದ್ಯಗಳು ನಡೆದಿವೆ.
ಇಂದಿನ ಪಂದ್ಯಗಳು
9.30 ಕ್ಕೆ ಅಮ್ಮಣಿಚಂಡ-ಪಳಂಗಂಡ
11 ಗಂಟೆಗೆ ನೆಲ್ಲಮಕ್ಕಡ-ಕಂಬೀರಂಡ
1 ಗಂಟೆಗೆ ಕುಲ್ಲೇಟಿರ-ಪುದಿಯೊಕ್ಕಡ
2.30 ಕ್ಕೆ ಚಕ್ಕೆರ-ಪುದಿಯೊಕ್ಕಡ
ಮಳೆಯ ಕಾರಣದಿಂದಾಗಿ ಚೆರಿಯಪರಂಬುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯಿತ್ತಿರುವ ಅಪ್ಪಚೆಟ್ಟೋಳಂಡ ಕಪ್ ಹಾಕಿ ನಮ್ಮೆಯ ಮರುವಂಡ ಮತ್ತು ಕುಪ್ಪಣ್ಣ ತಂಡಗಳ ನಡುವಿನ ಪ್ರಿ ಕ್ವಾಟರ್ರ ಫೈನಲ್ ಪಂದ್ಯ ಮುಂದೂಡಲ್ಪಟ್ಟಿತು. ಈ ಎರಡು ತಂಡಗಳ ನಡುವೆ ಗುರುವಾರ ಸಡೆಸಾಟ ನಡೆಯಲಿದೆ.