ಈ ಹಣ್ಣು ಪೂರ್ವ ಭಾರತದಲ್ಲಿ ಹುಟ್ಟಿಕೊಂಡಿದೆ ಎಂದು ನಂಬಲಾಗಿದೆ. ಮತ್ತು ಆ ರಾಷ್ಟ್ರವು ಶತಮಾನಗಳಿಂದ ಹಣ್ಣನ್ನು ಸ್ವೀಕರಿಸಿದೆ. ಲೈಂಗಿಕ ಆಸಕ್ತಿ ಹೆಚ್ಚಿಸೋ ಆ ಹಣ್ಣು ಯಾವುದು?
ಹಿಂದಿನ ಯಾರೋ ಒಬ್ಬ ಸಂಸ್ಕೃತ ಕವಿ ಮಾವಿನಹಣ್ಣುಗಳನ್ನು 'ಸ್ವರ್ಗದ ಜೇನುತುಪ್ಪದ ಕೊಡಗಳು' ಎಂದು ಕರೆದ. ಅವನಿಗೆ ಅದರಿಂದ ಸ್ವರ್ಗಾನುಭವವೇ ಆಗಿರಬೇಕು. ಯಾಕೆಂದರೆ ಹಿಂದಿನ ಕಾಲದಿಂದಲೂ, ಇಂದಿಗೂ ಪುರುಷರಲ್ಲಿ ಕಾಮಾಸಕ್ತಿ ಮತ್ತು ಲೈಂಗಿಕ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಮಾವಿನ 'ಚಿಕಿತ್ಸೆ'ಯನ್ನು ಸೂಚಿಸಲಾಗುತ್ತದೆ. ಈ ಹಣ್ಣು ಲೈಂಗಿಕ ಆಸಕ್ತಿಯನ್ನು ವೃದ್ಧಿಸೋದರ ಜೊತೆಗೆ ಜೀವನಾಸಕ್ತಿಯನ್ನೂ ಚೆನ್ನಾಗಿರಿಸುತ್ತದೆ. ಈ ಹಣ್ಣು ಲೈಂಗಿಕ ಆಸಕ್ತಿ ಹೆಚ್ಚಿಸುತ್ತದೆ ಅನ್ನೋದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ.
ಆಗ್ನೇಯ ಏಷ್ಯಾದ ತುಂಬಾ ಮಾದಕ ಮಾವಿನ ಹಣ್ಣಿನ ಮ್ಯಾಜಿಕ್ ಬಗ್ಗೆ ಉಲ್ಲೇಖಗಳಿವೆ. ಇಲ್ಲಿ ಮಾತ್ರವಲ್ಲ, ಕೆರಿಬಿಯನ್ ಭಾಗದಲ್ಲೂ ರಸಭರಿತ ಮಾವಿನ ಹಣ್ಣನ್ನು ಹೆಣ್ಣಿನ ಸ್ತನಗಳಿಗೆ ಹೋಲಿಸಿ ಸ್ತುತಿಸಲಾಗುತ್ತದೆ. ಮಾವಿನಹಣ್ಣು ತಿನ್ನುವುದರಿಂದ ಆಗುವ ಲೈಂಗಿಕ ಪ್ರಯೋಜನಗಳನ್ನು ಇಲ್ಲಿ ನೋಡೋಣ ಬನ್ನಿ. ಪೌಷ್ಟಿಕಾಂಶದ ದೃಷ್ಟಿಕೋನದಿಂದ, ಮಾವಿನಹಣ್ಣುಗಳು ವಿಟಮಿನ್ ಎ ಮತ್ತು ಸಿಯ ಉತ್ತಮ ಮೂಲ. ಈ ಜೀವಸತ್ವಗಳು ನೇರವಾಗಿ ಲೈಂಗಿಕ ಹಾರ್ಮೋನ್ ಮಟ್ಟವನ್ನು ಹೆಚ್ಚಿಸುವುದಿಲ್ಲ, ಆದರೆ ನಿಮ್ಮ ಲೈಂಗಿಕ ಜೀವನಕ್ಕೆ ಇವೆರಡೂ ಪ್ರಮುಖ.
undefined
ಕೊಬ್ಬಿನಲ್ಲಿ ಕರಗುವ ವಿಟಮಿನ್ ಎ (Vitamin A) ನಿಮ್ಮ ಲೈಂಗಿಕ ಅಂಗಗಳ (Sexual Organs) ಸಾಮಾನ್ಯ ಕಾರ್ಯನಿರ್ವಹಣೆಗೆ ಅವಶ್ಯಕ. ಸಾಕಷ್ಟು ಪ್ರಮಾಣದ ಕೊಬ್ಬಿನಲ್ಲಿ ಕರಗುವ ಜೀವಸತ್ವಗಳಿಲ್ಲದೆ (Nutrients) ನೀವು ಲೈಂಗಿಕ ಹಾರ್ಮೋನುಗಳನ್ನು (Sexual Hormones) ಉತ್ಪಾದಿಸಲು ಸಾಧ್ಯವಿಲ್ಲ. ವಿಟಮಿನ್ ಎ ದೃಷ್ಟಿಗೆ ಒಳ್ಳೆಯದು, ವಿಶೇಷವಾಗಿ ರಾತ್ರಿ ದೃಷ್ಟಿ (Night Vision). ಇದು ರೋಮ್ಯಾಂಟಿಕ್ ಮೂಡ್ (Romantic Mood) ಲೈಟಿಂಗ್ ಅಡಿಯಲ್ಲಿ ನಿಮ್ಮನ್ನು ಚುರುಕಾಗಿಸುತ್ತದೆ!
ಮ್ಯಾಂಗೋ ಸೀಸನ್ ಶುರು, ಡಯಾಬಿಟಿಸ್ ಇರೋರು ಮಾವಿನ ಹಣ್ಣು ತಿನ್ಬೋದಾ?
ವಿಟಮಿನ್ ಸಿ ವಯಸ್ಸಾಗುವುರದ (Aging) ವಿರುದ್ಧದ ಹೋರಾಟದಲ್ಲಿ ಪ್ರಯೋಜನಕಾರಿ. ವಿಟಮಿನ್ ಸಿ ರಕ್ತದೊತ್ತಡ (Blood Pressure) ಕಡಿಮೆ ಮಾಡುತ್ತದೆ ಮತ್ತು ನಿಮ್ಮ ಲೈಂಗಿಕ ಅಂಗಗಳಿಗೆ ಆರೋಗ್ಯಕರ ರಕ್ತದ ಹರಿವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಮಾವು ಮೆಗ್ನೀಸಿಯಮ್ (Magnesium), ಪೊಟ್ಯಾಸಿಯಮ್ (Potassium) ಮತ್ತು ಮ್ಯಾಂಗನೀಸ್ (Manganese) ಸೇರಿದಂತೆ ಲೈಂಗಿಕ ಆರೋಗ್ಯಕ್ಕೆ (Sexual Health) ಸಂಬಂಧಿಸಿದ ಹಲವಾರು ಖನಿಜಗಳ ಮೂಲ. ಪೊಟ್ಯಾಸಿಯಮ್ ಮತ್ತು ಮ್ಯಾಂಗನೀಸ್ ಅಂಶ ಪುರುಷರಿಗೆ ಉತ್ತಮ. ಮ್ಯಾಂಗನೀಸ್ ಸೆಕ್ಸ್ ಡ್ರೈವ್‌ಗೆ ಪ್ರಮುಖ ಪೋಷಕಾಂಶ.
ಮಹಿಳೆಯರಿಗೂ ಪ್ರಯೋಜನವಿದೆ!
ನೀವು ಗರ್ಭಿಣಿಯಾಗಲು ಬಯಸುತ್ತಿದ್ದರೆ, ಮಾವಿನ ಸೇವನೆಯನ್ನು ಹೆಚ್ಚಿಸಬಹುದು. ಏಕೆಂದರೆ ಒಂದು ಮಾವಿನಹಣ್ಣಿನ ಸೇವನೆಯಿಂದ ನಿಮ್ಮ ದೈನಂದಿನ ಫೋಲೇಟ್ ಇನ್‌ಟೇಕ್ 18% ಹೆಚ್ಚುತ್ತದೆ. ಫೋಲೇಟ್ ಗರ್ಭ ನಿಲ್ಲಲು ಸಹಾಯಕ.
ನಿಮ್ಮ ಲೈಂಗಿಕ ಜೀವನಕ್ಕೆ ನೇರವಾಗಿ ಸಹಾಯ ಮಾಡುವ ಮತ್ತೊಂದು ಪ್ರಮುಖ ಪೋಷಕಾಂಶ ವಿಟಮಿನ್ ಇ. ಇದು ಪುರುಷತ್ವಕ್ಕೆ ಪ್ರಮುಖ, ಇದನ್ನು ಲೈಂಗಿಕ ವಿಟಮಿನ್ ಎಂದೂ ಕರೆಯಲಾಗುತ್ತದೆ. ಒಂದು ಕಪ್ ಮಾವಿನ ಹಣ್ಣು ನಿಮ್ಮ ದೈನಂದಿನ ವಿಟಮಿನ್ ಇ ಸೇವನೆಯ ಸುಮಾರು 9% ಅನ್ನು ಕೊಡುತ್ತದೆ.
Health Tips : ಮರೆತೂ ಕೂಡ ಮಾವಿನ ಹಣ್ಣಿನ ಜೊತೆ ಇವನ್ನು ತಿನ್ನಬೇಡಿ
2009ರ ಫುಡ್ ಕೆಮಿಸ್ಟ್ರಿ(Food chemistry) ಮ್ಯಾಗಜಿನ್‌ನ ಒಂದು ವರದಿಯ ಪ್ರಕಾರ, ಮಾವು ಫೈಟೊಈಸ್ಟ್ರೊಜೆನ್‌ಗಳನ್ನು ಹೊಂದಿದೆ. ಇವು ಈಸ್ಟ್ರೊಜೆನ್ ಹಾರ್ಮೋನ್‌ನ(hormone) ಸಂಯುಕ್ತಗಳು. ಮಹಿಳೆಯರು ಮತ್ತು ಪುರುಷರಿಬ್ಬರ ಕಾಮಾಸಕ್ತಿಯನ್ನು ಸಮರ್ಥವಾಗಿ ಉತ್ತೇಜಿಸುತ್ತವೆ ಇವು.
ಮಾವಿನ ಹಣ್ಣು ಮಾತ್ರವಲ್ಲ, ಎಲೆಗಳೂ ಪ್ರಯೋಜನಕಾರಿ. ಎಲೆಗಳು ಪಾಲಿಫಿನಾಲ್‌ಗಳಲ್ಲಿ ಸಮೃದ್ಧ. ಇದು ಉರಿಯೂತ ಕಡಿಮೆ ಮಾಡುವಂಥವು. ಸಂತಾನೋತ್ಪತ್ತಿ ಆರೋಗ್ಯದೊಂದಿಗೆ ಸಂಬಂಧ ಹೊಂದಿವೆ. ಇದರಲ್ಲಿರುವ ಮ್ಯಾಂಜಿಫೆರಿನ್, ಹೃದಯದ ಆರೋಗ್ಯದೊಂದಿಗೆ ಸಂಬಂಧ ಹೊಂದಿದೆ. ಹೃದಯಕ್ಕೂ ಲೈಂಗಿಕ(Sexual) ಆರೋಗ್ಯಕ್ಕೂ ನೇರ ಸಂಬಂಧವಿದೆ.