ಖುಷಿಯಾಗಿರುವ ವಿಚಾರದಲ್ಲಿ ಭಾರತೀಯರಿಗಿಂತ ಪಾಕಿಸ್ತಾನಿಯರೇ ವಾಸಿ!

By Web DeskFirst Published May 12, 2019, 2:01 PM IST
Highlights

ಭಾರತೀಯರು ಜಗತ್ತಿನಲ್ಲೇ ಅತ್ಯಂತ ದುಃಖಿಗಳು! ಜಗತ್ತಿನ ಸಂತುಷ್ಟ ದೇಶಗಳ ರ್ಯಾಂಕಿಂಗ್ ಪ್ರಕಟ | ನಮ್ಮ ದೇಶಕ್ಕೆ 156ರಲ್ಲಿ 140ನೇ ಸ್ಥಾನ!

ಜಗತ್ತಿನ ಹ್ಯಾಪಿನೆಸ್‌ ಇಂಡೆಕ್ಸ್‌ ಬಿಡುಗಡೆಯಾಗಿದೆ. ಜಗತ್ತು ಎಷ್ಟುನೆಮ್ಮದಿಯಿಂದಿದೆ ಎಂಬುದನ್ನು ಹೇಳಲು ವಿಶ್ವಸಂಸ್ಥೆಯೇ ಕೆಲ ಮಾನದಂಡಗಳನ್ನಿಟ್ಟುಕೊಂಡು ತನ್ನ ಸದಸ್ಯ ರಾಷ್ಟ್ರಗಳ ಸಮೀಕ್ಷೆ ನಡೆಸಿ 2012ರಿಂದ ಈ ಪಟ್ಟಿಬಿಡುಗಡೆ ಮಾಡುತ್ತಾ ಬಂದಿದೆ.

ಈಗ ಬಿಡುಗಡೆಯಾಗಿರುವುದು 2019ರ ರಾರ‍ಯಂಕಿಂಗ್‌ ಪಟ್ಟಿ. ಯಾವ ದೇಶ ಎಷ್ಟುಖುಷಿಯಾಗಿದೆ ಎಂಬುದನ್ನು ಇದು ಸೂಚಿಸುತ್ತದೆ. ಒಟ್ಟು 156 ದೇಶಗಳನ್ನು ಸಮೀಕ್ಷಿಸಿ ಸಂತೋಷದ ರಾರ‍ಯಂಕಿಂಗ್‌ ನೀಡಲಾಗಿದೆ.

ಭಾರತಕ್ಕಿಂತ ಪಾಕಿಸ್ತಾನವೇ ಖುಷಿಯಾಗಿದೆ!

ಹ್ಯಾಪಿನೆಸ್‌ ಇಂಡೆಕ್ಸ್‌ನ ಮಾನದಂಡದ ಪ್ರಕಾರ ಭಾರತಕ್ಕೆ 10ರಲ್ಲಿ 4 ಅಂಕ ಸಿಕ್ಕಿದ್ದರೆ, ಪಾಕಿಸ್ತಾನಕ್ಕೆ 5.7 ಅಂಕ ದೊರೆತಿದೆ. ಹೀಗಾಗಿ ಭಾರತ 140ನೇ ಸ್ಥಾನದಲ್ಲಿದ್ದರೆ, ಪಾಕಿಸ್ತಾನ 67ನೇ ಸ್ಥಾನದಲ್ಲಿದೆ. ಸದಾ ಅಶಾಂತಿ, ಬಡತನ ಇತ್ಯಾದಿಗಳಿದ್ದರೂ ಭಾರತೀಯರಿಗಿಂತ ಪಾಕಿಸ್ತಾನೀಯರೇ ಖುಷಿಯಾಗಿದ್ದಾರಂತೆ.

ನಮಗಿಂತ ದುಃಖಿತರು ಯಾರು?

ಭಾರತೀಯರಿಗಿಂತ ದುಃಖಿತರು ಜಗತ್ತಿನಲ್ಲಿ ಬಹಳ ಕಡಿಮೆಯಿದ್ದಾರೆ. ಲೈಬೀರಿಯಾ, ಕೊಮೋರಸ್‌, ಮಡಗಾಸ್ಕರ್‌, ಲೆಸೋತೋ, ಬುರುಂಡಿ, ಜಿಂಬಾಬ್ವೆ, ಹೈಟಿ, ಬೋತ್ಸಾ$್ವನಾ, ಸಿರಿಯಾ, ಮಾಲವಿ, ಯಮನ್‌, ರ್ವಾಂಡಾ, ತಾಂಜೇನಿಯಾ, ಅಷ್ಘಾನಿಸ್ತಾನ, ಸೆಂಟ್ರಲ್‌ ಆಫ್ರಿಕನ್‌ ರಿಪಬ್ಲಿಕ್‌ ಹಾಗೂ ಸೌತ್‌ ಸುಡಾನ್‌ ಮಾತ್ರ ಜಾಗತಿಕ ಹ್ಯಾಪಿನೆಸ್‌ ಇಂಡೆಕ್ಸ್‌ನಲ್ಲಿ ಭಾರತಕ್ಕಿಂತ ಕಳಪೆ ಸ್ಥಾನದಲ್ಲಿವೆ.

ಅಮೆರಿಕ ಎಷ್ಟು ಖುಷಿಯಾಗಿದೆ?

ಉತ್ತರ ಅಮೆರಿಕ ಖಂಡದಲ್ಲಿ ಅತ್ಯಂತ ಖುಷಿಯ ದೇಶ ಕೆನಡಾ. ಅತ್ಯಂತ ಕಡಿಮೆ ಸಂತುಷ್ಟದೇಶ ಹೈಟಿ. ಇದೇ ಖಂಡದ ಅಮೆರಿಕವು ಸಂತುಷ್ಟಿಯಲ್ಲಿ ಜಗತ್ತಿನಲ್ಲೇ 19ನೇ ರಾರ‍ಯಂಕ್‌ ಪಡೆದಿದೆ. ಅಮೆರಿಕಕ್ಕೆ 10ರಲ್ಲಿ 6.9 ಅಂಕ ದೊರೆತಿದೆ.

ಸಮೀಕ್ಷೆ ನಡೆಸಿದ್ದು ಹೇಗೆ?

ದೇಶದ ಆರ್ಥಿಕ ಪ್ರಗತಿ, ಜನರ ತಲಾದಾಯ, ನೆಮ್ಮದಿ, ಸಾಮಾಜಿಕ ಭದ್ರತೆ, ಸುರಕ್ಷತೆ, ಮನಸ್ಥಿತಿ ಇತ್ಯಾದಿಗಳನ್ನು ಆಧರಿಸಿ ಸಮೀಕ್ಷೆ ನಡೆಸಲಾಗಿದೆ.

ಟಾಪ್‌ 10 ಖುಷಿಯ ದೇಶಗಳು

1. ಫಿನ್‌ಲೆಂಡ್‌

2. ಡೆನ್ಮಾರ್ಕ್

3. ನಾರ್ವೆ

4. ಐಸ್‌ಲ್ಯಾಂಡ್‌

5. ನೆದರ್‌ಲೆಂಡ್‌

6. ಸ್ವಿಜರ್‌ಲೆಂಡ್‌

7. ಸ್ವೀಡನ್‌

8. ನ್ಯೂಜಿಲೆಂಡ್‌

9. ಕೆನಡಾ

10. ಆಸ್ಟ್ರಿಯಾ

ಟಾಪ್‌ 5 ದುಃಖಿತ ದೇಶಗಳು

1. ಸೌತ್‌ ಸುಡಾನ್‌

2. ಸೆಂಟ್ರಲ್‌ ಆಫ್ರಿಕನ್‌ ರಿಪಬ್ಲಿಕ್‌

3. ಅಷ್ಘಾನಿಸ್ತಾನ

4. ತಾಂಜೇನಿಯಾ

5. ರ್ವಾಂಡಾ

ಯಾವ ದೇಶ ಎಷ್ಟು ಸಂತುಷ್ಟ?

ಫಿನ್‌ಲೆಂಡ್‌ ನಂ.1

ಸ್ವಿಜರ್‌ಲೆಂಡ್‌ ನಂ.6

ಕೆನಡಾ ನಂ.9

ಆಸ್ಪ್ರೇಲಿಯಾ ನಂ.11

ಇಸ್ರೇಲ್‌ ನಂ.13

ಬ್ರಿಟನ್‌ ನಂ.15

ಜರ್ಮನಿ ನಂ.17

ಅಮೆರಿಕ ನಂ.19

ಫ್ರಾನ್ಸ್‌ ನಂ.24

ಸಿಂಗಾಪುರ ನಂ.34

ಇಟಲಿ ನಂ.36

ದಕ್ಷಿಣ ಕೊರಿಯಾ ನಂ.54

ಜಪಾನ್‌ ನಂ.58

ಪಾಕಿಸ್ತಾನ ನಂ.67

ರಷ್ಯಾ ನಂ.68

ಚೀನಾ ನಂ.93

ಭೂತಾನ್‌ ನಂ.95

ನೇಪಾಳ ನಂ.100

ದಕ್ಷಿಣ ಆಫ್ರಿಕಾ ನಂ.106

ಸೋಮಾಲಿಯಾ ನಂ.112

ಬಾಂಗ್ಲಾದೇಶ ನಂ.125

ಇರಾಕ್‌ ನಂ.126

ಶ್ರೀಲಂಕಾ ನಂ.130

ಭಾರತ ನಂ.140

ಅಷ್ಘಾನಿಸ್ತಾನ ನಂ.154

ದಕ್ಷಿಣ ಸುಡಾನ್‌ ನಂ.156

click me!