ಪರೀಕ್ಷಾ ಸಮಯದಲ್ಲಿ ನಿದ್ರೆ ತಪ್ಪಿಸಲು ವಿದ್ಯಾರ್ಥಿಗಳಿಂದ 40 ಗಂಟೆ ನಿದ್ರೆ ಬಾರದ, ಉಗ್ರರು ಸೇವಿಸುವ ಮಾತ್ರೆ ಬಳಕೆ!

By Kannadaprabha News  |  First Published Feb 19, 2024, 7:37 AM IST

ಮಾರ್ಚ್ ಏಪ್ರಿಲ್ ಬಂತೆದರೆ ಸಾಕು ಪರೀಕ್ಷೆಗಳು ಶುರುವಾಗುತ್ತವೆ. ಪರೀಕ್ಷಾ ಒತ್ತಡದಿಂದ ವಿದ್ಯಾರ್ಥಿಗಳು ಇಲ್ಲದ ತಲ್ಲಣ ಅನುಭವಿಸುತ್ತಾರೆ. ಪರೀಕ್ಷಾ ಸಮಯದಲ್ಲಿ ನಿದ್ದೆಗೆಟ್ಟು ಓದುವ ಸಲುವಾಗಿ ಏನೇನೋ ಮಾಡುತ್ತಾರೆ. ಆದರೆ ಉತ್ತರಪ್ರದೇಶದಲ್ಲಿ ವಿದ್ಯಾರ್ಥಿಗಳು ಪರೀಕ್ಷಾ ಒತ್ತಡ ತಪ್ಪಿಸಲು ಏನ್ ಮಾಡ್ತಿದ್ದಾರೆ  ಅಂತ ತಿಳಿದರೆ ಶಾಕ್ ಆಗೋದು ಗ್ಯಾರಂಟಿ.


ಲಖನೌ: ಮಾರ್ಚ್ ಏಪ್ರಿಲ್ ಬಂತೆದರೆ ಸಾಕು ಪರೀಕ್ಷೆಗಳು ಶುರುವಾಗುತ್ತವೆ. ಪರೀಕ್ಷಾ ಒತ್ತಡದಿಂದ ವಿದ್ಯಾರ್ಥಿಗಳು ಇಲ್ಲದ ತಲ್ಲಣ ಅನುಭವಿಸುತ್ತಾರೆ. ಪರೀಕ್ಷಾ ಸಮಯದಲ್ಲಿ ನಿದ್ದೆಗೆಟ್ಟು ಓದುವ ಸಲುವಾಗಿ ಏನೇನೋ ಮಾಡುತ್ತಾರೆ. ಆದರೆ ಉತ್ತರಪ್ರದೇಶದಲ್ಲಿ ವಿದ್ಯಾರ್ಥಿಗಳು ಪರೀಕ್ಷಾ ಒತ್ತಡ ತಪ್ಪಿಸಲು ಏನ್ ಮಾಡ್ತಿದ್ದಾರೆ  ಅಂತ ತಿಳಿದರೆ ಶಾಕ್ ಆಗೋದು ಗ್ಯಾರಂಟಿ.

ಪರೀಕ್ಷೆಯ ಸಮಯದಲ್ಲಿ ನಿದ್ರೆಗೆ ಜಾರುವುದನ್ನು ತಪ್ಪಿಸಲು ವಿದ್ಯಾರ್ಥಿಗಳು, ಉಗ್ರರು ಸೇವಿಸುವ ಮಾತ್ರೆಗಳನ್ನು ಸೇವಿಸುತ್ತಿರುವ ಕಳವಳಕಾರಿ ಅಂಶ ಬೆಳಕಿಗೆ ಬಂದಿದೆ. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ವೈದ್ಯರು ಆತಂಕ ವ್ಯಕ್ತಪಡಿಸಿದ್ದು, ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. 10ನೇ ತರಗತಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ಉತ್ತರ ಪ್ರದೇಶದ ಪ್ರಜಕ್ತಾ ಸ್ವರೂಪ್‌ ಎಂಬ ವಿದ್ಯಾರ್ಥಿನಿ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದು, ಆಕೆ ರಾತ್ರಿಯಿಡಿ ಎಚ್ಚರವಾಗಿರಲು ಈ ಮಾತ್ರೆಗಳನ್ನು ಸೇವಿಸುತ್ತಿದ್ದಳು ಎಂಬುದನ್ನು ವೈದ್ಯರು ಪತ್ತೆ ಹಚ್ಚಿದ್ದಾರೆ.

Tap to resize

Latest Videos

undefined

ಏನಿದು ನಿದ್ರೆ ತಡೆಯುವ ಮಾತ್ರೆ:

ದೇಹದಲ್ಲಿ ಚೈತನ್ಯವನ್ನು ಮೂಡಿಸುವ ಮೋಡಾಫಿನಿಲ್‌ ರಾಸಾಯನಿಕದ ಮತ್ತೊಂದು ಸಂಯೋಜನೆಯನ್ನು ಹೊಂದಿರುವ ಮಾತ್ರೆ ಇದಾಗಿದ್ದು, ಒಮ್ಮೆ ಇದನ್ನು ಸೇವಿಸಿದರೆ ಸುಮಾರು 40 ಗಂಟೆಗಳ ಕಾಲ ನಿದ್ರೆಯಿಂದ ತಪ್ಪಿಸಿಕೊಳ್ಳಬಹುದಾಗಿದೆ.

ನೀಟ್ ದುರಂತ: ಮಗನ ಆಗಲಿಕೆ ಸಹಿಸಲಾಗದೇ ಅಪ್ಪನೂ ಸಾವಿಗೆ ಶರಣು

ದೀರ್ಘಕಾಲದ ಕಾರ್ಯಾಚರಣೆಗಳನ್ನು ಕೈಗೊಳ್ಳುವ ಉಗ್ರರು ನಿದ್ರೆ ಬಾಧಿಸದಿರಲಿ ಎಂಬ ಕಾರಣಕ್ಕೆ ಈ ಮಾತ್ರೆಗಳನ್ನು ಸೇವಿಸುತ್ತಾರೆ. ಈ ಸಂಯೋಜನೆ ಹೊಂದಿರುವ ಮಾತ್ರೆಗಳು ಮಾರುಕಟ್ಟೆಯಲ್ಲಿ ಲಭ್ಯವಿರದಿದ್ದರೂ ಸಹ ಕಳ್ಳ ಮಾರ್ಗದಲ್ಲಿ ಈ ಮಾತ್ರೆಗಳನ್ನು ಸಾಗಿಸಲಾಗುತ್ತದೆ. 26/11ರ ಮುಂಬೈ ದಾಳಿಯಲ್ಲಿ ಭಾಗಿಯಾಗಿದ್ದ ಉಗ್ರರ ಬ್ಯಾಗಿನಲ್ಲಿ ಈ ಮಾತ್ರೆ ಮೊದಲ ಬಾರಿ ಪತ್ತೆಯಾಗಿತ್ತು ಎಂದು ತಜ್ಞ ಡಾ.ಆರ್‌.ಕೆ. ಸಕ್ಸೇನಾ ಹೇಳಿದ್ದಾರೆ.

ಈ ಮಾತ್ರೆಗಳನ್ನು ವಿದ್ಯಾರ್ಥಿಗಳು ಸೇವನೆ ಮಾಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇವುಗಳ ಅತಿಯಾದ ಬಳಕೆಯಿಂದ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟುವಂತಹ ಸಮಸ್ಯೆಗಳಿಗೆ ವಿದ್ಯಾರ್ಥಿಗಳು ತುತ್ತಾಗಲಿದ್ದಾರೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಬೇಸಿಗೆಯ ಅಗ್ನಿ ಪರೀಕ್ಷೆ... ಮಕ್ಕಳ ಒತ್ತಡ ನಿವಾರಿಸುವುದು ಹೇಗೆ..?

click me!