ಕೊಡವ ಕೌಟುಂಬಿಕ ಹಾಕಿ ನಮ್ಮೆಯಲ್ಲಿ ಕಂಬೀರಂಡ, ಕುಪ್ಪಂಡಕ್ಕೆ ಗೆಲುವು
ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕ್ರೀಡಾಕೂಟ
ಪಳಗಂಡ ತಂಡವು ಚೋಕಿರ ತಂಡದ ವಿರುದ್ಧ 5- 0 ಭರ್ಜರಿ ಜಯ
- ದುಗ್ಗಳ ಸದಾನಂದ, ಕನ್ನಡಪ್ರಭ
ನಾಪೋಕ್ಲು(ಏ.02): ಇಲ್ಲಿಗೆ ಸಮೀಪದ ಚೆರಿಯಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 23ನೇ ಕೊಡವ ಕೌಟುಂಬಿಕ ಹಾಕಿ ನಮ್ಮೆಯ ಶನಿವಾರದ ಪಂದ್ಯಗಳಲ್ಲಿ ಚೊಟ್ಟೆಯಂಡಮಾಡ, ಕೊಲ್ಲಿರ, ಕಂಬೀರಂಡ, ಕುಪ್ಪಂಡ, ಕಲಿಯಾಟಂಡ, ಕರಿನೆರವಂಡ ಸೇರಿದಂತೆ ವಿವಿಧ ತಂಡಗಳು ಮುನ್ನಡೆ ಸಾಧಿಸಿದವು.
undefined
ಮೈದಾನ ಒಂದರಲ್ಲಿ ನಡೆದ ಮೊದಲ ಪಂದ್ಯದಲ್ಲಿ ಚೊಟ್ಟೆಯಂಡಮಾಡ ತಂಡವು ಪಾಲೆಯಡ ವಿರುದ್ಧ 4- 0 ಅಂತರದ ಭರ್ಜರಿ ಜಯ ಸಾಧಿಸಿತು. ಮುಂದಿನ ಪಂದ್ಯದಲ್ಲಿ ಕೊಲ್ಲಿರ ತಂಡವು ಅಂಜಪರವಂಡ ವಿರುದ್ಧ ಜಯ ಸಾಧಿಸಿದರೆ ಕಂಬೀರಂಡ ತಂಡ ಬೊಳಕಾರಂಡ ತಂಡದ ವಿರುದ್ಧ 4-0 ಅಂತರದ ಜಯ ಸಾಧಿಸಿತು. ಕುಪ್ಪಂಡ ತಂಡವು ಚೇರುಮಂದಂಡ ತಂಡದ ವಿರುದ್ಧ 5-2ರ ಮುನ್ನಡೆ ಸಾಧಿಸಿತು. ಕುಪ್ಪಂಡ ಸೋಮಯ್ಯ ಹ್ಯಾಟ್ರಿಕ್ ಗೋಲು ಗಳಿಸಿದರು. ಕಲಿಯಾಟಂಡ ಮತ್ತು ಕೋಣಿಯಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕಲಿಯಾಟಂಡ ತಂಡ ಜಯ ಸಾಧಿಸಿತು. ಕರಿನೆರವಂಡ ಮತ್ತು ಕೊಕ್ಕಂಡ ತಂಡಗಳ ನಡುವಿನ ಪಂದ್ಯದಲ್ಲಿ ಕರಿನೆರವಂಡ 2-1 ರ ಮುನ್ನಡೆ ಸಾಧಿಸಿತು.
ಮೈದಾನ ಎರಡರಲ್ಲಿ ನಡೆದ ಪಂದ್ಯದಲ್ಲಿ ಕೂತಂಡ ತಂಡ ಮಾತ್ರಂಡ ವಿರುದ್ಧ 3- 0 ಅಂತರದ ಗೆಲುವು ಸಾಧಿಸಿತು. ಬೊವ್ವೇರಿಯಂಡ ಕುಂಡ್ಯೋಳಂಡ ವಿರುದ್ಧ 2-0 ಅಂತರದ ಗೆಲವು ಸಾಧಿಸಿದರೆ ಪೆಮ್ಮಂಡ ತಂಡವು ಚಂದುರತಂಡದ ವಿರುದ್ಧ ಜಯ ಸಾಧಿಸಿ ಗೆಲುವಿನ ನಗೆ ಬೀರಿತು. ತೀತಮಾಡ ತಂಡವು ವಾಟೇರಿರ ತಂಡದ ವಿರುದ್ಧ ಜಯ ಸಾಧಿಸಿದರೆ ಮಾಚಿಮಂಡ ತಂಡ ಮಣವಟ್ಟಿರ ತಂಡದ ವಿರುದ್ಧ 3- 2 ಅಂತರದ ಗೆಲುವು ಸಾಧಿಸಿತು. ಪುಟ್ಟಿಚಂಡ ತಂಡಕ್ಕೆ ಬೊಟ್ಟೋಳಂಡ ವಿರುದ್ಧ 1-0 ಅಂತರದ ಜಯಲಭಿಸಿತು. ಚಪ್ಪಂಡ ತಂಡ ನಾಳಿಯಂಡ ತಂಡದ ವಿರುದ್ಧ 0-2 ಅಂತರದಿಂದ ಸೋಲನ್ನು ಅನುಭವಿಸಿತು.
ಸ್ಪೇನ್ ಮಾಸ್ಟರ್ಸ್: ಪಿ.ವಿ ಸಿಂಧು ಫೈನಲ್ಗೆ ಲಗ್ಗೆ, ಪ್ರಶಸ್ತಿಗೆ ಇನ್ನೊಂದೇ ಹೆಜ್ಜೆ
ಮೈದಾನ ಮೂರರಲ್ಲಿ ಪಳಗಂಡ ತಂಡವು ಚೋಕಿರ ತಂಡದ ವಿರುದ್ಧ 5- 0 ಭರ್ಜರಿ ಜಯ ಸಾಧಿಸಿತು. ಬೊಳ್ಳಂಡ ಅಜ್ಜಮಾಡ ತಂಡದ ವಿರುದ್ಧ 3-1 ಅಂತರದ ಗೆಲುವು ಸಾಧಿಸಿದರೆ ಮಂಡೇಡ ತಂಡದ ವಿರುದ್ಧ ಮುಕ್ಕಾಟಿರ (ಕಡಗದಾಳು) 5-1 ರ ಮುನ್ನಡೆ ಸಾಧಿಸಿತು. ಮುಕ್ಕಾಟಿರ (ಹರಿಹರ ತಂಡವು)2-1 ಅಂತರದಿಂದ ನಾಪಂಡ ತಂಡದ ವಿರುದ್ಧ ಜಯ ಸಾಧಿಸಿತು.
ಇಂದಿನ ಪಂದ್ಯಗಳು
ಮೈದಾನ 1
8.30ಕ್ಕೆ ಅಚ್ಚಪಂಡ-ಬಿದ್ದಂಡ
9.30ಕ್ಕೆ ಮೇಕೇರಿರ-ಚೀಯಕಪೂವಂಡ
10.30ಕ್ಕೆ ಐಚೆಟ್ಟಿರ-ಚೇಂದೀರ
11.30ಕ್ಕೆ ಕೊಂಗೇಟಿರ-ಇಟ್ಟಿರ
12.30ಕ್ಕೆ ಪುಲ್ಲಂಗಡ-ಕಳ್ಳಿಚಂಡ
1.30ಕ್ಕೆ ಪುದಿಯೊಕ್ಕಡ-ಬಾರಿಯಂಡ
2.30ಕ್ಕೆ ಕೊಂಗಂಡ-ನಾಳಿಯಂಡ
ಮೈದಾನ 2
8.30ಕ್ಕೆ ಮೇರಿಯಂಡ-ಚೌರೀರ(ಹೊದ್ದೂರು)
9.30ಕ್ಕೆ ಮಾತಂಡ-ಕುಲ್ಲೇಟಿರ
10.30ಕ್ಕೆ ಬೊಳ್ಯಪಂಡ-ಚಕ್ಕೇರ
11.30ಕ್ಕೆ ಅಳ್ತಂಡ-ಕಲಿಯಂಡ
12.30ಕ್ಕೆ ಕಲಿಯಾಟಂಡ-ಕರವಟ್ಟೀರ
1.30ಕ್ಕೆ ಮುರುವಂಡ-ಅಲ್ಲಂಡ
ಮೈದಾನ 3
9.30ಕ್ಕೆ ಮಾರ್ಚಂಡ-ಮುಕ್ಕಾಟಿರ(ಪುಲಿಕೋಟು)
10.30ಕ್ಕೆ ಐನಂಡ-ಅಮ್ಮಣಿಚಂಡ
11.30ಕ್ಕೆ ಮಂಡೇಪಂಡ-ಕೋಡಂಡ
12.30ಕ್ಕೆ ನೆಲ್ಲಮಕ್ಕಡ-ಪಟ್ಟಡ