Weight Loss: ವರ್ಕ್ ಫ್ರಂ ಹೋಮ್‌ನಿಂದ ತೂಕ ಹೆಚ್ಚಾಗ್ತಾ ಇದ್ಯಾ? ಯೋಚಿಸ್ಬೇಡಿ

By Suvarna News  |  First Published Jan 7, 2022, 6:51 PM IST

ಸ್ಥೂಲಕಾಯ ಬಹುತೇಕರ ದೊಡ್ಡ ಸಮಸ್ಯೆ. ಕಂಪ್ಯೂಟರ್ ಮುಂದೆ ಸದಾ ಸಮಯ ಕಳೆಯುವ ಜನರಿಗೆ ಏರುತ್ತಿರುವ ತೂಕ ನಿದ್ರೆಗೆಡಿಸುತ್ತಿದೆ. ತೂಕ ಹೆಚ್ಚಾಗಿದೆ ಅಂತಾ ಬಾಯಲ್ಲಿ ಹೇಳುವ ಕೆಲವರು ಅದನ್ನು ಇಳಿಸಲು ಏನೂ ಮಾಡೋದಿಲ್ಲ.  
 


ಕೊರೊನಾ (Corona ) ಎರಡನೇ ಅಲೆ ಮುಗಿಯುತ್ತಿದ್ದಂತೆ ದೇಶ ಸಹಜ ಸ್ಥಿತಿಗೆ ಮರಳುತ್ತಿತ್ತು. ಕಚೇರಿ (Office)ಗಳ ಬಾಗಿಲು ತೆರೆದಿತ್ತು. ಜನರು ವರ್ಕ್ ಫ್ರಂ ಹೋಮ್ (Work from home) ಮುಗಿಸಿ,ವರ್ಕ್ ಫ್ರಂ ಕಚೇರಿಗೆ ಹೊಂದಿಕೊಳ್ತಿದ್ದರು. ಇನ್ನೂ ಕೆಲ ಕಂಪನಿಗಳು ಕೊರೊನಾ ಶುರುವಾದಾಗಿನಿಂದ ಈಗಿನವರೆಗೂ ವರ್ಕ್ ಫ್ರಂ ಹೋಮ್ ನಿಯಮವನ್ನೇ ಪಾಲಿಸ್ತಿವೆ. ಮನೆಯಲ್ಲಿ ಕೆಲಸ ಮಾಡುವುದ್ರಿಂದ ಜನರ ತೂಕ (Weight )ಹೆಚ್ಚಾಗ್ತಿದೆ. ಸ್ಥೂಲಕಾಯ ಸಮಸ್ಯೆ ಜಾಸ್ತಿಯಾಗ್ತಿದೆ. ಮನೆಯಿಂದ ಕೆಲಸ ಮಾಡುವ ಜನರು ದಿನಚರಿ ಬದಲಿಸ್ತಿದ್ದಾರೆ. ಇದು ಅವರ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ.  ಇದ್ರ ಅಡ್ಡ ಪರಿಣಾಮವೆಂದರೆ ತೂಕ ಹೆಚ್ಚಾಗುವುದು. ಸರಿಯಾದ ಸಮಯದಲ್ಲಿ ಆಹಾರ ಸೇವನೆ,ಪ್ರತಿನಿತ್ಯ ವ್ಯಾಯಾಮ ಮಾಡದ ಕಾರಣ  ಬೊಜ್ಜು ಕಾಡಲು ಶುರುವಾಗುತ್ತದೆ. ವರ್ಕ್ ಫ್ರಂ ಹೋಮ್ ಮಾಡುವವರು ತೂಕ ಕಡಿಮೆ ಮಾಡಿಕೊಂಡು ಫಿಟ್ ಆಗಿರಬೇಕೆಂದ್ರೆ ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ಇದರ ಸಹಾಯದಿಂದ ನಿಮ್ಮ ತೂಕ ಕಡಿಮೆಯಾಗುವುದು ಮಾತ್ರವಲ್ಲದೆ ನಿಮ್ಮ ದೇಹವೂ ಆರೋಗ್ಯಕರವಾಗಿರುತ್ತದೆ.  

ವರ್ಕ್ ಫ್ರಂ ಹೋಮ್ ನಿಂದ ತೂಕ ಹೆಚ್ಚಾಗಲು ಕಾರಣ:
ಮನೆಯಲ್ಲಿಯೇ ಕೆಲಸ ಮಾಡುವ ಕಾರಣ ಕಚೇರಿಗೆ ಹೋಗುವ ಸಮಯ ಉಳಿಯುತ್ತದೆ. ಜನರು ಇದೇ ಕಾರಣಕ್ಕೆ ನಿದ್ರೆ ಹೆಚ್ಚು ಮಾಡ್ತಿದ್ದಾರೆ. ಇದು ತೂಕ ಹೆಚ್ಚಿಸುತ್ತಿದೆ. ಉತ್ತಮ ಆರೋಗ್ಯಕ್ಕೆ 7 ರಿಂದ 8 ಗಂಟೆಗಳ ಕಾಲ ನಿದ್ದೆ ಮಾಡಬೇಕು. ಆದರೆ ಜನರು 10 ಗಂಟೆಗಳ ಕಾಲ ನಿದ್ದೆ ಮಾಡ್ತಿದ್ದಾರೆ. ಮತ್ತೆ ಕೆಲವರಿಗೆ ವರ್ಕ್ ಫ್ರಂ ಹೋಮ್ ಕಾರಣದಿಂದಾಗಿ ಕೆಲಸದ ಹೊರೆ ಹೆಚ್ಚಾಗ್ತಿದೆ. ಹಾಗಾಗಿ ನಿದ್ದೆಯನ್ನು 5 ಗಂಟೆಗೆ ಇಳಿಸಿದ್ದಾರೆ. ನಿದ್ದೆ ಕಡಿಮೆಯಾದರೂ ಸಮಸ್ಯೆಯಾಗುತ್ತದೆ. ನಿದ್ದೆ ಹೆಚ್ಚಾದರೂ ಸಮಸ್ಯೆಯಾಗುತ್ತದೆ. ಹಾಗಾಗಿ ಪ್ರತಿ ದಿನ 6-7 ಗಂಟೆ ನಿದ್ರೆ ಮಾಡುವುದನ್ನು ರೂಢಿಸಿಕೊಳ್ಳಿ.

Tap to resize

Latest Videos

undefined

ಮನೆಯಿಂದ ಕೆಲಸ ಮಾಡುವ ಜನರು ನಿರಂತರವಾಗಿ ಕುಳಿತುಕೊಂಡಿರುತ್ತಾರೆ. ಇದು ತೂಕ ವೇಗವಾಗಿ ಹೆಚ್ಚಾಗಲು ಕಾರಣವಾಗ್ತಿದೆ. ತೂಕವನ್ನು ನಿಯಂತ್ರಣದಲ್ಲಿಡಲು ನೀವು ಆಗಾಗ ಓಡಾಡುವುದು ಬಹಳ ಮುಖ್ಯ. ಕೆಲಸಕ್ಕೆ ಸ್ವಲ್ಪ ಬ್ರೇಕ್ ನೀಡಿ,ದೇಹವನ್ನು ಸ್ಟ್ರೆಚ್ ಮಾಡ್ಬೇಕು. 

ಮನೆಯಿಂದ ಕೆಲಸ ಮಾಡುವಾಗ ಒತ್ತಡ ಹೆಚ್ಚಾದರೂ, ನಿಮ್ಮ ತೂಕ ಹೆಚ್ಚಾಗಬಹುದು. ಹೆಚ್ಚಿದ ಒತ್ತಡದಿಂದಾಗಿ, ದೇಹದಲ್ಲಿ ಹೆಚ್ಚಿನ ಕಾರ್ಟಿಸೋಲ್ ರೂಪುಗೊಳ್ಳಲು ಪ್ರಾರಂಭಿಸುತ್ತದೆ. ಇದರಿಂದಾಗಿ ಕೊಬ್ಬಿನ ಕೋಶಗಳು ಸಂಗ್ರಹಗೊಳ್ಳುತ್ತವೆ. ಆದ್ದರಿಂದ ನೀವು ಒತ್ತಡದಿಂದ ಮುಕ್ತವಾಗಿರಲು ಯೋಗ ಅಥವಾ ಧ್ಯಾನ ಮಾಡಬೇಕಾಗುತ್ತದೆ.

ತೂಕ ಇಳಿಸಿಕೊಳ್ಳಲು ಹೀಗೆ ಮಾಡಿ:
ವ್ಯಾಯಾಮ :
ತೂಕ ಇಳಿಸಿಕೊಳ್ಳಲು ನಿಯಮಿತವಾಗಿ ವ್ಯಾಯಾಮ ಮಾಡಬೇಕು. ಜುಂಬಾ,ಸೈಕ್ಲಿಂಗ್, ಏರೋಬಿಕ್ಸ್ ಸಹಾಯದಿಂದ ತೂಕ ಇಳಿಸಿಕೊಳ್ಳಬಹುದು. ವಾಕಿಂಗ್ ಉತ್ತಮ ಆರೋಗ್ಯ ನೀಡಿ,ತೂಕ ಕಡಿಮೆ ಮಾಡುತ್ತದೆ. ಚಯಾಪಚಯ ದರವನ್ನು ಹೆಚ್ಚಿಸುತ್ತದೆ.\ ಏರೋಬಿಕ್ಸ್ ಮಾಡುವುದರಿಂದ ಕ್ಯಾಲೊರಿ ಕಡಿಮೆಯಾಗುತ್ತದೆ. 

Health Resolutions 2022: ಆರೋಗ್ಯಕರವಾಗಿ ತೂಕ ಇಳಿಸಲು ಈ ದಿನಚರಿ ಪಾಲಿಸಿ

ಆಯುರ್ವೇದ ವಿಧಾನ : ಆಯುರ್ವೇದದ ಮೂಲಕವೂ ನೀವು ತೂಕ ಇಳಿಸಿಕೊಳ್ಳಲು ಯತ್ನಿಸಿ. ತೂಕ ಕಡಿಮೆ ಮಾಡಲು ಚಳಿಗಾಲದಲ್ಲಿ ಮೆಂತ್ಯವನ್ನು ಸೇವಿಸಬೇಕು. ಖಾಲಿ ಹೊಟ್ಟೆಯಲ್ಲಿ ಮೆಂತ್ಯದ ಪುಡಿಯನ್ನು ನೀರಿನೊಂದಿಗೆ ಸೇವಿಸಿದರೆ, ತೂಕವನ್ನು ಕಡಿಮೆ ಮಾಡಬಹುದು. ಇದನ್ನು ಅನುಸರಿಸುವ ಮೊದಲು ವೈದ್ಯರ ಸಲಹೆ ಪಡೆಯಿರಿ. ತ್ರಿಫಲ ಕೂಡ ತೂಕ ಇಳಿಸಿಕೊಳ್ಳಲು ನೆರವಾಗುತ್ತದೆ.ರಾತ್ರಿಯ ಊಟಕ್ಕೆ 2 ಗಂಟೆಗಳ ಮೊದಲು ಅಥವಾ ಬೆಳಗಿನ ಉಪಾಹಾರಕ್ಕೆ ಮೊದಲು ನೀವು ಉಗುರು ಬೆಚ್ಚಗಿನ ನೀರಿನಲ್ಲಿ ತ್ರಿಫಲ ಪುಡಿಯನ್ನು ಸೇವಿಸಿದರೆ ಹೊಟ್ಟೆಯಲ್ಲಿರುವ ಕೊಬ್ಬು ಕಡಿಮೆಯಾಗುತ್ತದೆ.  

Honey To Belly Button : ಪ್ರತಿದಿನ ನಾಭಿಗೆ ಜೇನುತುಪ್ಪ ಹಚ್ಚಿದ್ರೆ ಹಲವು ಪ್ರಯೋಜನ

ನೀರು : ತೂಕವನ್ನು ಕಡಿಮೆ ಮಾಡಲು ನೈಸರ್ಗಿಕ ವಿಧಾನ ಬಳಸಿ.  ನೀರು ಬೊಜ್ಜನ್ನು ಕಡಿಮೆ ಮಾಡುತ್ತದೆ. ಮನೆಯಲ್ಲೇ ಇದ್ದರೂ ಅನೇಕರು ನೀರು ಸೇವನೆ ಮಾಡುವುದಿಲ್ಲ. ಆದ್ರೆ ಪ್ರತಿ ದಿನ 7-8 ಗ್ಲಾಸ್ ನೀರು ಸೇವನೆ ಮಾಡಬೇಕು.  
ಈ ಆಹಾರದಿಂದ ದೂರವಿರಿ : ಮನೆಯಲ್ಲಿದ್ದಾಗ ಬಾಯಿ ಚಪಲ ಹೆಚ್ಚು. ಜನರು ಕೆಲಸ ಮಾಡ್ತಾ ಆಹಾರ ಸೇವನೆ ಮಾಡ್ತಾರೆ. ಅದರಲ್ಲೂ ಆಯಿಲ್ ಫುಡ್,ಫಾಸ್ಟ್ ಫುಡ್ ಸೇವನೆ ಮಾಡ್ತಾರೆ. ಇದ್ರಿಂದ ತೂಕ ಹೆಚ್ಚಾಗುತ್ತದೆ. ಹಾಗಾಗಿ ಈ ಆಹಾರದಿಂದ ದೂರವಿರಬೇಕು.

click me!