Winterನಲ್ಲಿ ಸ್ನಾನ ಮಾಡುವಾಗ ಹೀಗ್ ಮಾಡಿದ್ರೆ ಪ್ರಾಣ ಪಕ್ಷಿಯೇ ಹಾರಿ ಹೋಗಬಹುದು!

Published : Nov 19, 2022, 02:30 PM IST
Winterನಲ್ಲಿ ಸ್ನಾನ ಮಾಡುವಾಗ ಹೀಗ್ ಮಾಡಿದ್ರೆ ಪ್ರಾಣ ಪಕ್ಷಿಯೇ ಹಾರಿ ಹೋಗಬಹುದು!

ಸಾರಾಂಶ

ಚಳಿಯಲ್ಲಿ ಸ್ನಾನ ಮಾಡೋದು ಕಷ್ಟ. ಹಾಗಾಗಿ ಬಹುತೇಕರು ಬಿಸಿ ಬಿಸಿ ನೀರಿನಲ್ಲಿ ಸ್ನಾನ ಮಾಡ್ತಾರೆ. ಮತ್ತೆ ಕೆಲವರು ತಣ್ಣನೆ ನೀರಿನಲ್ಲಿ ಸ್ನಾನ ಮಾಡ್ತಾರೆ. ಅತಿ ಬಿಸಿ ಹಾಗೂ ಅತಿ ಕೋಲ್ಡ್ ನೀರು ಆರೋಗ್ಯಕ್ಕೆ ಒಳ್ಳೆಯದಲ್ಲ. ಚಳಿಗಾಲದಲ್ಲಿ ಸ್ನಾನದ ನೀರು ಹೇಗಿರಬೇಕು ಗೊತ್ತಾ?  

ಮೈಕೊರೆಯುವ ಚಳಿ ಶುರುವಾಗ್ತಿದೆ. ಬೆಳಿಗ್ಗೆ ಬೇಗ ಏಳೋದು ಕಷ್ಟ, ತಣ್ಣಗಿನ ಆಹಾರ ಸೇವನೆ ಮಾಡಲು ಈ ಚಳಿಯಲ್ಲಿ ಸಾಧ್ಯವಿಲ್ಲ. ಹಾಗಾಗಿ ಜೀವನ ಶೈಲಿಯಲ್ಲಿ ಬದಲಾವಣೆಯಾಗುತ್ತದೆ. ಚಳಿಗಾಲದಲ್ಲಿ ನಾವು ಸೇವಿಸುವ ಆಹಾರದಿಂದ ಹಿಡಿದು ನಮ್ಮ ದಿನಚರಿಯವರೆಗೆ ಎಲ್ಲದರ ಬಗ್ಗೆ ಗಮನಹರಿಸಬೇಕು. ಈ ಚಳಿಯಲ್ಲಿ ನಮ್ಮ ಆರೋಗ್ಯ ಬಗ್ಗೆ ಹೆಚ್ಚುವರಿ ಕಾಳಜಿವಹಿಸಬೇಕಾಗುತ್ತದೆ.  

ನೀವು ಸಂಪೂರ್ಣ ಆರೋಗ್ಯ (Health) ವಂತರಾಗಿದ್ದರೂ ನಿರ್ಲಕ್ಷ್ಯ ಸಲ್ಲದು ಎನ್ನುತ್ತಾರೆ ಆರೋಗ್ಯ ತಜ್ಞರು. ಚಳಿಗಾಲ (Winter) ದಲ್ಲಿ ಸ್ವಲ್ಪ ಯಾಮಾರಿದ್ರೂ ಹಲವಾರು ಸಮಸ್ಯೆ ಕಾಡುತ್ತದೆ. ಚಳಿಗಾಲದಲ್ಲಿ ನಾವು ಯಾವ ನೀರಿನಲ್ಲಿ ಸ್ನಾನ (Bath) ಮಾಡುತ್ತೇವೆ ಎಂಬುದು ಕೂಡ ಮುಖ್ಯವಾಗುತ್ತದೆ. ಅನೇಕರು ಚಳಿಗಾಲದಲ್ಲಿ ಸ್ನಾನ ಮಾಡಲು ಹಿಂದೇಟು ಹಾಕುತ್ತಾರೆ. ಸ್ನಾನ ಮಾಡದೆ ಇರುವುದು ಒಳ್ಳೆಯದಲ್ಲ. ಹಾಗೆಯೇ ಈ ಋತುವಿನಲ್ಲಿ ತಣ್ಣೀರಿನಲ್ಲಿ ಸ್ನಾನ ಮಾಡುವವರಿದ್ದಾರೆ. ಕೆಲವರು ತಣ್ಣೀರು ಸ್ನಾನ ಅಭ್ಯಾಸವಾಗಿದೆ ಎನ್ನುವ ಕಾರಣಕ್ಕೆ ಅದರಲ್ಲೇ ಸ್ನಾನ ಮಾಡ್ತಾರೆ. ಮತ್ತೆ ಕೆಲವರು ಪೂಜೆ, ವೃತದ ಹೆಸರಿನಲ್ಲಿ ತಣ್ಣೀರು ಸ್ನಾನ ಅಥವಾ ನದಿ (River)ಯಲ್ಲಿ ಸ್ನಾನ ಮಾಡುತ್ತಾರೆ. ಆದ್ರೆ ತಣ್ಣೀರಿನಲ್ಲಿ ಸ್ನಾನ ಮಾಡುವುದು ಮಾರಣಾಂತಿಕ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ಅಧ್ಯಯನ (Study) ಗಳು ಕಂಡು ಹಿಡಿದಿವೆ. ತಣ್ಣ ನೀರಿನ ಸ್ನಾನ ಅನೇಕರ ಪ್ರಾಣ ತೆಗೆದಿದೆ. ಚಳಿಗಾಲದಲ್ಲಿ ತುಂಬಾ ತಣ್ಣನೆ ಅಥವಾ ತುಂಬಾ ಬಿಸಿ ನೀರಿನಲ್ಲಿ ಸ್ನಾನ ಮಾಡುವುದು ಹಾನಿಕರ. ಇದ್ರಿಂದ ಯಾವೆಲ್ಲ ಸಮಸ್ಯೆ ಕಾಡುತ್ತದೆ ಎಂಬುದನ್ನು ನಾವು ಹೇಳ್ತೆವೆ.

ತಣ್ಣನೆಯ ನೀರಿನಲ್ಲಿ ಸ್ನಾನ ಮಾಡಿದ್ರೆ ಕಾಡುತ್ತೆ ಪಾರ್ಶ್ವವಾಯು (Paralysis) : ಚಳಿಗಾಲದಲ್ಲಿ ತಣ್ಣನೆಯ ನೀರಿನಲ್ಲಿ ಸ್ನಾನ ಮಾಡುವುದರಿಂದ ಹಲವಾರು ರೀತಿಯ ಅಪಾಯಗಳು ಎದುರಾಗುತ್ತವೆ. ತಣ್ಣನೆಯ ನೀರಿನಲ್ಲಿ ಸ್ನಾನ ಮಾಡಿದ 68 ವರ್ಷದ ವ್ಯಕ್ತಿ ಪಾರ್ಶ್ವವಾಯುವಿಗೆ ಒಳಗಾದ ಉದಾಹರಣೆಯಿದೆ.  ಡಾ.ಸುಧೀರ್ ಎಂಬುವವರು ಟ್ವಿಟರ್ ನಲ್ಲಿ ರೋಗಿಯ ಬಗ್ಗೆ ಮಾಹಿತಿ ನೀಡಿದ್ದಾರೆ. ಆ ವ್ಯಕ್ತಿ ನದಿಯಲ್ಲಿ ಸ್ನಾನ ಮಾಡಿದ್ದನಂತೆ. ಘಟನೆ ನಡೆದ  26 ಗಂಟೆಗಳ ಕಾಲ ಮಾತನಾಡಲು ಸಾಧ್ಯವಾಗಿರಲಿಲ್ಲವಂತೆ. ಎಂಆರ್ ಐ ಪರೀಕ್ಷೆಯ ಆಧಾರದ ಮೇಲೆ ಇಸ್ಕೆಮಿಕ್ ಸ್ಟ್ರೋಕ್ ಪತ್ತೆಯಾಗಿತ್ತಂತೆ. 

ಚಳೀಲಿ ಮಲಬದ್ಧತೆ ಕಾಡೋದು ಕಾಮನ್, ಬಾಳೆ ಹಣ್ಣು ತಿಂದು ಆರೋಗ್ಯ ನೋಡ್ಕಳ್ಳಿ

ಈ ಋತುವಿನಲ್ಲಿ ತಣ್ಣೀರಿನಿಂದ ಸ್ನಾನ ಮಾಡುವುದರಿಂದ ಹೃದಯಾಘಾತದ ಅಪಾಯವೂ ಹೆಚ್ಚಾಗುತ್ತದೆ. ತಣ್ಣೀರಿಗೆ ಹಠಾತ್ ಒಡ್ಡಿಕೊಳ್ಳುವುದರಿಂದ ಮಯೋಕಾರ್ಡಿಯಲ್ ಇನ್ಫಾರ್ಕ್ಷನ್ ನಂತಹ ಪರಿಸ್ಥಿತಿ ಕಾಡುತ್ತದೆ. ಚಳಿಗಾಲದಲ್ಲಿ ಹೆಚ್ಚು ಬಿಸಿ ಇರುವ ನೀರಿನಲ್ಲಿ ಸ್ನಾನ ಮಾಡುವುದು ಕೂಡ ಒಳ್ಳೆಯದಲ್ಲ.  ಬಿಸಿ ನೀರಿನಲ್ಲಿ ಸ್ನಾನ ಮಾಡುವುದ್ರಿಂದ ಗಂಭೀರ ಸಮಸ್ಯೆ ಉಂಟಾಗುತ್ತದೆ. ಅತಿಯಾದ ಬಿಸಿ ನೀರು ದೇಹಕ್ಕೆ ತಾಗಿದಾಗ ಚರ್ಮದಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಶುಷ್ಕತೆ, ತುರಿಕೆ ಮುಂತಾದ ಚರ್ಮದ ಕಾಯಿಲೆಗೆ ಇದು ಕಾರಣವಾಗಬಹುದು. 

ಯೋನಿಯ ಆರೋಗ್ಯಕ್ಕೆ ಸಂಬಂಧಿಸಿದ ಈ ತಪ್ಪು ಮಾಡ್ಬೇಡಿ

ಚಳಿಗಾಲದಲ್ಲಿ ಸ್ನಾನಕ್ಕೆ ಬಳಸಿ ಈ ನೀರು : ಸ್ನಾನಕ್ಕೆ ಯಾವಾಗಲೂ ಉಗುರುಬೆಚ್ಚನೆಯ ನೀರನ್ನು ಬಳಸಿ. ನೀರಿನ ತಾಪಮಾನ (Water Temperature) ತುಂಬಾ ಹೆಚ್ಚು ಅಥವಾ ಕಡಿಮೆ ಇರಬಾರದು.  ಸ್ನಾನ ಮಾಡುವಾಗ ಈ ಎಚ್ಚರಿಕೆ ತೆಗೆದುಕೊಳ್ಳಿ : ತಣ್ಣನೆಯ ವಾತಾವರಣದಲ್ಲಿ ಅಥವಾ ಚಳಿಗಾಲದಲ್ಲಿ ಸ್ನಾನ ಮಾಡಲು ಶವರ್ ಬಳಸಬೇಡಿ. ಬಕೆಟ್‌ನಲ್ಲಿ ಉಗುರುಬೆಚ್ಚನೆಯ ನೀರನ್ನು ತೆಗೆದುಕೊಂಡು ಸ್ನಾನ ಮಾಡಿ. ದೇಹಕ್ಕೆ ನೀರನ್ನು ಹಾಕಿಕೊಳ್ಳುವ ಮೊದಲು ಕಾಲುಗಳ ಮೇಲೆ ನೀರನ್ನು ಹಾಕಿಕೊಳ್ಳಿ. ಇದರಿಂದ ನೀರಿನ ತಾಪಮಾನದ ಸೂಚನೆ ಮೆದುಳಿಗೆ ತಲುಪುತ್ತದೆ. ಅದರ ಆಧಾರದ ಮೇಲೆ ದೇಹದ ಉಷ್ಣತೆಯನ್ನು ಮೆದುಳು ನಿಯಂತ್ರಿಸುತ್ತದೆ. ಚಳಿಗಾಲದಲ್ಲಿ ನದಿ ಅಥವಾ ಈಜುಕೊಳದಲ್ಲಿ ಸ್ನಾನ ಮಾಡಬೇಡಿ. ಅಧಿಕ ರಕ್ತದೊತ್ತಡ ಹೊಂದಿದ್ದರೆ ಈ ಮುನ್ನೆಚ್ಚರಿಕೆಗಳನ್ನು ಹೆಚ್ಚು ಗಂಭೀರವಾಗಿ ತೆಗೆದುಕೊಳ್ಳುವುದು ಒಳ್ಳೆಯದು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Foods that Block Arteries: ನೀವು ಪ್ರತಿದಿನ ಸೇವಿಸೋ ಈ ಆಹಾರಗಳೇ ಹೃದಯಾಘಾತಕ್ಕೆ ಕಾರಣವಾಗಬಹುದು ಎಚ್ಚರ
ಕೆಲ್ಸ ಮಾಡೋವಾಗ ಮಾತ್ರವಲ್ಲ ರಜೆಯಲ್ಲೂ ಕಾಡುತ್ತೆ ಖಿನ್ನತೆ, ಹಾಲಿಡೇ ಡಿಪ್ರೆಷನ್ ಅಂದ್ರೇನು?