ಯಾವುದೇ ಸಮಯದಲ್ಲಿ ಮತ್ತೊಂದು ಸಾಂಕ್ರಾಮಿಕ ರೋಗ ಸ್ಫೋಟ, ತಜ್ಞರ ಎಚ್ಚರಿಕೆ!

By Suvarna NewsFirst Published Mar 24, 2024, 10:57 PM IST
Highlights

ಕೊರೋನಾ ವಕ್ಕರಿಸಿ ನಾಲ್ಕು ವರ್ಷಗಳು ಉರುಳಿದೆ. ಇದೀಗ ಕೋವಿಡ್ ಸಂಕಷ್ಟದಿಂದ ಜನರು ನಿಧಾನವಾಗಿ ಹೊರಬಂದಿದ್ದಾರೆ. ಇತ್ತ ಕೋವಿಡ್ ವೈರಸ್‌‌ನ್ನು ಮರೆಯುತ್ತಿದ್ದಾರೆ. ಇದರ ನಡುವೆ ತಜ್ಞರು ನೀಡಿದ ಎಚ್ಚರಿಕೆ ಬೆಚ್ಚಿ ಬೀಳಿಸುವಂತಿದೆ. ಯಾವುದೇ ಸಮಯದಲ್ಲಿ ಮತ್ತೊಂದು ಸಾಂಕ್ರಾಮಿಕ ರೋಗ ಸ್ಫೋಟಗೊಳ್ಳುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.
 

ಲಂಡನ್(ಮಾ.24) ಕೋವಿಡ್ ಸಾಂಕ್ರಾಮಿಕ ರೋಗ ಸ್ಫೋಟಗೊಂಡು ಇದೀಗ 4 ವರ್ಷಗಳು ಉರುಳಿದೆ. ಇದರ ನಡುವೆ ಹಲವು ಲಾಕ್‌ಡೌನ್, ಸಾವು ನೋವು ಜಗತ್ತನ್ನೇ ತಲ್ಲಣಗೊಳಿಸಿತು. ಸದ್ಯ ಕೋವಿಡ್ ನಿಯಂತ್ರಣದಲ್ಲಿದ್ದರೂ ಅದರ ಪರಿಣಾಮ ಮಾತ್ರ ದಿನದಿಂದ ದಿನಕ್ಕೆ ತಟ್ಟುತಲ್ಲೇ ಇದೆ. ಕೋವಿಡ್ ವೈರಸ್ ಆತಂಕ ದೂರವಾಗಿದೆ. ಭಾರತ ಸೇರಿದಂತೆ ಎಲ್ಲಾ ದೇಶಗಳು ಕೋವಿಡ್ ನಿಯಂತ್ರಿಸು ಮುಂದೆ ಸಾಗುತ್ತಿದೆ. ಇದರ ಬೆನ್ನಲ್ಲೇ ತಜ್ಞರು ಮಹತ್ವದ ಎಚ್ಚರಿಕೆ ನೀಡಿದ್ದಾರೆ. ಯಾವುದೇ ಸಮಯದಲ್ಲಿ ಮತ್ತೊಂದು ಸಾಂಕ್ರಾಮಿಕ ರೋಗ ಸ್ಫೋಟಗೊಳ್ಳುವ ಸಾಧ್ಯತೆ ಇದೆ ಎಂದಿದ್ದಾರೆ.

ಯುನೈಟೆಡ್ ಕಿಂಗ್ಡಮ್ ತಜ್ಞರು ಈ ಎಚ್ಚರಿಕೆ ನೀಡಿದ್ದಾರೆ. ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ವೈರಸ್ ಒಂದು ವಿಶ್ವದಲ್ಲಿ ಮತ್ತೊಂದು ಸಾಂಕ್ರಾಮಿಕ ರೋಗವನ್ನು ಹರಡುವ ಸಾಧ್ಯತೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸ್ಕೈ ನ್ಯೂಸ್ ವರದಿ ಮಾಡಿದೆ.  ಮತ್ತೊಂದು ಸಾಂಕ್ರಾಮಿಕ ರೋಗ ಹತ್ತಿರದಲ್ಲೇ ಇದೆ. ಇದು ಈಗಲೇ ಅಪ್ಪಳಿಸಬಹುದು, 2 ವರ್ಷದಲ್ಲಿ ಸ್ಫೋಟಗೊಳ್ಳಬಹುದು. ಅಥವಾ 20 ವರ್ಷ ತೆಗೆದುಕೊಳ್ಳಬಹುದು. ಆದರೆ ಸಾಂಕ್ರಾಮಿಕ ರೋಗದ ಸ್ಫೋಟದ ಆತಂಕ ಹೆಚ್ಚಿದೆ ಎಂದು ಲಂಡನ್ ಕಿಂಗ್ಸ್ ಕಾಲೇಜಿನ ಸಾಂಕ್ರಾಮಿಕ ರೋಗಗಳ ಕ್ಲಿನಿಕಲ್ ಉಪನ್ಯಾಸಕಿ ಡಾ.ನಥಲಿ ಮ್ಯಾಕ್‌ಡರ್ಮೊಟ್ ಹೇಳಿದ್ದಾರೆ.

 

 

ಜಗತ್ತಿಗೆ ಹರಡುತ್ತಾ ಮತ್ತೊಂದು ಸಾಂಕ್ರಾಮಿಕ? ಈ ಪ್ರಾಣಿಯ ಮಾಂಸ ತಿಂದ್ರೆ ಹುಷಾರ್! ವಿಜ್ಞಾನಿಗಳ ಎಚ್ಚರಿಕೆ

ಯಾವುದೇ ಸಮಯದಲ್ಲಿ ಈ ಸಾಂಕ್ರಾಮಿಕ ರೋಗ ಸ್ಫೋಟಗೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಎಚ್ಚರಿಕೆಯಿಂದ ಇರಬೇಕು. ಸಾಂಕ್ರಾಮಿಕ ರೋಗದ ಕುರಿತು ಜಾಗರೂಕರಾಗಿರಬೇಕು, ಜೊತೆಗೆ ತ್ಯಾಗಕ್ಕೂ ಸಿದ್ದರಾಗಿರಬೇಕು. ಮತ್ತೊಮ್ಮೆ ಸಾಂಕ್ರಾಮಿಕ ಅಪ್ಪಳಿಸಿದಾಗ ಸವಾಲುಗಳನ್ನು ಎದುರಿಸಲು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಡಾ.ನಥಲಿ ಮ್ಯಾಕ್‌ಡರ್ಮೊಟ್ ಹೇಳಿದ್ದಾರೆ.  

ಹೆಚ್ಚಾಗುತ್ತಿರುವ ಜಾಗತಿಕ ತಾಪಮಾನ, ಅರಣ್ಯ ನಾಶ, ಹಸಿರು ಕೊರತೆಯಿಂದ ವೈರಸ್‌ಗಳು ಸುಲಭವಾಗಿ ಪ್ರಾಣಿಗಳಿಂದ ಮನುಷ್ಯರಿಗೆ ಹರಡು ಅಪಾಯವಿದೆ. ಅಮೆಜಾನ್ ಹಾಗೂ ಆಫ್ರಿಕಾದ ಹಲವು ಭಾಗದಲ್ಲಿ ಮರಗಳನ್ನು ಕತ್ತರಿಸಲಾಗಿದೆ. ಇದೇ ರೀತಿ ಹಲವು ಕಾಡುಗಳ ಅಂಚಿನಲ್ಲಿ ಮರಗಳನ್ನು ಕತ್ತರಿಸಲಾಗುತ್ತಿದೆ. ಗ್ರಾಮಗಳು, ಜನವಸತಿ ಕಾಡಿನ ಹತ್ತಿರಕ್ಕೆ ಪ್ರವೇಶ ಪಡೆಯುತ್ತಿದೆ. ಇದರಿಂದ ಮನುಷ್ಯರು ಪ್ರಾಣಿಗಳು, ಕೀಟಗಳು ಆವಾಸಸ್ಥಾನಗಳಿಗೆ ಹತ್ತಿರವಾಗುತ್ತಿದ್ದಾರೆ. ಇದರಿಂದ ಪ್ರಾಣಿಗಳಿಂದ ವೈರಸ್ ನೇರವಾಗಿ ಮನುಷ್ಯನ ದೇಹ ಸೇರಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗುತ್ತಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಕಳೆದ ಕೆಲ ದಶಕಗಳಲ್ಲಿ ತಾಪಮಾನ ಪ್ರಮಾಣ ಏರಿಕೆಯಾಗಿದೆ. ಇದರಿಂದ ಸೊಳ್ಳೆ ಸೇರಿದಂತೆ ಇತರ ಕೀಟಗಳಿಂದ ಹರಡು ವೈರಸ್‌ಗಳಾದ ಡೆಂಗ್ಯೂ, ಚಿಕೂನ್‌ಗೂನ್ಯ, ಕ್ರಿಮಿಯನ್ ಕಾಂಗೋ ಹೆಮರಾಜಿಕ್ ಜ್ವರಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಈ ಜ್ವರಗಳು ಯೂರೋಪ್ ಭಾಗದಲ್ಲೇ ಈ ಹಿಂದೆ ಇರಲಿಲ್ಲ.  ಪರಿಸರದಲ್ಲಿ ಆಗುವ ಅಸಮತೋಲನ ನೇರವಾಗಿ ಪ್ರಾಣಿ ಸಂಕುಲಕ್ಕೆ ತಟ್ಟಲಿದೆ ಎಂದು ತಜ್ಞರು ಹೇಳಿದ್ದಾರೆ.

Breaking: ಮಂಕಿಪಾಕ್ಸ್‌ ಸೆಕ್ಸ್‌ನಿಂದಲೂ ಹರಡುತ್ತೆ ಎಂದ ವಿಶ್ವ ಆರೋಗ್ಯ ಸಂಸ್ಥೆ, ಭಾರತಕ್ಕೆ ಇದ್ಯಾ ಆತಂಕ?

ಪರಿಸರದಲ್ಲಿನ ಬದಲಾವಣೆಗಳಿಂದ ಕಾಲ ಕಾಲಕ್ಕೆ, ದಶಕಗಳು, ಶತಮಾನಗಳ ಹಿಂದೆಯೂ ಇದೇ ರೀತಿಯ ಸಾಂಕ್ರಾಮಿಕ ರೋಗಗಳು ಸ್ಪೋಟಗೊಂಡಿದೆ. ಕೋವಿಡ್ ರೀತಿಯ ವೈರಸ್ ಜೀವಮಾನದಲ್ಲಿ ಒಮ್ಮೆ ಬರುವು ಅಪಯಾಕಾರಿ ವೈರಸ್ ಎಂದೇ ಕರೆಯಲಾಗುತ್ತದೆ. ಇದಕ್ಕೂ ಮೊದಲು ನಾಲ್ಕು ದಶಗಳ ಹಿಂದೆಯೂ ಇದೇ ರೀತಿಯ ಸಾಂಕ್ರಾಮಿಕ ರೋಗ ಸ್ಫೋಟದಿಂದ ಸಾವು ನೋವು ಸಂಭವಿಸಿತ್ತು. ಈ ವೇಳೆ 6 ಮಿಲಿಯನ್ ಮಂದಿ ಮೃತಪಟ್ಟಿದ್ದರು. 1981ರಲ್ಲಿ ಸ್ಫೋಟಗೊಂಡ ಏಡ್ಸ್(ಹೆಚ್ಐವಿ) ರೋಗದಿಂದ 36 ಮಿಲಿಯನ್ ಸಾವು ಸಂಭವಿಸಿದೆ. 1968ರಲ್ಲಿ ಕಾಣಿಸಿಕೊಂಡ ಹಾಂಕ್‌ಕಾಂಗ್ ಜ್ವರದಿಂದ 1 ಮಿಲಿಯನ್ ಮಂದಿ ಮೃತಪಟ್ಟಿದ್ದಾರೆ. 1918ರಲ್ಲಿ ಸ್ಪಾನಿಷ್ ಜ್ವರದಿಂದ ಬರೋಬ್ಬರಿ 50 ಮಲಿಯನ್ ಮಂದಿ ಮೃತಪಟ್ಟಿದ್ದರು.  

click me!