ಸ್ಪರ್ಶಕ್ಕೆ ಅಪಾರ ಶಕ್ತಿಯಿದೆ. ಮಾತಿನಲ್ಲಿ ಹೇಳಲಾಗದ್ದನ್ನು ಸ್ಪರ್ಶದಿಂದ ಹೇಳ್ಬಹುದು. ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಸ್ಪರ್ಶ ಒಂದು ಒಳ್ಳೆ ವಿಧಾನ ಮಾತ್ರವಲ್ಲ ಪತ್ನಿಯ ನೋವಿಗೆ ಇದು ಔಷಧಿ ಆಗ್ಬಹುದು.
ಮಾತು ಬಾರದ ಪುಟ್ಟ ಮಗು ಹಾಗೂ ಮೂಕ ಪ್ರಾಣಿಗಳು ಕೇವಲ ತಾಯಿಯ ಸ್ಪರ್ಶದಿಂದಲೇ ಅವರನ್ನು ಗುರುತಿಸುತ್ತವೆ. ತಾಯಿಯ ಸ್ಪರ್ಶದಿಂದಲೇ ಅಳುತ್ತಿರುವ ಮಗು ಅಳುವುದನ್ನು ನಿಲ್ಲಿಸುತ್ತದೆ. ಕೇವಲ ಒಂದು ಸ್ಪರ್ಶದಲ್ಲಿ ಸಾಕಷ್ಟು ಅಡಗಿದೆ. ಸ್ಪರ್ಶ, ಮಾನಸಿಕ ಹಾಗೂ ಶಾರೀರಿಕ ಆರೋಗ್ಯವನ್ನು ಕಾಪಾಡುವ ಶಕ್ತಿ ಹೊಂದಿದೆ.
ನಮ್ಮ ಗೆಳೆಯರು, ಆಪ್ತರು ಅಥವಾ ಸಂಗಾತಿ (Spouse) ಯ ಕೈಯನ್ನು ಹಿಡಿದುಕೊಂಡಾಗ ನಮಗೇ ತಿಳಿಯದಂತೆ ನಮ್ಮ ಶರೀರದಲ್ಲಿ ಅನೇಕ ರೀತಿಯ ಬದಲಾವಣೆಗಳು ಆಗುತ್ತವೆ. ಕೇವಲ ಆ ಒಂದು ಸ್ಪರ್ಶ (Touch) ಹಾಗೂ ಹಿತವಾದ ಅನುಭವದಿಂದಲೇ ನಮ್ಮೊಳಗಿರುವ ಅನೇಕ ನೋವುಗಳು ಮಾಯವಾಗುತ್ತವೆ. ನಮ್ಮ ಮೆದುಳು (Brain), ಹೃದಯ ಹಾಗೂ ಉಸಿರಾಟ ಕ್ರಿಯೆ ಕೂಡ ಇದಕ್ಕೆ ಸ್ಪಂದಿಸುತ್ತದೆ ಎನ್ನುವುದು ಒಂದು ಅಧ್ಯಯನದಿಂದ ತಿಳಿದುಬಂದಿದೆ.
undefined
ರಾತ್ರಿ ಲೈಟ್ ಆನ್ ಮಾಡಿಟ್ಟು ಮಲಗಿದ್ರೆ ರಕ್ತದೊತ್ತಡ ಹೆಚ್ಚಾಗುತ್ತೆ ಹುಷಾರ್!
ಇಂಟರ್ ಪರ್ಸನಲ್ ಸಿಂಕ್ರೊನೈಸೇಶನ್ ನಲ್ಲಿ ನಡೆಸಿದ ಸಂಶೋಧನೆಯಲ್ಲಿ 22 ಜೋಡಿಗಳ ಮೇಲೆ ಅಧ್ಯಯನ ನಡೆಸಲಾಗಿತ್ತು. ಈ ಅಧ್ಯಯನದಲ್ಲಿ ನಮ್ಮ ದೇಹದ ಭಾಗಗಳು ಪರಸ್ಪರ ಸಿಂಕ್ ಆಗಲು ಅನೇಕ ಮಾರ್ಗಗಳಿವೆ ಎನ್ನುವುದು ತಿಳಿದುಬಂದಿದೆ. ಕೊಲೊರಾಡೋ ಬೌಲ್ಡರ್ ವಿಶ್ವವಿದ್ಯಾನಿಲಯದ ಪ್ರಮುಖ ಸಂಶೋಧಕ ಪಾವೆಲ್ ಗೋಲ್ಡ್ ಸ್ಟೈನ್ ಅವರು ತಮ್ಮ ಮಗಳ ಜನನದ ಸಮಯದಲ್ಲಿ ಹೆಂಡತಿಯ ಕೈಯನ್ನು ಹಿಡಿದಾಗ ಆಕೆಯ ಹೆರಿಗೆ ನೋವು ಕಡಿಮೆಯಾಗಿರುವುದು ಅವರಿಗೆ ಕಂಡುಬಂದಿದೆ.
ಕೈಗಳ ಸ್ಪರ್ಷದಿಂದಲೇ ಎಷ್ಟೋ ನೋವುಗಳು ಕಡಿಮೆಯಾಗುತ್ತೆ : ಈ ಘಟನೆಯ ನಂತರ ಗೋಲ್ಡ್ ಸ್ಟೈನ್ ಅವರು, ಒಬ್ಬರ ಸ್ಪರ್ಶದಿಂದ ನೋವನ್ನು ಕಡಿಮೆ ಮಾಡಬಹುದಾ ಎನ್ನುವುದನ್ನು ನಾನು ಪ್ರಯೋಗಾಲಯದಲ್ಲಿ ಪರೀಕ್ಷಿಸಲು ಬಯಸಿದ್ದೆ ಎಂದು ಹೇಳುತ್ತಾರೆ. ಅಧ್ಯಯನದಲ್ಲಿ 23ರಿಂದ 32 ವರ್ಷದ ದಂಪತಿ ಇದ್ದರು. ಅವರನ್ನು ಎಲೆಕ್ಟ್ರೋ ಎನ್ಸೆಫಾಲೋಗ್ರಫಿ (EEG)ಯ ಪರೀಕ್ಷೆಗೆ ಒಳಪಡಿಸಲಾಯ್ತು. ಇಇಜಿ ಪರೀಕ್ಷೆಯು ಮೆದುಳಿನ ಕಾರ್ಯಚಟುವಟಿಕೆಯನ್ನು ನಿರ್ಣಯಿಸುವ ಮೂಲಭೂತ ಪರೀಕ್ಷೆಗಳಲ್ಲಿ ಒಂದಾಗಿದೆ. ಇಇಜಿ ಕ್ಯಾಪ್ ಗಳ ಮೂಲಕ ಹಲವು ಸನ್ನಿವೇಶಗಳಲ್ಲಿ ಮೆದುಳಿನ ತರಂಗಗಳು ಹೇಗೆ ಕೆಲಸ ನಿರ್ವಹಿಸುತ್ತದೆ ಎನ್ನುವುದನ್ನು ಪತ್ತೆ ಹಚ್ಚಲಾಗುತ್ತದೆ.
ಖಿನ್ನತೆ ನಿವಾರಿಸುವ ಕೇಸರಿ, ದುಬಾರಿ ಮಸಾಲೆಯಿಂದ ಆರೋಗ್ಯಕ್ಕಿದೆ ಹಲವು ಲಾಭ
ಸಂಗಾತಿಗಳು ಒಟ್ಟಿಗೆ ಕುಳಿತುಕೊಳ್ಳುವುದು, ಸ್ಪರ್ಶಿಸುವುದು, ಕೈಗಳನ್ನು ಹಿಡಿದುಕೊಳ್ಳುವುದು ಹಾಗೂ ಅವರನ್ನು ಪ್ರತ್ಯೇಕ ಕೊಠಡಿಯಲ್ಲಿ ಇರಿಸುವುದು ಮುಂತಾದ ಅನೇಕ ಪ್ರಯೋಗಗಳನ್ನು ಮಾಡಲಾಯ್ತು. ಇದರಿಂದ ಯಾವ ಕ್ರಿಯೆಗಳಲ್ಲಿ ಮೆದುಳು ಹೇಗೆ ಪ್ರತಿಕ್ರಯಿಸುತ್ತದೆ ಎನ್ನುವುದು ತಿಳಿದುಬಂತು. ಒಬ್ಬ ಮಹಿಳೆ ನೋವಿನಲ್ಲಿರುವಾಗ ಆಕೆಯ ಕೈಯನ್ನು ಗಂಡ ಹಿಡಿದುಕೊಂಡಾಗ ಆಕೆಯ ಮೆದುಳು ಹೆಚ್ಚು ಸಿಂಕ್ ಆಗುತ್ತಿತ್ತು. ಆದರೆ ಕೈ ಹಿಡಿದುಕೊಳ್ಳದೇ ಇರುವಾಗ ಮೆದುಳಿನ ತರಂಗದ ಸಿಂಕಿಂಗ್ ಕಡಿಮೆಯಾಯ್ತು. ತಂದೆ ಮಗನ ಕೈ ಹಿಡಿದಾಗ ಅಥವಾ ಯಾವುದೋ ಅಪರಿಚಿತರ ಕೈ ಹಿಡಿದುಕೊಂಡಾಗ ನಮ್ಮಲ್ಲಿ ಯಾವುದೇ ರೀತಿಯ ಮಾನಸಿಕ ಅಥವಾ ದೈಹಿಕ ಬದಲಾವಣೆಗಳು ಉಂಟಾಗುವುದಿಲ್ಲ. ಹಾಗಾಗಿ ಸೇಮ್ ಸೆಕ್ಸ್ ಹೊಂದಿರುವವರ ಸ್ಪರ್ಶಕ್ಕೆ ಮೆದುಳು ಹೆಚ್ಚು ಪ್ರತಿಕ್ರಯಿಸುವುದಿಲ್ಲ ಎನ್ನುವುದು ಅಧ್ಯಯನದಿಂದ ತಿಳಿದುಬಂದಿದೆ. ವಿಜ್ಞಾನಿಗಳು ಕೂಡ ಇದನ್ನು ಶಿಫಾರಸು ಮಾಡಿದ್ದಾರೆ.
ದೈಹಿಕ ಸಂವಹನದ (Physcial communication) ಅವಶ್ಯಕತೆಯಿದೆ : ಆತ್ಮೀಯರ ಸ್ಪರ್ಶದಿಂದ ಅಥವಾ ನಮ್ಮ ನೋವನ್ನು ಹಂಚಿಕೊಳ್ಳಲು ಇನ್ನೊಬ್ಬರು ಇದ್ದಾರೆ ಎನ್ನುವ ಭಾವನೆ ನಮ್ಮಲ್ಲಿ ಮೂಡಿದಾಗ ಅದರಿಂದಲೇ ಅರ್ಧದಷ್ಟು ನೋವು ಕಡಿಮೆಯಾಗುತ್ತದೆ. ಸಂಗಾತಿಯೊಂದಿಗಿನ ಒಡನಾಟ ಹೃದಯ ಬಡಿತವನ್ನು ಕೂಡ ಹೆಚ್ಚಿಸಿ, ಉಸಿರಾಟ ಕ್ರಿಯೆಯನ್ನು ಕೂಡ ಸರಾಗ ಮಾಡುತ್ತದೆ. ಆಧುನಿಕ ಜಗತ್ತಿನಲ್ಲಿ ನಾವು ಇತರರೊಂದಿಗೆ ಮಾತನಾಡಲು, ಸಂಪರ್ಕಿಸಲು ಅನೇಕ ಮಾರ್ಗಗಳನ್ನು ಕಂಡುಹಿಡಿದಿದ್ದೇವೆ. ಸಂವಹನ ನಡೆಸಲು ಎಷ್ಟೇ ಸೌಲಭ್ಯಗಳು ಇದ್ದರೂ ದೈಹಿಕ ಸಂವಹನಗಳು ಕಡಿಮೆಯಾಗಿದೆ. ಒಬ್ಬರಿಗೊಬ್ಬರು ಆತ್ಮೀಯತೆಯಿಂದ ಸ್ಪರ್ಶಿಸುವುದನ್ನು, ಕೈ ಹಿಡಿದು ಓಡಾಡುವುದನ್ನು ಮರೆತಿದ್ದೇವೆ. ಮನುಷ್ಯರಿಗಿಂತ ಎಲೆಕ್ಟ್ರಾನಿಕ್ ಗೆಜೆಟ್ ಗಳನ್ನು ಹೆಚ್ಚು ಸ್ಪರ್ಷಿಸುತ್ತಿದ್ದೇವೆ. ಇದರಿಂದ ದೈಹಿಕ ಸಂವಹನ ಕ್ರಿಯೆ ಕಡಿಮೆಯಾಗುತ್ತಿದೆ.