ಗರ್ಭಿಣಿ ಎನ್ನುವುದೇ ಗೊತ್ತಿರಲಿಲ್ಲ.. ವಿಮಾನದಲ್ಲೇ ಹೆರಿಗೆ!

By Suvarna NewsFirst Published May 7, 2021, 12:11 AM IST
Highlights

ತಾನು ಗರ್ಭಿಣಿ ಎನ್ನುವುದು ಆಕೆಗೆ ಗೊತ್ತೆ ಇರಲಿಲ್ಲ/ ವಿಮಾನದಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ/ ವಿಮಾನದಲ್ಲಿ ಇದ್ದ ವೈದ್ಯರು ಮತ್ತು ದಾದಿಯಿಂದ ನೆರವು/ ಮಗು ಸುರಕ್ಷಿತವಾಗಿದ್ದು ಆಸ್ಪತ್ರೆಯಲ್ಲಿ ಆರೈಕೆ

ವಾಷಿಂಗ್ ಟನ್(ಮೇ  06)  ಆಕೆಗೆ ತಾನು ಗರ್ಭಿಣಿ ಎನ್ನುವುದೇ ಗೊತ್ತಿರಲಿಲ್ಲ.   ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದಳು . ಅಲ್ಲಿಯೇ  ಮಗುವಿಗೆ ಜನ್ಮ ನೀಡಿದ್ದಾಳೆ. ಯುಎಸ್ ನ ಉತಾಹ್ ದಿಂದ ಹುವಾಯಿ ಹೊನೊಲ್ಲು ಕಡೆಗೆ ಪ್ರಯಾಣ ಮಾಡುತ್ತಿದ್ದ ಮಹಿಳೆ ಮಗುವಿಗೆ  ಜನ್ಮ ನೀಡಿದ್ದಾಳೆ.

ನನಗೆ ನಾನು ಗರ್ಭಿಣಿ ಎನ್ನುವುದು ಗೊತ್ತಿರಲಿಲ್ಲ.  ಈ ಗಂಡು ಮಗು ಹೇಗೆ ಹೊರಗೆ ಬಂದ ಎನ್ನುವುದೆ ಗೊತ್ತಿಲ್ಲ ಎಂದು ಸಂದರ್ಶನವೊಂದರಲ್ಲಿ ಮಹಿಳೆ ಹೇಳಿಕೊಂಡಿದ್ದಾರೆ.

ಆಂಬುಲೆನ್ಸ್ ನಲ್ಲಿ ಅವಳಿ ಮಕ್ಕಳ ಜನನ

ಲಾವಿನೀಯಾ ಲಾವಿ   29  ವಾರಕ್ಕೆ ಮಗುವಿಗೆ ಜನ್ಮ ಮಕೊಟ್ಟಿದ್ದಾಳೆ.  ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದ ಡಾ. ಡೇಲ್ ಗ್ಲೇನ್ ಮಹಿಳೆಗೆ ನೆರವಾಗಿದ್ದಾರೆ. ದಾದಿಯೊಬ್ಬರು ವಿಮಾನದಲ್ಲಿ ಇದ್ದು ನೆರವಿಗೆ ಬಂದಿದ್ದಾರೆ.

ಸುರಕ್ಷಿತವಾಗಿ ಹೆರಿಗೆ ಮಾಡಿಸಿದ ವೈದ್ಯರ ಹೆಸರನ್ನೇ ಇಡುವುದು ಎಂಬ ತೀರ್ಮಾನಕ್ಕೆ ಮಹಿಳೆ ಬಂದಿದ್ದಾರೆ.  ಮಗುವನ್ನು ಮುಂದಿನ ಹತ್ತು ವಾರ ಕಾಲ ಆಸ್ಪತ್ರೆಯಲ್ಲಿ ಇಟ್ಟು ಆರೈಕೆ ಮಾಡಲು ತೀರ್ಮಾನ ಮಾಡಲಾಗಿದೆ.

ಇಂಥ ಸಂದರ್ಭದಲ್ಲಿ ನೆರವು ನೀಡುವುದರೊಂದಿಗೆ ಧೈರ್ಯ ಹೇಳುವುದು ಮುಖ್ಯ ಎಂದು ವೈದ್ಯರು ತಿಳಿಸಿದ್ದಾರೆ. ಈ ಹಿಂದೆ ಬೆಂಗಳೂರಿಗೆ ಬರುತ್ತಿದ್ದ ಮಹಿಳೆಗೆ ಹೆರಿಗೆಯಾಗಿದ್ದು ವಿಮಾನಯಾನ ಸಂಸ್ಥೆ ಹುಟ್ಟಿದ ಮಗುವಿಗೆ ಆಜೀವ ಪರ್ಯಂತ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿತ್ತು. 

 

 

click me!