ಔಷಧಿ ಪ್ಯಾಕೆಟ್‌ಗಳ ಮೇಲಿನ ಕೆಂಪು ಪಟ್ಟಿ ಅರ್ಥ ವಿವರಿಸಿದ ಆರೋಗ್ಯ ಸಚಿವಾಲಯ

By Suvarna NewsFirst Published Mar 11, 2024, 6:04 PM IST
Highlights

ಕೆಲವು ಔಷಧಿ ಪ್ಯಾಕೆಟ್‌ಗಳ ಮೇಲೆ ಕೆಂಪು ಪಟ್ಟಿಯನ್ನು ಎಂದಾದರೂ ಗಮನಿಸಿದ್ದೀರಾ? ಇದು ಅಲಂಕಾರಕ್ಕಾಗಿ ಮಾತ್ರವಲ್ಲ! ಈ ಚಿಕ್ಕ ವಿವರವು ಒಳಗಿನ ಔಷಧಿಗಳ ಬಗ್ಗೆ ದೊಡ್ಡ ಸಂದೇಶವನ್ನು ಹೊಂದಿದೆ.
 

ಯಾವುದೇ ಮಾತ್ರೆ ಸೇವಿಸುವ ಮುನ್ನ ಆ ಪ್ಯಾಕೆಟನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿ. ಅದರಲ್ಲಿ ಹಲವಷ್ಟು ವಿಷಯಗಳನ್ನು ಸಾಂಕೇತಿಕವಾಗಿ ನೀಡಲಾಗಿರುತ್ತದೆ. ಅದರಲ್ಲೊಂದು ಕೆಂಪು ಪಟ್ಟಿ. 
ಕೆಲ ಮಾತ್ರೆಗಳ ಪ್ಯಾಕೆಟ್ ಮೇಲೆ ಕೆಂಪು ಪಟ್ಟಿ ಇರುವುದನ್ನು ನೀವು ನೋಡಿರಬಹುದು. ಇದನ್ನು ಏಕೆ ಹಾಕಲಾಗುತ್ತದೆ ಎಂಬುದನ್ನು ಆರೋಗ್ಯ ಸಚಿವಾಲಯ ವಿವರಿಸಿದೆ.

ಸಮಾಲೋಚನೆಯಿಲ್ಲದೆ ಔಷಧಿಯನ್ನು ಸೇವಿಸುವ ಮತ್ತು ಕೆಲವೊಮ್ಮೆ ಅಡ್ಡ ಪರಿಣಾಮಗಳಿಂದ ಬಳಲುವವರನ್ನು ನಾವು ನೋಡಿದ್ದೇವೆ. ವೈದ್ಯರ ಸಲಹೆಯಿಲ್ಲದೆ ಈ ಔಷಧಿಗಳ ಸೇವನೆಯು ಜೀವಕ್ಕೆ ಅಪಾಯವನ್ನು ಉಂಟು ಮಾಡಬಹುದು.

ಕೆಂಪು ಪಟ್ಟಿಯ ಸೂಚನೆ
ಆರೋಗ್ಯ ಸಚಿವಾಲಯವು ತನ್ನ ಎಕ್ಸ್ ಖಾತೆಯಲ್ಲಿ ಔಷಧಿಯ ಹಿಂದಿನ ಲೇಬಲ್‌ನಲ್ಲಿನ ನಿರ್ದಿಷ್ಟ ವಿವರಕ್ಕೆ ಗಮನ ಕೊಡುವ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದೆ. ಇದು ನಿಮ್ಮ ಔಷಧಿ ಎಷ್ಟು ಸುರಕ್ಷಿತವಾಗಿ ಮತ್ತು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ ಎಂಬುದರ ಮೇಲೆ ಪ್ರಭಾವ ಬೀರುವ ವಿವರವಾಗಿದೆ.

ಪ್ರತಿ ದಿನ ಪುಷ್-ಅಪ್‌ ಮಾಡೋದ್ರಿಂದ ನಿಮ್ಮ ದೇಹದಲ್ಲಿ ಈ ಬದಲಾವಣೆ ಕಾಣ್ಬೋದು..
 

'ಔಷಧಿಗಳ ಪಟ್ಟಿಯ ಮೇಲಿನ ಕೆಂಪು ರೇಖೆಯು ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಔಷಧಿಯನ್ನು ಸೇವಿಸಬಾರದು ಎಂದು ಸೂಚಿಸುತ್ತದೆ' ಎಂದು ಆರೋಗ್ಯ ಸಚಿವಾಲಯವು X ನಲ್ಲಿ ಬರೆದಿದೆ.

ಮಾನ್ಯವಾದ ವೈದ್ಯಕೀಯ ಪ್ರಿಸ್ಕ್ರಿಪ್ಷನ್ ಒದಗಿಸಿದಾಗ ಮಾತ್ರ ಈ ಔಷಧಿಗಳನ್ನು ಔಷಧಾಲಯಗಳಿಂದ ಪಡೆಯಬಹುದು ಎಂದು ಸಚಿವಾಲಯ ಮಾಹಿತಿ ನೀಡಿದೆ. ಅದರಲ್ಲೂ ಆ್ಯಂಟಿ ಬಯೋಟಿಕ್ ವಿಚಾರದಲ್ಲಿ ಹಗುರವಾಗಿ ಕಾಣುವುದು ತರವಲ್ಲ. 

ಆದ್ದರಿಂದ, ನೀವು ಔಷಧದ ಮುಕ್ತಾಯ ದಿನಾಂಕವನ್ನು ಪರಿಶೀಲಿಸುವಾಗ, ಪ್ಯಾಕೆಟ್ ಮೇಲೆ ಕೆಂಪು ಪಟ್ಟಿಯನ್ನು ಕೂಡಾ ಗಮನಿಸುವುದು ಅಷ್ಟೇ ಮುಖ್ಯ.

 

Medicines, especially antibiotics that have a red vertical line on the packaging, should never be consumed without consulting a qualified doctor. Be aware, Be safe. pic.twitter.com/D9LBSLJ6PN

— Ministry of Health (@MoHFW_INDIA)
click me!