ನೀರು ಕುಡಿಯೋದು ಕಷ್ಟನಾ? ಹಾಗಾದ್ರೆ ಈ ಟಿಪ್ಸ್‌ ಅನುಸರಿಸಿ

By Suvarna NewsFirst Published Dec 23, 2020, 4:10 PM IST
Highlights

ನೀರು ಜೀವಜಲ. ಆದ್ರೆ ಉಸಿರಿಗೆ ಹಸಿರು ನೀಡೋ ಈ ಜೀವಜಲ ಎಲ್ಲರಿಗೂ ಇಷ್ಟವೆಂದು ಹೇಳಲಾಗದು. ರುಚಿ,ವಾಸನೆರಹಿತ ನೀರು ಕುಡಿಯೋದು ಕೆಲವರಿಗೆ ಕಷ್ಟದ ಕೆಲಸ. ಒಣಗಿದ ಗಂಟಲನ್ನು ತೇವ ಮಾಡಿಕೊಳ್ಳಲಷ್ಟೆ ಒಂದು ಗುಟುಕು ನೀರು. ನಿಮ್ಗೂ ನೀರು ಕುಡಿಯೋದು ಕಷ್ಟದ ಕೆಲ್ಸವಾಗಿದ್ರೆ ಅದನ್ನು ಇಷ್ಟಮಾಡಿಕೊಳ್ಳೋ ದಾರಿಗಳು ಇಲ್ಲಿವೆ.

ನೀರು ಸರ್ವರೋಗಕ್ಕೂ ಮದ್ದು,ಆರೋಗ್ಯದ ಮಿತ್ರ ಅನ್ನೋದು ಗೊತ್ತಿರೋ ಸತ್ಯ.ನೀರು ಅದೆಷ್ಟೇ ಪ್ರಯೋಜನಕಾರಿಯಾಗಿದ್ರೂ ಎಲ್ಲರಿಗೂ ಅದರ ರುಚಿ ಹಿಡಿಸಲ್ಲ.ಕೆಲವರು ಆರೋಗ್ಯಕ್ಕೆ ಒಳ್ಳೆಯದು ಅನ್ನೋ ಕಾರಣಕ್ಕೆ ನೀರಿನ ರುಚಿ ಬಗ್ಗೆ ಚಕಾರವೆತ್ತದೆ ಕಣ್ಣುಮುಚ್ಚಿ ಗಂಟಲಿಗೆ ಸುರಿದುಕೊಂಡು ಬಿಡುತ್ತಾರೆ.ಇನ್ನೂಕೆಲವರು ಗಂಟಲು ಒಣಗಿ ದಾಹವನ್ನುಇನ್ನು ಸಹಿಸಿಕೊಳ್ಳೋದು ಅಸಾಧ್ಯವೆನಿಸೋ ಸಂದರ್ಭಗಳಲ್ಲಿ ಮಾತ್ರ ನೀರಿನ ರುಚಿ ಬಯಸುತ್ತಾರೆ.ಮತ್ತೆ ಕೆಲವರಿಗೆ ನೀರಂದ್ರೆ ಅಲರ್ಜಿ,ದಿನಕ್ಕೆ ಎಷ್ಟು ಸಾಧ್ಯವೋ ಅಷ್ಟು ಕಡಿಮೆ ನೀರು ಕುಡಿದು ಜೀವ ಉಳಿಸಿಕೊಳ್ಳೋ ಜನ ಇವರು.ನೀರಿನ ರುಚಿಯನ್ನು ಎಲ್ಲರೂ ಇಷ್ಟಪಡೋರಾಗಿದ್ರೆ ಕಾಫಿ,ಟೀ, ಜ್ಯೂಸ್‌ನಂತೆ ನಾಲಿಗೆ ಚಪ್ಪರಿಸಿಕೊಂಡು ರುಚಿಯನ್ನು ಎಂಜಾಯ್‌ ಮಾಡುತ್ತ ಕುಡಿಯಬೇಕಿತ್ತಲ್ವ? ಅದೇನೇ ಇರಲಿ,ನೀರು ಮಾತ್ರ ಆರೋಗ್ಯಕ್ಕೆ ಸಂಜೀವಿನಿ. ನೀವು ನೀರಿನ ರುಚಿಯನ್ನು ಇಷ್ಟಪಡಿ,ಬಿಡಿ.ಆದ್ರೆ ಈ ಭೂಮಿ ಮೇಲೆ ಬದುಕಬೇಕೆಂಬ ಆಸೆಯಿದ್ರೆ ನೀರು ಕುಡಿಯೋದು ಅನಿವಾರ್ಯ. ಕಾಯಿಲೆಗಳಿಂದ ದೂರವಿರಬೇಕು,ಆರೋಗ್ಯವಾಗಿರಬೇಕಂದ್ರೆ ದಿನಕ್ಕೆ ಕನಿಷ್ಠ 3-4 ಲೀಟರ್‌ ನೀರು ಕುಡಿಯೋದು ಅಗತ್ಯ.ಆದ್ರೆ ಅದೆಷ್ಟೇ ಪ್ರಯತ್ನಪಟ್ಟರೂ ದೇಹಕ್ಕೆ ಅಗತ್ಯವಿರುವಷ್ಟು ನೀರು ಕುಡಿಯಲು ನಿಮ್ಗೆ ಸಾಧ್ಯವಾಗುತ್ತಿಲ್ಲ ಎಂದಾದ್ರೆ ನಿಮ್ಮನಾಲಿಗೆಗೆ ನೀರು ರುಚಿಸುವಂತೆ ಮಾಡೋ ಟಿಪ್ಸ್‌ ಇಲ್ಲಿವೆ.

ಚರ್ಮದ ಸೋಂಕು ತಡೆಯಲು ಈ ಆಹಾರ ತಿನ್ನಿ

ಲಿಂಬೆ ನೀರು
ಲಿಂಬೆ ಹಣ್ಣಿನ ಪರಿಮಳವನ್ನುಇಷ್ಟಪಡದವರು ಯಾರಿದ್ದಾರೆ ಹೇಳಿ?ಬರೀ ನೀರು ಕುಡಿಯೋದು ಬೋರ್‌ ಅನಿಸಿದ್ರೆ ನೀರಿಗೆ ಸ್ವಲ್ಪ ಲಿಂಬೆ ರಸ ಸೇರಿಸಿ ಅದಕ್ಕೆ ಸ್ವಲ್ಪ ಉಪ್ಪು ಅಥವಾ ಬೆಲ್ಲ ಮಿಕ್ಸ್‌ ಮಾಡಿ ಕುಡಿಯಿರಿ. ಲಿಂಬೆ ಜ್ಯೂಸ್‌ಗೆ ಸಕ್ಕರೆ ಬೆರೆಸಿದ್ರೆ ರುಚಿ ಚೆನ್ನಾಗಿರುತ್ತೆ,ಆದ್ರೆ ಸಕ್ಕರೆ ಆರೋಗ್ಯಕ್ಕೆ ಅಷ್ಟೇನೂ ಒಳ್ಳೆಯದಲ್ಲ.ಲಿಂಬೆ ಹಣ್ಣಿನಲ್ಲಿ ವಿಟಮಿನ್‌ ಸಿ ಹೇರಳವಾಗಿರೋ ಕಾರಣ  ಈ ನೀರು ಕುಡಿಯೋದ್ರಿಂದ ದೇಹದ ರೋಗನಿರೋಧಕ ಶಕ್ತಿ ಕೂಡ ಹೆಚ್ಚುತ್ತೆ.

ಶುಂಠಿ 
ನೀವು ಶುಂಠಿ ಟೀ ಇಷ್ಟಪಡೋರಾಗಿದ್ರೆ ಅಥವಾ ಕುಡಿಯೋ ಅಭ್ಯಾಸ ಹೊಂದಿದ್ರೆ ಅದ್ರಿಂದಾಗೋ ಆರೋಗ್ಯ ಲಾಭಗಳ ಬಗ್ಗೆ ನಿಮ್ಗೆ ಗೊತ್ತೇ ಇರುತ್ತೆ. ಶುಂಠಿ ಶೀತ, ಕೆಮ್ಮುವನ್ನು ದೂರ ಮಾಡೋ ಜೊತೆ ಹಸಿವು ಹೆಚ್ಚಿಸಿ, ಪಚನ ಕ್ರಿಯೆಯನ್ನು ಉತ್ತಮಪಡಿಸುತ್ತೆ.ನೀವು ಶುಂಠಿ ಟೀ ಪ್ರಿಯರಾಗಿದ್ರೆ  ಶುಂಠಿ ನೀರು ಕೂಡ ನಿಮ್ಗೆ ಖಂಡಿತಾ ಇಷ್ಟವಾಗುತ್ತೆ. ಸೋ, ಶುಂಠಿ ಟೀ ಬದಲು ಶುಂಠಿ ನೀರು ಕುಡಿಯೋ ಅಭ್ಯಾಸ ರೂಢಿಸಿಕೊಳ್ಳಿ.ಬಿಸಿ ನೀರಿನಲ್ಲಿ ಸಣ್ಣಗೆ ಹಚ್ಚಿದ ಶುಂಠಿಯನ್ನು ಸ್ವಲ್ಪ ಹೊತ್ತು ನೆನೆಹಾಕಿ.ಬಾಯಾರಿದಾಗ ಈ ನೀರನ್ನು ಕುಡಿಯಿರಿ. ಶುಂಠಿ ಸುವಾಸನೆಯುಕ್ತ ನೀರು ನಿಮ್ಗೆ ಇಷ್ಟವಾಗೋ ಜೊತೆ ಆರೋಗ್ಯಕ್ಕೂ ಹಿತ ನೀಡುತ್ತೆ. 

ಜಾಸ್ತಿ ಕಿಸ್‌ ಮಾಡಿದ್ರೆ ನಿಮಗೆ ವಯಸ್ಸೇ ಆಗೊಲ್ಲ ಗೊತ್ತಾ?

ಪುದೀನಾ ಎಲೆಗಳು
ಪುದೀನಾ ಎಲೆಗಳನ್ನು ಬಿಸಿ ನೀರಿಗೆ ಹಾಕಿ ತಣ್ಣಗಾದ ಬಳಿಕ ಆ ನೀರನ್ನು ಕುಡಿಯಿರಿ.ಇದ್ರಿಂದ ನೀರು ಕುಡಿಯೋದು ನಿಮ್ಗೆ ಖಂಡಿತಾ ಬೋರ್‌ ಅನಿಸೋದಿಲ್ಲ.ಅಲ್ಲದೆ, ಪುದೀನಾ ನೀರನ್ನು ಕುಡಿಯುತ್ತಿದ್ರೆ ಮೈ ಮನಕ್ಕೆ ಉಲ್ಲಾಸ, ಉತ್ಸಾಹವಾಗೋದಂತೂ ಪಕ್ಕಾ.

ಸೌತೆಕಾಯಿ
ಸೌತೆಕಾಯಿ ಕತ್ತರಿಸಿ ಅದರ ತುಂಡುಗಳನ್ನು ನೀರಿಗೆ ಹಾಕಿ ಸ್ವಲ್ಪ ಸಮಯ ಬಿಡಬೇಕು. ಸೌತೆಕಾಯಿ ಮಿಶ್ರಿತ ನೀರಿನ ಪರಿಮಳ ಹಾಗೂ ರುಚಿ ಎರಡೂ ಹಿತವೆನಿಸೋದಷ್ಟೇ ಅಲ್ಲ ಇದು ಕ್ಯಾನ್ಸರ್‌ ನಿರೋಧಕವಾಗಿ ಕೆಲ್ಸ ಮಾಡುತ್ತೆ ಕೂಡ. ರಕ್ತದೊತ್ತಡ ನಿಯಂತ್ರಣ,ಕೊಲೆಸ್ಟ್ರಾಲ್‌ ಮಟ್ಟ ಕಡಿಮೆಯಾಗಲು ಕೂಡ ನೆರವು ನೀಡುತ್ತೆ.ಚರ್ಮ ಹಾಗೂ ಉಗುರಿನ ಆರೋಗ್ಯವನ್ನು ಉತ್ತಮಪಡಿಸುತ್ತೆ.

ಈ ಆಯುರ್ವೇದ ಪದ್ಧತಿಯಿಂದ ದೂರವಾಗುತ್ತೆ ಒತ್ತಡ!

ಕಿತ್ತಳೆ
ಕಿತ್ತಳೆ ಹಣ್ಣಿನ ಸಿಪ್ಪೆ ತೆಗೆದು ತೊಳೆಗಳಲ್ಲಿರೋ ಬೀಜವನ್ನು ಬೇರ್ಪಡಿಸಿ ಅವುಗಳನ್ನು ತಣ್ಣನೆಯ ನೀರಿನಲ್ಲಿ ಕೆಲವು ಗಂಟೆ ನೆನೆ ಹಾಕಿ, ಆ ಬಳಿಕ ಕುಡಿಯಿರಿ. ಇದ್ರಿಂದ ಬಾಯಾರಿಕೆ ನೀಗೋ ಜೊತೆಯಲ್ಲಿ ದೇಹಕ್ಕೆ ಅಗತ್ಯವಾದ ಕ್ಯಾಲ್ಸಿಯಂ, ಪೊಟ್ಯಾಸಿಯಂ, ವಿಟಮಿನ್‌  ಸಿ, ವಿಟಮಿನ್‌  ಬಿ ಕಾಂಪ್ಲೆಕ್ಸ್‌, ವಿಟಮಿನ್‌ ಎ ಹಾಗೂ ಆಂಟಿಆಕ್ಸಿಡೆಂಟ್‌ಗಳು ಕೂಡ ಲಭಿಸುತ್ತವೆ. 

click me!