Yoga Tips: ಬ್ಲೌಸ್ ಧರಿಸಿದಾಗ ಕೈ ಕೊಬ್ಬು ಕಾಣ್ತಿದ್ರೆ ಈ ಯೋಗ ಮಾಡಿ

Published : Aug 24, 2022, 04:51 PM IST
Yoga Tips: ಬ್ಲೌಸ್ ಧರಿಸಿದಾಗ ಕೈ ಕೊಬ್ಬು ಕಾಣ್ತಿದ್ರೆ ಈ ಯೋಗ ಮಾಡಿ

ಸಾರಾಂಶ

ಕೊಬ್ಬನ್ನು ಮುಚ್ಚಿಡೋದು ಕಷ್ಟ. ಹೊಟ್ಟೆ, ತೊಡೆ, ತೋಳು ಹೀಗೆ ದೇಹದ ಅನೇಕ ಭಾಗದ ಆಕಾರವನ್ನು ಇದು ಬದಲಿಸಿರುತ್ತದೆ. ಒಮ್ಮೆ ಶುರುವಾದ ಬೊಜ್ಜನ್ನು ಕಡಿಮೆ ಮಾಡೋದು ಸುಲಭವಲ್ಲ. ತೋಳಿನಲ್ಲಿ ಕೊಬ್ಬು ಹೆಚ್ಚಾಗಿದ್ರೆ ಅದಕ್ಕೊಂದಿಷ್ಟು ಯೋಗ ಮಾಡ್ಬೇಕು.  

ಕೊಬ್ಬು ಎನ್ನುವ ಸಂಗತಿ ಬಂದಾಗ ಮೊದಲು ಗಮನ ಹೋಗುವುದು ಹೊಟ್ಟೆ ಮತ್ತು ತೊಡೆಯ ಕಡೆಗೆ.  ಹೊಟ್ಟೆ ಮುಂದೆ ಬರುತ್ತದೆ. ತೊಡೆ ದಪ್ಪದಾಗಿ ಕಾಣುತ್ತದೆ. ಇವೆರಡ ಬಗ್ಗೆಯೇ ನಾವೆಲ್ಲ ಹೆಚ್ಚು ಗಮನ ನೀಡ್ತೇವೆ. ಆದ್ರೆ ತೋಳುಗಳ ಮೇಲೆ ಸಂಗ್ರಹವಾಗುವ ಕೊಬ್ಬನ್ನು ಸಾಮಾನ್ಯವಾಗಿ ಗಮನಿಸುವುದಿಲ್ಲ. ಬೊಜ್ಜು ಹೆಚ್ಚಾದಾಗ ಅದರ ಪರಿಣಾಮ ತೋಳುಗಳ ಮೇಲೂ ಸ್ಪಷ್ಟವಾಗಿ ಗೋಚರಿಸುತ್ತದೆ.  ಪ್ರತಿಯೊಬ್ಬರ ದೇಹ ರಚನೆ ಭಿನ್ನವಾಗಿರುತ್ತದೆ. ತೋಳಿನ ಭಾಗ ಉಳಿದ ಭಾಗಕ್ಕಿಂತ ಭಿನ್ನವಾಗಿ ಕಾಣುತ್ತದೆ. ಕೊಬ್ಬು ಹೆಚ್ಚಾದಾಗ ತೋಳಿನ ಭಾಗ ಮತ್ತಷ್ಟು ದಪ್ಪದಾಗಿ ಕಾಣುತ್ತದೆ. ಸ್ಲಿವ್ ಲೆಸ್ ಬಟ್ಟೆ ಅಥವಾ ಚಿಕ್ಕ ತೋಳಿನ ಬಟ್ಟೆ ಧರಿಸಲು ಸಾಧ್ಯವಾಗುವುದಿಲ್ಲ. ಜನರು ತೋಳು ದಪ್ಪದಾಗಿ ಕಾಣ್ತಿದೆ ಎನ್ನುವ ಕಾರಣಕ್ಕೆ ಸಡಿಲ ತೋಳಿನ ಬಟ್ಟೆ ಧರಿಸಲು ಮುಂದಾಗ್ತಾರೆ. ಎಷ್ಟೇ ಮುಚ್ಚಿಟ್ಟರೂ ಅದನ್ನು ಮರೆಮಾಚಲು ಸಾಧ್ಯವಾಗುವುದಿಲ್ಲ. ತೋಳಿನಲ್ಲಿ ಬೊಜ್ಜು ಹೆಚ್ಚಾಗ್ತಿದೆ, ತೋಳಿನ ಆಕಾರ ಬದಲಾಗಿದೆ ಎನ್ನಿಸಿದ್ರೆ ಕೊಬ್ಬನ್ನು ಕಡಿಮೆ ಮಾಡಲು ಕೆಲ ಯೋಗವನ್ನು ಮಾಡ್ಬೇಕು. ನಿಯಮಿತವಾಗಿ ಯೋಗ ಮಾಡಿದ್ರೆ ಸುಲಭವಾಗಿ ಬೊಜ್ಜನ್ನು ಕರಗಿಸಬಹುದು.    

ತೋಳು (Arm) ಗಳ ಗಾತ್ರ (Size) ಮತ್ತು ಕೊಬ್ಬ (Fat) ನ್ನು ಕಡಿಮೆ ಮಾಡಲು ಇಲ್ಲಿದೆ ಕೆಲ ಯೋಗ (Yoga) :  

ಪೂರ್ವೋತ್ತನಾಸನ : ತೋಳುಗಳ ಗಾತ್ರ ಮತ್ತು ಕೊಬ್ಬನ್ನು ಕಡಿಮೆ ಮಾಡಲು ಪೂರ್ವೋತ್ತಾನಾಸನ ಯೋಗ ಭಂಗಿ ಬಹಳ ಪ್ರಯೋಜನಕಾರಿ. ಮೊದಲು ಮ್ಯಾಟ್ ಮೇಲೆ ಕುಳಿತುಕೊಳ್ಳಬೇಕು.  ಕಾಲುಗಳನ್ನು ನೇರವಾಗಿ ಚಾಚಬೇಕು. ನಂತ್ರ ನಿಮ್ಮ ಕೈಗಳನ್ನು ಹಿಂದೆ ತೆಗೆದುಕೊಂಡು  ಅಂಗೈಗಳನ್ನು ನೆಲದ ಮೇಲೆ ಊರಬೇಕು. ನಿಮ್ಮ ಕಾಲುಗಳನ್ನು ಸ್ವಲ್ಪ ಬಗ್ಗಿಸಿ ಮತ್ತು  ತೋಳುಗಳ ಮೇಲೆ ಒತ್ತು ನೀಡಿ ದೇಹವನ್ನು ಮೇಲಕ್ಕೆ ಎತ್ತಲು ಪ್ರಾರಂಭಿಸಬೇಕು. ನಂತ್ರ ಬಾಗಿದ ಕಾಲುಗಳನ್ನು ಒಂದೊಂದಾಗಿ ನೇರಗೊಳಿಸಬೇಕ. ಈ ರೀತಿ ಮಾಡುವುದರಿಂದ  ತೋಳುಗಳ ಮೇಲೆ ಸಂಪೂರ್ಣ ಬಲ ಬೀಳುತ್ತದೆ. ಇದು ತೋಳಿನ ಕೊಬ್ಬು ಕರಗಿಸಲು ನೆರವಾಗುತ್ತದೆ. ಈ ಭಂಗಿಯನ್ನು ಕನಿಷ್ಠ ಮೂರರಿಂದ ಐದು ಬಾರಿ ಮಾಡಬೇಕು.

ಚತುರಂಗ ದಂಡಾಸನ :  ಮೊದಲನೆಯದಾಗಿ  ಹೊಟ್ಟೆ ಮೇಲೆ ಮಲಗಿಕೊಳ್ಳಬೇಕು. ನಂತ್ರ ನಿಮ್ಮ ಕೈಗಳನ್ನು ಪಕ್ಕೆಲುಬಿನ ಪಕ್ಕದಲ್ಲಿ ತರಬೇಕು. ನಂತ್ರ ನಿಧಾನವಾಗಿ ನಿಮ್ಮ ದೇಹವನ್ನು ಮೇಲಕ್ಕೆ ಎತ್ತಬೇಕು. ಕಾಲಿನ ಬೆರಳುಗಳು ಹಾಗೂ ಹಸ್ತ ಮಾತ್ರ ನೆಲಕ್ಕೆ ಊರಿರಬೇಕು. ಇಡೀ ಶರೀರ ದೇಹಕ್ಕೆ ಸಮಾನಾಂತರವಾಗಿರಬೇಕು. ಕೈ ಮಣಿಕಟ್ಟಿನ ನೇರಕ್ಕೆ ತೋಳಿರಬೇಕು. ಆಗ ದೇಹದ ಸಂಪೂರ್ಣ ಭಾರ ತೋಳಿನ ಮೇಲೆ ಬೀಳುತ್ತದೆ. ಇದ್ರಿಂದ ತೋಳಿನ ಕೊಬ್ಬು ಕಡಿಮೆಯಾಗುತ್ತದೆ.   

ಇದನ್ನೂ ಓದಿ: ಒಂದೇ ಒಳಉಡುಪು ಎಷ್ಟು ಗಂಟೆಗಳ ಕಾಲ ಧರಿಸ್ಬೋದು ?

ಭುಜಂಗಾಸನ : ಮೊದಲು ಹೊಟ್ಟೆಯ ಮೇಲೆ ಮಲಗಬೇಕು. ನಿಮ್ಮ ಕೈಗಳನ್ನು ಮಡಚಿ, ಎರಡೂ ಅಂಗೈಗಳನ್ನು ಎದೆಯ ಬದಿಯಲ್ಲಿ ನೆಲದ ಕಡೆಗೆ ಇರಿಸಿ. ಆಳವಾದ ಉಸಿರನ್ನು ತೆಗೆದುಕೊಂಡು ಕುತ್ತಿಗೆ ಮತ್ತು ತಲೆಯನ್ನು ಮೇಲಕ್ಕೆತ್ತಿ.  ಈ ಸಮಯದಲ್ಲಿ ತೊಡೆಯ ಕೆಳಗಿನ ಭಾಗ ನೆಲಕ್ಕೆ ತಾಗಿರಬೇಕು. ಕತ್ತು ಮತ್ತು ತಲೆ ಭಾಗವನ್ನು ಹಿಂದಕ್ಕೆ ಭಾಗಿಸಬೇಕು. ಈ ಭಂಗಿಯನ್ನು ಮೂರರಿಂದ ಐದು ಬಾರಿ ಮಾಡಬೇಕು. ಈ ಆಸನವು ತೋಳಿನ ಸ್ನಾಯುಗಳನ್ನು ಟೋನ್ ಮಾಡುವುದರ ಜೊತೆಗೆ  ಆ ಭಾಗದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: ಭಾನುವಾರ ಬಾಡೂಟವೇ ಬೇಕು ಯಾಕೆ ? ಈ ಅಭ್ಯಾಸ ಒಳ್ಳೆಯದಾ ?

Single Arm High Plank : ಮೊದಲು ಹೊಟ್ಟೆಯ ಮೇಲೆ ಮಲಗಬೇಕು. ನಂತ್ರ ಚದುರಂಗ ದಂಡಾಸನಕ್ಕೆ ಬರಬೇಕು. ಆ ನಂತ್ರ ಒಂದು ಅಂಗೈ ಮೇಲೆ ಬಲವನ್ನು ನೀಡಿ, ಇನ್ನೊಂದು ಕೈ ಹಾಗೂ ಕಾಲನ್ನು ಎತ್ತಬೇಕು. ಹಾಗೆಯೇ ಇನ್ನೊಂದು ಕಡೆ ಮಾಡಬೇಕು.  ದೇಹದ ತೂಕವು ಒಂದು ತೋಳಿನ ಮೇಲೆ ಬಂದಾಗ, ಸ್ನಾಯುಗಳು ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಇದರಿಂದ ಕೊಬ್ಬು ಕಡಿಮೆಯಾಗುತ್ತದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮೊಟ್ಟೆ ಸೇವಿಸುವ ಮುನ್ನ ಎಚ್ಚರ.. ಜನಪ್ರಿಯ ಬ್ರಾಂಡ್‌ನಲ್ಲೇ ಕ್ಯಾನ್ಸರ್ ಕಾರಕ ಅಂಶ ಪತ್ತೆ!
ರಾತ್ರಿ ಮಲಗುವ ಮುನ್ನ ಸ್ವಲ್ಪ ಜೇನುತುಪ್ಪ ಬೆರೆಸಿದ ಉಗುರು ಬೆಚ್ಚಗಿನ ನೀರನ್ನು ಕುಡಿದರೆ ಏನಾಗುತ್ತೆ?