ಸ್ವಚ್ಛ ಭಾರತದಿಂದಾಗಿ ಕಲುಷಿತ ಅಂತರ್ಜಲ ಪ್ರಮಾಣ ಕಡಿಮೆ: ಯುನಿಸೆಫ್

By Web DeskFirst Published Jun 7, 2019, 6:35 PM IST
Highlights

ಸ್ವಚ್ಛ ಭಾರತ ಅಭಿಯಾನಕ್ಕೆ ಯುನಿಸೆಫ್‌ ಮೆಚ್ಚುಗೆ| ‘ಸ್ವಚ್ಛ ಭಾರತದಿಂದಾಗಿ ಕಲುಷಿತ ಅಂತರ್ಜಲ ಪ್ರಮಾಣ ಕಡಿಮೆ’| ಪ್ರಧಾನಿ ಮೋದಿ ಕನಸಿನ ಯೋಜನೆ ಹೊಗಳಿದ ಯುನಿಸೆಫ್| ಸ್ವಚ್ಛ ಭಾರತ ಅಭಿಯಾನದಿಂದಾಗಿ ಮಲೀನ ಪ್ರಮಾಣದಲ್ಲಿ ಗಣನೀಯ ಇಳಿಕೆ|

ನವದೆಹಲಿ(ಜೂ.07): ಪ್ರಧಾನಿ ನರೇಂದ್ರ ಮೋದಿ ಕನಸಿನ ‘ಸ್ವಚ್ಛ ಭಾರತ ಅಭಿಯಾನ’ವನ್ನು ಹಲವರು ಪ್ರಶ್ನಿಸಿದ್ದುಂಟು. ಸ್ವಚ್ಛ ಭಾರತ ಅಭಿಯಾನದಿಂದ ಮೋದಿ ಸಾಧಿಸಿದ್ದೇನು ಎಂದು ಪ್ರಶ್ನೆ ಕೇಳಿದವರಿಗೆಲ್ಲಾ ಖುದ್ದು ಯುನಿಸೆಫ್ ಉತ್ತರ ನೀಡಿದೆ.

ಸ್ವಚ್ಛ ಭಾರತ ಅಭಿಯಾನವನ್ನು ಮೆಚ್ಚಿಕೊಂಡಿರುವ ಯುನಿಸೆಫ್‌, ಈ ಅಭಿಯಾನದಿಂದ ಅಂತರ್ಜಲ ಮಾಲಿನ್ಯವಾಗುವ ಪ್ರಮಾಣ ಕಡಿಮೆಯಾಗಿದೆ ಎಂದು ತಿಳಿಸಿದೆ. ಯುನಿಸೆಫ್‌ ತಂಡವೊಂದು ನಡೆಸಿದ ಅಧ್ಯಯನದ ಪ್ರಕಾರ, ಅಂತರ್ಜಲ ಮಾಲಿನ್ಯದ ಪ್ರಮಾಣವನ್ನು ಸ್ವಚ್ಛ ಭಾರತ ಅಭಿಯಾನ ಕಡಿಮೆ ಮಾಡಿದೆ ಎನ್ನಲಾಗಿದೆ.

ಬಯಲು ಶೌಚ ಮುಕ್ತ ಹಳ್ಳಿಗಳಿಗೆ ಹೋಲಿಸಿದರೆ, ಬಯಲು ಶೌಚ ವ್ಯವಸ್ಥೆ ಇರುವ ಹಳ್ಳಿಗಳಲ್ಲಿ ಅಂತರ್ಜಲವನ್ನು ಮಲೀನವಾಗುವ ಪ್ರಮಾಣ ಶೇ.11.25ರಷ್ಟು. ಮಣ್ಣನ್ನು ಮಲೀನ ಮಾಡುವ ಪ್ರಮಾಣ 1.13ರಷ್ಟು.

ಅದರಂತೆ ಆಹಾರ ಪದಾರ್ಥಗಳನ್ನು ಮಲೀನ ಮಾಡುವ ಪ್ರಮಾಣ ಶೇ. 1.48ರಷ್ಟು. ಅಲ್ಲದೇ ಕುಡಿಯುವ ನೀರನ್ನು ಮಲೀನ ಮಾಡುವ ಪ್ರಮಾಣ ಶೇ.2.68ರಷ್ಟು ಹೆಚ್ಚಿದೆ. ಸ್ವಚ್ಛ ಭಾರತ ಅಭಿಯಾನದ ಬಳಿಕ ಈ ಮಲೀನ ಪ್ರಮಾಣದಲ್ಲಿ ಕಡಿತಗೊಂಡಿದೆ ಎಂದು ಯುನಿಸೆಫ್‌ ವರದಿ ಸ್ಪಷ್ಟಪಡಿಸಿದೆ.

click me!